Article - VNA257

31-01-2018 ಚಂದ್ರಗ್ರಹಣದ ಆಚರಣೆ

30/01/2018


Download Article Share to facebook View Comments5487 Views

Comments

(You can only view comments here. If you want to write a comment please download the app.)
 • Gururaj Rao,Bengaluru

  10:47 PM, 01/02/2018

  ಗುರುಗಳೇ, ನಿಮ್ಮ ಅನುಗ್ರಹದಿಂದ ನಿನ್ನೆ ಮನೆಯಲ್ಲಿ ಎಲ್ಲರೂ ಗ್ರಹಣ ಆಚರಣೆ ಮಾಡಿದೆವು. ಮಕ್ಕಳು ಹೇಳಿಸಿಕೊಳ್ಳದೆ ಅವರೇ ಸ್ಪರ್ಶ ಹಾಗು ಮೋಕ್ಷ ಸ್ನಾನಗಳನ್ನು ಮಾಡುತ್ತೇ ವೆ ಎಂದರು. ತಣ್ಣೀರಿನಲ್ಲಿಯೇ ಮಾಡಿದರು. ಆಶ್ಚರ್ಯವಾಯಿತು. 82 ವಯಸ್ಸಿನ ಅಮ್ಮನಿಂದ ಹಿಡಿದು 7 ವಯಸ್ಸಿನ ಮಗನ ತನಕ ಎಲ್ಲರೂ. ದೇವರೇ ಮನೆಯಲ್ಲಿ ನಿಂತು ಪ್ರತಿಯೊಬ್ಬರ ಕೈಯಲ್ಲೂ ಮಾಡಿಸಿದಂತೆ.
  
  ಒಂದು ಅನುಭವ -
  ನಾನು ಗ್ರಹಣ ಕಾಲದಲ್ಲಿ ಈ ಕೆಳಗಿನವುಗಳನ್ನು ಮಾಡಬೇಕೆಂದುಕೊಂಡಿದ್ದೆ.
  ದೇವರಿಗೆ ಅಭಿಷೇಕ.
  ನಂತರ ವಿಷ್ಣುಸಹಸ್ರನಾಮ, ದ್ವಾದಶಸ್ತೋತ್ರ, ಲಕ್ಷೀಸ್ತೋತ್ರ, ವಾಯುಸ್ತುತಿ ಪಾರಾಯಣ.
  ನಂತರ ದಿಗ್ದೇವತೆಗಳ ಪ್ರಾರ್ಥನೆ.
  ನಂತರ ಭಜನೆ - ಒಂದು ತಾರತಮ್ಯದ್ದು, ಒಂದು ವಾಯದೇವರದ್ದು, ಒಂದು ಲಕ್ಷೀದೇವಿಯರದ್ದು, ಒಂದು ದೇವರದ್ದು.
  
  ಪಾರಾಯಣ ಮಾಡಿದೆ. ದಿಗ್ದೇವತೆಗಳ ಪ್ರಾರ್ಥನೆ ನಾನು ಮಾಡಿ ಮನೆಯವರೆಲ್ಲರ ಕೈಯಲ್ಲೂ ಮಾಡಿಸಿದೆ (ನಿಮ್ಮ ಲೇಖನ ಓದುತ್ತಾ ಅರ್ಥ ಸಹಿತ ಮಾಡಿಸಿದೆ). ನಂತರ ತಾರತಮ್ಯದ ಭಜನೆ ಮಾಡುವ ಹೊತ್ತಿಗೆ 8:45 ಆಯಿತು. ನಾನು ಚಂದ್ರದರ್ಶನ ಮಾಡಿ ಮೋಕ್ಷಸ್ನಾನಕ್ಕೆ ತಯಾರಾಗುತ್ತಿದ್ದೆ. ಆಗ ಯಾವತ್ತೂ ಆ ಸಮಯಕ್ಕೆ ಹೋಗದ ಕರೆಂಟ್‌ ಹೋಯಿತು. ನನಗೆ ಮಡಿಸ್ನಾನಕ್ಕೆ ಬೋರ್ವೆಲ್‌ ಮೋಟರ on ಮಾಡದ ಹಾಗಾಯಿತು. 5-10 ನಿಮಿಷ ಕಾದೆ. ಕರೆಂಟ್‌ ಬರಲಿಲ್ಲ. ಆಮೇಲೆ ಅನಿಸಿತು ನಾನು ಅಂದುಕೊಂಡಿದ್ದು ಸಂಪೂರ್ಣ ಮಾಡಿಲ್ಲ ಎಂದು. ಪುನಃ ದೇವರಮನೆ ಮುಂದೆ ಕುಳಿತುಕೊಂಡು ವಾಯದೇವರದ್ದು, ಲಕ್ಷೀದೇವಿಯರದ್ದು ಮತ್ತು ದೇವರದ್ದು ಒಂದೊಂದು ಹಾಡು ಹೇಳಿದೆ. ಅದಾದ ಐದು ನಿಮಿಷದೊಳಗೆ ಕರೆಂಟ್‌ ಬಂತು.
  
  ಇದನ್ನು ಮೆಲುಕು ಹಾಕುತ್ತಾ ನಿಮ್ಮೊಂದಿಗೆ ಹಂಚಿಕೊಳ್ಳಲು ಟೈಪ್‌ ಮಾಡುತ್ತಿದ್ದರೆ ಕಣ್ಣು ತುಂಬಿ ಬರುತ್ತಿದೆ. ನಮ್ಮನ್ನು ಈ ದಾರಿಯಲ್ಲಿ ನಡೆಸುತ್ತಿರುವ ನಿಮಗೆ ಅನಂತಾನಂತ ನಮನಗಳು.

  Vishnudasa Nagendracharya

  ವಿಶ್ವನಂದಿನಿಯ ಲೇಖನ ಉಪನ್ಯಾಸಗಳು ಸಜ್ಜನರ ಮೇಲೆ ಮಾಡುತ್ತಿರುವ ಪರಿಣಾಮವನ್ನು ಕಂಡು ಕಣ್ ತುಂಬಿ ಬರುತ್ತಿದೆ. 
  
  ನಿಜವಾಗಿಯೂ ವಿಶ್ವನಂದಿನಿಯ ಬಾಂಧವರಿಗೆ ನಾನು ಕೃತಜ್ಞ. ಕಾರಣ ನೀವುಗಳು ಎಷ್ಟು ಪ್ರಶ್ನೆ ಕೇಳುತ್ತೀರೋ ಅಷ್ಟು ನನ್ನ ಜ್ಞಾನಾಭಿವೃದ್ಧಿಗೆ ಕಾರಣವಾಗುತ್ತದೆ. 
  
  ಪ್ರಶ್ನೆಗೆ ಉತ್ತರ ನೀಡಬೇಕೆಂದರೆ ಅಧ್ಯಯನ ಸಂಶೋಧನೆ ಮಾಡಬೇಕು. ಅಧ್ಯಯನ ಸಂಶೋಧನೆ ಮಾಡಿದಷ್ಟೂ ಹೊಸಹೊಸ ವಿಷಯಗಳು ತಿಳಿಯುತ್ತವೆ. ತಿಳಿದ ಜ್ಞಾನ ಸ್ಪಷ್ಟವಾಗುತ್ತದೆ. 
  
  ನಿಮ್ಮ ಅನುಭವವನ್ನು ಕೇಳಿ ಸಂತೋಷವಾಯಿತು. ಧರ್ಮದ ಆಚರಣೆಯನ್ನು ಮಾಡಬೇಕಾದರೆ “ನಾನು ಪ್ರೀತನಾಗುತ್ತಿದ್ದೇನೆ” ಎಂದು ದೇವರು ಹತ್ತಾರು ರೀತಿಯಲ್ಲಿ ನಮಗೆ ತಿಳಿಸುತ್ತಿರುತ್ತಾನೆ. ಅದು ನಮಗರ್ಥವಾದಾಗ ತುಂಬ ಸಂತೋಷವಾಗುತ್ತದೆ. 
  
  ಆ ಸಮಯಕ್ಕೇ ಕರೆಂಟು ಹೋಗಬೇಕು, ಆಗ ನಿಮಗೆ ಏನು ಬಿಟ್ಟಿದ್ದೇನೆ ಎಂಬ ಆಲೋಚನೆ ಮೂಡಬೇಕು, ಹೊಳದ ತಕ್ಷಣ ಅದನ್ನು ಅನುಷ್ಠಾನಕ್ಕೆ ತರಬೇಕು, ಸ್ತೋತ್ರ ಹೇಳುತ್ತಿದ್ದಂತೆ ಕರೆಂಟು ಬರಬೇಕು. ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ತೋರಿದರೂ ಖಂಡಿತ ಆಕಸ್ಮಿಕವಲ್ಲ. ಕಾರಣ ಜಗತ್ತಿನ ಎಲ್ಲ ಆಗುಹೋಗುಗಳೂ ಶ್ರೀಹರಿಯ ಅಧೀನ. ಈ ಸಂದರ್ಭದ ಮುಖಾಂತರ ಸ್ತೋತ್ರವನ್ನು ಹೇಳಿಸಿ ನಿಮಗೆ ಮಹತ್ತರ ಪುಣ್ಯವನ್ನು ದಯಪಾಲಿಸಿದ. 
  
  ಇದೇ ರೀತಿ ಧರ್ಮಾನುಷ್ಠಾನ ನಿಮ್ಮೆಲ್ಲರಿಂದ ನಡೆಯುತ್ತಿರಲಿ ಎಂದು ಹರಿವಾಯುದೇವತಾಗುರುಗಳನ್ನು ಪ್ರಾರ್ಥಿಸುತ್ತೇನೆ. 
  
  ಶುಭವಾಗಲಿ. 
  
 • P.R.SUBBA RAO,BANGALORE

  6:17 PM , 31/01/2018

  ಶ್ರಿಗುರುಭ್ಯೋನಮಃ
  ಬಹಳ ಧನ್ಯವಾದಗಳು ಮತ್ತು ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ
  ಸುಬ್ಬರಾವ್
 • Manjunath,Bangalore

  4:34 PM , 31/01/2018

  Acharyare grahanavannu mathu nadeyuva vismayavannu veekshisabahude
 • Raghavendra,Bengaluru

  2:33 PM , 31/01/2018

  Whether to put Dharbhe on all cloths, Pl clarify
  We are very much thankful for the guidance giving to us in doing small sadhane
 • K Anil,Bangalore

  2:03 PM , 31/01/2018

  Grahanada moksha snanada nanthara janivara badalayisa beke? Maneyella saarisi shudda gilisa beke?

  Vishnudasa Nagendracharya

  ಗ್ರಹಣದ ನಂತರ ಜನಿವಾರ ಬದಲಾಯಿಸಬೇಕಾಗಿಲ್ಲ. 
  
  ಮನೆಯನ್ನು ಶುದ್ಧಗೊಳಿಸಬೇಕು. 
 • H Sudheendra,Bangaluru

  12:19 PM, 31/01/2018

  ಗ್ರಹಣದ ನಿಮಿತ್ತ ತರ್ಪಣಕ್ಕೆ ನಿರ್ಮಾಲ್ಯತೀರ್ಥ ಯಾವಾಗ ಮಾಡಿಕೊಳ್ಳ ಬೇಕು ಆಚರ್ಯರೆ ದಯವಿಟ್ಟು ತಿಳಿಸಿ.

  Vishnudasa Nagendracharya

  ಗ್ರಹಣಕಾಲದಲ್ಲಿ ತರ್ಪಣ ನೀಡಲು ನಿರ್ಮಾಲ್ಯ ತೀರ್ಥ ಬಳಸಬೇಕು. 
  
  ಗ್ರಹಣವಾಗುತ್ತಿದ್ದಂತೆ ಸ್ನಾನ ಮಾಡಿ, ಸಾಲಿಗ್ರಾಮ ಪ್ರತಿಮೆಗಳಿಗೇನು ಅಭಿಷೇಕ ಮಾಡುತ್ತೇವೆ ಆ ತೀರ್ಥದಿಂದಲೇ ತರ್ಪಣ ನೀಡುವದು ಉತ್ತಮ. 
  
  ಗ್ರಹಣದ ಸಮಯ ತುಂಬ ಕಡಿಮೆಯಿದ್ದು, ಅಥವಾ ಅಶಕ್ತಿಯಿಂದ, ಅನಿವಾರ್ಯತೆಯಿಂದ ಅಭಿಷೇಕವನ್ನು ಗ್ರಹಣದ ಕಾಲದಲ್ಲಿ ಮಾಡಿಕೊಳ್ಳಲು ಸಾಧ್ಯವಿಲ್ಲದೇ ಇದ್ದರೆ ಬೆಳಿಗ್ಗೆ ಮಾಡಿದ ನಿರ್ಮಾಲ್ಯತೀರ್ಥದಿಂದ ತರ್ಪಣ ನೀಡಬಹುದು. 
  
  ಬೆಳಗಿನ ಜಾವವೇ ಗ್ರಹಣವಿದ್ದಾಗ ಅದೂ ಸಾಧ್ಯವಾಗುವದಿಲ್ಲ. ಅಭಿಷೇಕವೂ ಮಾಡಲು ಸಾಧ್ಯವಿಲ್ಲದೇ ಇದ್ದಾಗ ಶುದ್ಧ ಜಲದಿಂದ, ಅಥವಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರೆ ನದಿಯ ನೀರಿನಿಂದಲೇ ತರ್ಪಣವನ್ನು ನೀಡಬೇಕು. 
 • Gopalakrishna,Kampli Ballari

  11:34 AM, 31/01/2018

  ಪ್ರಾಣದೇವರ ಗುಡಿಯಲ್ಲಿ ಗ್ರಹಣ ಸಮಯದಲ್ಲಿ ನೈರ್ಮಲ್ಯ ವಿಸರ್ಜನೆ ಮಾಡಬಹುದೇ?

  Vishnudasa Nagendracharya

  ಎಲ್ಲ ದೇವಸ್ಥಾನಗಳಲ್ಲಿಯೂ ಗ್ರಹಣದ ಕಾಲದಲ್ಲಿ ಪ್ರತಿಮೆಗಳಿಗೆ ಅಭಿಷೇಕ ಆಗಬೇಕು. ಅಭಿಷೇಕದ ನಂತರ ಪ್ರತಿಮೆಗಳಲ್ಲಿ ನೀರಿಲ್ಲದಂತೆ ವರೆಸಬೇಕು. 
  
  ಗ್ರಹಣದ ಸಮಯ ತುಂಬ ಕಡಿಮೆಯಿದ್ದಾಗ ಅಭಿಷೇಕ ಇರುವದಿಲ್ಲ. (ಕೆಲವು ಬಾರಿ ಎಂಟ್ಹತ್ತು ನಿಮಿಷಗಳು ಮಾತ್ರ ಗ್ರಹಣವಿರುತ್ತದೆ)
 • Gopalakrishna,Kampli Ballari

  12:29 PM, 31/01/2018

  ವಿವರಣೆ ಒದಗಿಸಿದ್ದಕ್ಕೆ ಧನ್ಯವಾದಗಳು ಗುರುಗಳಿಗೆ.
 • Gopalakrishna,Kampli Ballari

  7:34 AM , 31/01/2018

  ಗ್ರಹಣ ಆರಂಭವಾದನಂತರ ನೈರ್ಮಲ್ಯ ವಿಸರ್ಜನೆ ಮಾಡಬೇಕೇ, ಮಾಡಬಾರದೇ ತಿಳಿಯಲಿಲ್ಲ.

  Vishnudasa Nagendracharya

  13ನೆಯ ಪುಟದಲ್ಲಿ ತಿಳಿಸಿದ್ದೇನೆ. 
  
  ಇದನ್ನು ನಿರ್ಮಾಲ್ಯಾಭಿಷೇಕ ಎಂದು ಕರೆಯಬೇಕಾಗಿಲ್ಲ. ಗ್ರಹಣಾಭಿಷೇಕವಷ್ಟೆ. 
 • Raghavendra,Bengaluru

  11:12 PM, 30/01/2018

  ಆಚಾರ್ಯರೇ ನಮಸ್ಕಾರಗಳು
  
  1) ದೇವರವಿಗ್ರಹಗಳನ್ನು ನೀರೀನಲ್ಲಿರಿಸಿ ಧರ್ಭೆಯನ್ನು ಹಾಕಬೇಕಾ? ಹಾಗಿದ್ದರೆ ನಾಳೆ ಯಾವ ಸಮಯದಲ್ಲಿ
  
  2) ಸ್ಪರ್ಶ ಸ್ನಾನ ನಂತರ ಗೋಪಿಚಂದನ ಧಾರಣೆ ಮಾಡಿ ಜಪ ಮಾಡಬೇಕಾ ದಯವಿಟ್ಟು ತಿಳಿಸಿ

  Vishnudasa Nagendracharya

  1. ಆವಶ್ಯಕತೆ ಇಲ್ಲ. 
  
  2. ನೀವು ಯಾವುದೇ ಕಾರಣಕ್ಕೆ, ಯಾವಾಗಲೇ ಸ್ನಾನ ಮಾಡಿದರೂ ಗೋಪಿಚಂದನ ಮುದ್ರೆ ಹಚ್ಚಿಕೊಳ್ಳಲೇಬೇಕು. 
  
  ಜಪ, ತರ್ಪಣ, ಪಾರಾಯಣಗಳ ಕುರಿತು ಈಗಾಗಲೇ ಲೇಖನದಲ್ಲಿ ತಿಳಿಸಿದ್ದೇನೆ. 
 • Vinod Karkera,Madikeri , Mysore

  9:43 PM , 30/01/2018

  Gurugale namasthe, 
  Dina poorthy prayanadalli (train ) iddu marudina thalupuvavaru enu madabeku ... Sparsha ,moksha snana 2 asadyavadaga enu madudvudu...?

  Vishnudasa Nagendracharya

  ಪ್ರಯಾಣ ಮುಗಿದ ಬಳಿಕ, ತಮ್ಮ ಬಳಿ ಇರುವ ಎಲ್ಲ ಬಟ್ಟೆಗಳನ್ನು ತೋಯಿಸಿ ಸ್ನಾನ ಮಾಡಬೇಕು. ಗ್ರಹಣಕಾಲದಲ್ಲಿ ದೇವರ ಸ್ಮರಣೆಯನ್ನು ಬಿಡತಕ್ಕದ್ದಲ್ಲ. ಗ್ರಹಣದ ಮೈಲಿಗೆಯನ್ನು ಮನೆಗೆ ಮುಟ್ಟಿಸತಕ್ಕದ್ದಲ್ಲ. 
 • Bindu madhava VK,Bangalore

  9:30 PM , 30/01/2018

  ಆಚಾರ್ಯರೇ ನಮಸ್ಕಾರಗಳು, 
  ಗ್ರಹಣ ಸ್ಪರ್ಶ ೫.೧೫ ಇದ್ದಾಗ ೬.೧೫ಕ್ಕೆ ಸ್ಪರ್ಶ ಸ್ನಾನ ಮಾಡಬೇಕೆಂದಿದ್ದೀರಿ. ಅದು ಹೇಗೆ? ಏಕೆ ಒಂದು ಗಂಟೆ ತಡವಾಗಿ ಸ್ನಾನ ಮಾಡಬೇಕು.

  Vishnudasa Nagendracharya

  ಗ್ರಹಣ ನಮಗೆ ಯಾವಾಗ ಗೋಚರವಾಗುತ್ತದೆಯೋ ಆಗಿನಿಂದ ಆಚರಣೆ ಆರಂಭ.