ಪೂಜ್ಯರೇ, ಈ ತರಹದ ವ್ಯತ್ಯಾಸಗಳನ್ನು ವಿವಿಧ ಮಠಗಳ ಪಂಚಾಂಗಗಳಲ್ಲಿ ನಾವು ಬಾರಿ ಬಾರಿ ಕಾಣುತ್ತೇವೆ. ಅವರ ದುರಾಗ್ರಹದಿಂದಾಗಿ ಈ ಸಮಸ್ಯೆ ಪರಿಹಾರ ಆಗುವಂತೆ ಕಾಣುವುದಿಲ್ಲ. ಆದುದರಿಂದ ಆಚಾರ್ಯರ ನಿಣ೯ಯದಂತೆ ತಿಥಿ ಹಾಗೂ ಹಬ್ಬಗಳ ಆಚರಣೆ ತುಂಬ ಅವಷ್ಯವಿದೆ. ಈ ನಿಟ್ಟಿನಲ್ಲಿ ನೀವು ಮಾಡುತ್ತಿರುವ ಪ್ರಯತ್ನ ಸ್ಸ್ತುತ್ಯಹ೯. ನನ್ನದೊಂದು ಕೋರಿಕೆ. ಬರಲಿರುವ ಹೊಸ ಸಂವತ್ಸರದಿಂದ ನೀವು ಪಂಚಾಂಗ ವನ್ನೇಕೆ ಪ್ರಕಟಿಸಬಾರದು? ಅದರಲ್ಲಿ ಮಾಧ್ವಸಮಾಜಕ್ಕೆ ಇಂದು ಅಗತ್ಯವಿರುವ ಇತರೆ ಉಪಯುಕ್ತ ವಿಷಯಗಳಲ್ಲದೇ ನಿತ್ಯ ಪಾರಾಯಣ ಮಾಡಲೇಬೇಕಾದ ಸ್ತೋತ್ರಗಳನ್ನೂ ಸೇರಿಸಬಹುದು.
ಈ ಕುರಿತು ವಿಶ್ವನಂದಿನಿಯಲ್ಲಿ ಪ್ರಕಟಣೆ ಹೊರಡಿಸಿ ಆಸಕ್ತರಿಂದ ಬೇಡಿಕೆ ಪಡೆದು, 5೦೦ಅಥವಾ ಹೆಚ್ಚು ಪ್ರತಿ ಗಳಿಗೆ ಬೇಡಿಕೆ ಬಂದರೆ ಯೋಗ್ಯಬೆಲೆಗೆ post ಮೂಲಕ ಕಳಿಸಬಹುದು. ಯೋಚಿಸಿ ಒಂದು ನಿಧಾ೯ರ ತೆಗೆದುಕೊಳ್ಳಿ. ನನ್ನ ಬೇಡಿಕೆ ಅಧಿಕಪ್ರಸಂಗ ಎನಿಸಿದರೆ ದಯವಿಟ್ಟು ಕ್ಷಮಿಸಿ.
-ಅನಿರುದ್ಧ ಕುಲಕರ್ಣಿ.
Vishnudasa Nagendracharya
ಖಂಡಿತ ಆ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದೇನೆ.
ಮೊದಲಿಗೆ ಒಂದು ವಿಷಯ, ವಿಶ್ವನಂದಿನಿಯಲ್ಲಿ ಯಾವುದೂ ಮಾರಾಟಕ್ಕಿರುವದಿಲ್ಲ. ಪುಸ್ತಕಗಳನ್ನು ಪ್ರಕಟಿಸಿದರೂ, ಪಂಚಾಂಗವನ್ನು ಪ್ರಕಟಿಸಿದರೂ ಅದು ಸಜ್ಜನರಿಗೆ ಉಚಿತವಾಗಿಯೇ ನೀಡಲಾಗುವದು.
ಎರಡನೆಯ ವಿಷಯ — ಈಗಿರುವ ಪಂಚಾಂಗಗಳು ಮೂಲದಲ್ಲಿಯೇ ಎಡವುತ್ತಿವೆ. ಎಲ್ಲರೂ ನಾಸಾ ನೀಡುವ ಕೆಲವು ಲೆಕ್ಕಾಚಾರಗಳ ಆಧಾರದ ಮೇಲೆ ಪಂಚಾಂಗಳನ್ನು ರೂಪಿಸುತ್ತಿರುವ ಕೇವಲ ಮಾಧ್ವರಿಗಲ್ಲ, ಕೇವಲ ಬ್ರಾಹ್ಮಣರಿಗಲ್ಲ, ಇಡಿಯ ಭಾರತೀಯ ವಿದ್ವತ್ ಸಮಾಜಕ್ಕೆ, ವಿದ್ಯಾಪ್ರಪಂಚಕ್ಕೆ ಉಂಟಾಗುತ್ತಿರುವ ಅವಮಾನ. ನದಿಯ ತೀರದಲ್ಲಿ ಮಡಿಪಂಚೆ ಉಟ್ಟ ಬ್ರಾಹ್ಮಣನೊಬ್ಬ ಬೆರಳುಗಳಲ್ಲಿ ಲೆಕ್ಕ ಹಾಕಿ ಗ್ರಹಣ ಯಾವಾಗ, ಸೂರ್ಯೋದಯ ಸೂರ್ಯಾಸ್ತ ಯಾವಾಗ ಎಂದು ಕರಾರುವಾಕ್ಕಾಗಿ ಹೇಳುತ್ತಿದ್ದ ಭರತ ಭೂಮಿ ಇದು. ಆ ಶುದ್ಧವಾದ ಜ್ಞಾನ ಈಗ ಮತ್ತೆ ಪ್ರಕಟವಾಗಬೇಕು. ಮತ್ತು ನಾವೇನೂ ಅದಕ್ಕಾಗಿ ಮಹತ್ತರ ಪ್ರಯತ್ನವನ್ನು ಮಾಡಬೇಕಾಗಿಲ್ಲ. ಶ್ರೀಮದಾಚಾರ್ಯರ ಪರಮಪ್ರೇಮಾಸ್ಪದ ಶಿಷ್ಯೋತ್ತಮರಾದ ಶ್ರೀತ್ರಿವಿಕ್ರಮಪಂಡಿತಾಚಾರ್ಯರು ಕೇವಲ 24 ಶ್ಲೋಕಗಳಲ್ಲಿ ಪಂಚಾಂಗದ ಗಣಿತವನ್ನು ಅತ್ಯದ್ಭುತವಾಗಿ ನಮಗೆ ನಿರ್ಣಯ ಮಾಡಿ ಕೊಟ್ಟಿದ್ದಾರೆ. ಆ ಗ್ರಂಥವನ್ನು Matahamatically ಮತ್ತು scientifically ಪ್ರಸ್ತುತಪಡಿಸಬೇಕು.
ಯಾವ ಕೆಲಸವೂ ಇಲ್ಲದೆ ಪೂರ್ಣ ಒಂದೂವರೆವರ್ಷಗಳ ಅವಧಿಯ ಸಮಯ ಸಿಕ್ಕರೆ ಅಷ್ಟನ್ನೂ ತಯಾರು ಮಾಡಿಕೊಡಲು ಸಾಧ್ಯ. ಎಷ್ಟು ಸಮಯ ಸಿಗುತ್ತಿದೆಯೋ ಅಷ್ಟರಲ್ಲಿಯೇ ನಿಧಾನವಾಗಿ ಆ ಕೆಲಸವನ್ನು ಹರಿ-ವಾಯು-ದೇವತಾ-ಗುರುಗಳು ಮಾಡಿಸುತ್ತಿದ್ದಾರೆ. ಅದು ಮುಗಿದಂತೆ ಅವಶ್ಯವಾಗಿ ಸಜ್ಜನ ಪ್ರಪಂಚಕ್ಕೆ ನೀಡುತ್ತೇನೆ. ಆ ಕಾರ್ಯ ಮಾಧ್ವಪರಂಪರೆಯ ಜ್ಞಾನಿವರೇಣ್ಯರ ಜ್ಞಾನದ ಕೀರ್ತಿಯನ್ನು ಸೂರ್ಯಮಂಡಲದಷ್ಟು ಎತ್ತರದಲ್ಲಿ ಹಾರಿಸಲಿದೆ. ಸೂರ್ಯ ಚಂದ್ರರಿರುವವರೆಗೆ ಆ ಪಂಡಿತಾಚಾರ್ಯರ ಕೀರ್ತಿ ಅಜರಾಮರವಾಗಿ ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿ ಗೋಚರಿಸಲಿದೆ. ಅವರೇ ಅನುಗ್ರಹಿಸಿ ಆ ಕಾರ್ಯವನ್ನು ಮಾಡಿಸಬೇಕು.
ನಿಮ್ಮ ಅಭಿಮಾನಕ್ಕೆ ಕೃತಜ್ಞ.
BADARINATH ng,Bangalore
1:55 PM , 16/12/2018
ಸೂರ್ಯನ ರಶ್ಮಿ ಯನ್ನೂ ಯಾರು ಏನೇ ಮಾಡಿದರೂ ಮರೆ ಮಾಡ ಲಾಗದು. ಹಾಗೇಯೇ ನಮ್ಮ ಪೂಜ್ಯ ಆಚಾರ್ಯ ರೂ ಕೊಡ. ನಾವೇ ಧನ್ಯರು. ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು.
Rakshith S,Mysore
12:07 PM, 16/12/2018
ಆಚಾರ್ಯರಿಗೆ ನಮಸ್ಕಾರಗಳು.ವೈಕುಂಠ ಏಕಾದಶಿ ಕೇವಲ ರಾಮಾನುಜ ಪಂಥದವರು ಆಚರಿಸುವುದು ಎಂದು ಕೇಳಿದ್ದೀನಿ.ವೈಕುಂಠ ಏಕಾದಶಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡಿ ಎಂದು ವಿನಂತಿ.