ಅಕ್ಷಯತೃತೀಯಾದಂದು ತಿಲತರ್ಪಣ ಕೊಡಬೇಕಾ?
ನಮಸ್ತೆ ಆಚಾರ್ಯರೇ. ಅಕ್ಷಯ ತೃತೀಯಾ ದಿನ ತಿಲತರ್ಪಣ ಕೊಡಬೇಕಾ? — ರಾಘವನ್ ಹೌದು. ಅಕ್ಷಯತೃತೀಯಾ ತ್ರೇತಾಯುಗ ಆರಂಭವಾದ ದಿವಸ. ಹೀಗಾಗಿ ಯುಗಾದಿ ಎಂದು ಕರೆಸಿಕೊಳ್ಳುತ್ತದೆ. ಷಣ್ಣವತಿ ಶ್ರಾದ್ಧಗಳಲ್ಲಿ ಯುಗಾದಿಯ ಶ್ರಾದ್ಧವೂ ಒಂದು. ಹೀಗಾಗಿ ಈ ದಿವಸ ಶ್ರಾದ್ಧವೂ ಶ್ರೇಷ್ಠ. ಶ್ರಾದ್ಧ ಮಾಡಲಿಕ್ಕಾಗದೇ ಇದ್ದಾಗ ತರ್ಪಣವನ್ನಂತೂ ನೀಡಲೇಬೇಕು. ನದಿಗಳ ತಂಪಾದ ನೀರಿನಿಂದ ತಿಲತರ್ಪಣವನ್ನು ನೀಡಿದಲ್ಲಿ ಪಿತೃಗಳು ಅಕ್ಷಯ ತೃಪ್ತಿಯನ್ನು ಹೊಂದುತ್ತಾರೆ. ಶ್ರೇಷ್ಠ ಪರ್ವಕಾಲವಾದ್ದರಿಂದ ಸಮಸ್ತ ಪಿತೃಗಳಿಗೂ ತರ್ಪಣವನ್ನು ನೀಡಬೇಕು. ತಿಲತರ್ಪಣವನ್ನು ನೀಡಿದ ದಿವಸ ರಾತ್ರಿ ಊಟ ಮಾಡಬಾರದು. ಫಲಾಹಾರ ಸ್ವೀಕರಿಸಬಹುದು. — ವಿಷ್ಣುದಾಸ ನಾಗೇಂದ್ರಾಚಾರ್ಯ