(You can only view comments here. If you want to write a comment please download the app.)
MAHADI SETHU RAO.,
11:27 PM, 26/01/2018
Thanks for the valuable information.
HARE KRISHNA.
ಸುದರ್ಶನ ಶ್ರೀ. ಲ.,
10:45 PM, 02/01/2018
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
ಅನರ್ಹರಾದವರು ಪೂಜೆ ಮಾಡಿದ ಸಾಲಿಗ್ರಾಮವನ್ನು ಯಾಕಾಗಿ ಪೂಜೆಮಾಡಬಾರದು?
Bheemasena j m,Bengaluru
9:49 PM , 02/01/2018
ಅಚಾರ್ಯರೇ ನಮಸ್ಕಾರ
ನೀವು ಸಾಲಿಗ್ರಾಮ ವನ್ನು ಕೊಳ್ಳಬೇಡಿ ಮತ್ತು ಮಾರಬೇಡಿ ಎಂದು ಹೇಳಿದ್ದೀರ ಆದ್ರೆ ನಮ್ಮಲ್ಲಿ ಸಾಲಿಗ್ರಾಮ ಇಲ್ಲ ಆದ್ರೆ ಪೂಜೆ ಮಾಡಬೇಕು..
ಕೇಳಿದರೆ ಯಾರು ಕೊಡುವುದಿಲ್ಲ.. ದಾನವೂ ಇಲ್ಲ..
ಸಾಲಿಗ್ರಾಮ ವನ್ನು ಹೇಗೆ ಸಂಪಾದನೆ ಮಾಡಬೇಕು...
ದಾನಕೊಡುವುರಾದ್ರು ಕೂಡ ಕೊಂಡುಕೊಳ್ಳದೆ ಬೇರೆ ದಾರಿ ಇಲ್ಲ ಎಂದು ಅನ್ನಿಸುತ್ತೆ.
ಮನೆಯಲ್ಲಿ ಪೂಜೆ ಮಾಡುತ್ತಿರುವ ಯಾರು ಕೂಡ ಕೊಡಲಾರರರು..
ನಾನೇ ಸಲಿಗ್ರಾಮ ದಾನ ಕೊಡಬೇಕು ಅಂದರೆ ಏನು ಮಾಡಬೇಕು ತಿಳಿಸಿ..
Vishnudasa Nagendracharya
ಪ್ರಾಮಾಣಿಕವಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ.
ಸ್ವಾಮಿ, ಸಾಲಿಗ್ರಾಮದ ರೂಪದಲ್ಲಿ ಬಂದು ನನ್ನಿಂದ ಪೂಜೆ ಸ್ವೀಕರಿಸು ಎಂದು. ನಿಶ್ಚಿತವಾಗಿ ನಿಮಗೆ ಸಾಲಿಗ್ರಾಮಗಳು ತಾನಾಗಿ ದಾನ ದೊರೆಯುತ್ತವೆ. ನೀವು ಕೇಳದೆಯೇ.
ಈ ಪ್ರಾರ್ಥನೆ ಫಲಿತಗೊಳ್ಳಲು ನಿಮಗಿರಬೇಕಾದ ಅರ್ಹತೆಗಳು —
1. ಮೊದಲಿಗೆ ಸಮಗ್ರ ಪೂಜಾ ವಿಧಾನವನ್ನು ಕಲಿಯುವದು.
2. ಟೀಕಾಕೃತ್ಪಾದರ ಪದ್ಯಮಾಲಾವನ್ನು ಪ್ರತೀನಿತ್ಯ ಪಠಣ ಮಾಡುವದು.
ಇದು ನಿಶ್ಚಿತವಾದ ಮಾರ್ಗ. ನಮ್ಮ ತಂದೆಯವರು ಮತ್ತು ನಾನು ಇಬ್ಬರೂ ಸಹ ಅನುಸರಿಸಿದ ಮಾರ್ಗ. ಫಲ ಪಡೆದಿರುವ ಮಾರ್ಗ.
ಆಚಾರ್ಯರಲ್ಲಿ, ಆಚಾರ್ಯರ ಶಾಸ್ತ್ರದಲ್ಲಿ ನಂಬಿಕೆಯಿಟ್ಟು ಅನುಸರಿಸಿ. ಫಲ ದೊರೆಯುತ್ತದೆ.
ಅವಶ್ಯವಾಗಿ ಸ್ವೀಕರಿಸಿ.
ನೀಡುವ ಅವರಿಗೆ ಸಮಗ್ರ ಭೂದಾನದ ಫಲ ದೊರೆಯುತ್ತದೆ.
ತೆಗೆದುಕೊಳ್ಳುವ ನೀವು ಭಕ್ತಿಯಿಂದ ಪೂಜೆಯನ್ನು ಮಾಡಿ ಸಿದ್ಧಿಯನ್ನು ಗಳಿಸಿ.
ಶುಭವಾಗಲಿ.
Vijayrao kulkarni,
4:50 PM , 01/01/2018
ಧನ್ಯವಾದಗಳು.
Pranesh ಪ್ರಾಣೇಶ,
10:00 PM, 31/12/2017
ಆಚಾರ್ಯರೇ ಬರಿಯ ಬಿದಿರಿನ ಬುಟ್ಟಿ ಮೈಲಿಗೆ ಅಲ್ಲವೇ?
Vishnudasa Nagendracharya
ಸರ್ವಥಾ ಅಲ್ಲ.
ಬಿದಿರಿನ ಬುಟ್ಟಿಯಲ್ಲಿಯೇ ಅಲ್ಲವೇ ನಾವು ಹೂ ತುಳಸಿಗಳನ್ನು ತರುವದು.
ಕೇವಲ ಬಿದಿರಿನ ಬುಟ್ಟಿಯಲ್ಲಿ ದೇವರನ್ನಿಟ್ಟು ಒಯ್ದರೆ ಮೈಲಿಗೆಯಾಗುತ್ತದೆ ಎಂದು ಆ ಬುಟ್ಟಿಗೆ ಕೃಷ್ಣಾಜಿನದ ಹೊದಿಕೆಯನ್ನು ಹಾಕಿ ಉಪಯೋಗಿಸುತ್ತೇವೆ.
ಕೃಷ್ಣಾಜಿನದ ಒಳಗಿರುವ ಪದಾರ್ಥಕ್ಕೆ ಹೊರಗಿನ ಮೈಲಿಗೆ ತಾಕುವದಿಲ್ಲ.
Ritthy G Vasudevachar,Bengaluru
1:00 AM , 01/01/2018
ಆಚಾರ್ಯರಿಗೆ ನಮಸ್ಕಾರ, ಆದರೆ ನಮ್ಮ ಮುಷ್ಟಿಯಲ್ಲಿ ಹಿಡಿಸುವಂತಹ ಚಿಕ್ಕ ಪ್ರತಿಮೆಗಳಿಗೂ ನೀವು ಹೇಳಿರುವ ನಿಯಮಗಳು ಅನ್ವಯವೇ ತಿಳಿಸಿ, ಹೌದಾದರೆ ಆ ಥರ ಪ್ರತಿಮೆಗಳು ನಮ್ಮ ಮನೆಯಲ್ಲಿ ಇವೆಯಲ್ಲಾ?! ಈ ಕಾರಣದಿಂದಲೇ ನನಗೆ ನೆಮ್ಮದಿ ಇಲ್ಲವೋಗೊತ್ತಾಗಲಿಲ್ಲ, ಭಯ ಆಗ್ತಾ ಇದೆ
Vishnudasa Nagendracharya
ಹೌದು. ಎಲ್ಲ ಪ್ರತಿಮೆಗಳಿಗೂ ಅನ್ವಯಿಸುತ್ತದೆ.
ಇರುವ ಎಲ್ಲ ಪ್ರತಿಮೆಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿಸಿ ಪೂಜೆ ಮಾಡುವದರಿಂದ ಸಮಸ್ಯೆ ಪರಿಹಾರವಾಗುತ್ತದೆ.
Vijayrao kulkarni,
8:58 AM , 01/01/2018
ಬಹಳ ಉಪಯುಕ್ತ ಮಾಹಿತಿ ನೀಡಿರಿರುವಿರಿ.ಅದರೆ ಬೇರೆಯವರು ಪೂಜಿಸಿದ ಸಾಲಿಗ್ರಾಮ ಯಾಕೆ ತರಬಾರದು, ಏಕೆಂದರೆ ದಾಯಾದಿಗಳು ಭಾಗ ಆದ್ದಾಗ ಅವರು ಏನು ಮಾಡಬೇಕು. ತಪ್ಪು ಇದ್ದಲ್ಲಿ ಕ್ಷಮಿಸಿ..
Vishnudasa Nagendracharya
ದಾಯಾದಿಗಳು ಪೂಜೆ ಮಾಡಿದ್ದನ್ನು ತರಬಾರದು ಎಂದು ಎಲ್ಲಿಯೂ ಹೇಳಿಲ್ಲ.
ಪೂಜೆ ಮಾಡಲು ಅನರ್ಹರಾದವರು ಪೂಜೆ ಮಾಡಿದ ಸಾಲಿಗ್ರಾಮಗಳನ್ನು ತರಬಾರದು ಎಂದಷ್ಟೇ ಅಲ್ಲಿ ಹೇಳಿರುವದು.
Aditya C s,
9:56 PM , 31/12/2017
Dhanyavadagalu acharyare
Aditya C s,
8:15 PM , 31/12/2017
Acharyare, mele heliruva niyamagalu sannadada(mushtiya gaatrada) pratimegaligu anviyusutada?
Vishnudasa Nagendracharya
ಹೌದು.
ಶ್ರೀ ಪ್ರಸನ್ನಸಿಂಹರವರು ಪ್ರಶ್ನೆ ಕೇಳಿರುವದು ಸಣ್ಣ ಪ್ರತಿಮೆಗಳ ಕುರಿತಾಗಿಯೇ.