Prashnottara - VNP165

ಮಧ್ಯಾಹ್ನದ ಸಂಧ್ಯಾವಂದನೆಯನ್ನು ಬೆಳಿಗ್ಗೆ ಮಾಡುವದು ಉತ್ತಮವೋ, ಸಂಜೆ ಮಾಡುವದು ಉತ್ತಮವೋ?


					  	

ನಾವು ಕೆಲಸಕ್ಕೆ ಹೋಗುವದರಿಂದ ಮಧ್ಯಾಹ್ನದ ಸಂಧ್ಯಾವಂದನೆಯನ್ನು ಮಧ್ಯಾಹ್ನಕಾಲದಲ್ಲಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬೆಳಿಗ್ಗೆ ಅಥವಾ ಸಂಜೆ ಮಾಡಬೇಕಾಗುತ್ತದೆ. ಯಾವಾಗ ಮಾಡಿದರೆ ಉತ್ತಮ ಎನ್ನುವದನ್ನು ತಿಳಿಸಿ.


Play Time: 2:11, Size: 2.23 MB


Download Upanyasa Share to facebook View Comments
1981 Views

Comments

(You can only view comments here. If you want to write a comment please download the app.)
  • Vadiraja,Bangalore

    8:39 AM , 05/04/2020

    ಅಲ್ಪ ದ್ವಾದಶಿ ಮಧ್ಯಾನ್ಹಿಕ ಸಂಧ್ಯಾವಂದನ ಪಾರಣೆಗೆ ಮುಂಚೆ ಮುಗಿಸಬೇಕು ಎಂದು ಗೊತ್ತಾಯಿತು, ಉಳಿದ ದ್ವಾದಶಿಗಳು ಹೇಗೆ?
    
    ಕಲಾ ಮಾತ್ರ ದ್ವದಶಿಯಂದು ಪಾರಣೆಗೆ ಮುಂಚೆ ಕೇವಲ ಮಧ್ಯಾಹ್ನದ ವರಗೆ ಮಾಡುವ ಕಾರ್ಯಕ್ರಮಗಳನ್ನು ಮುಗಿಸಿದರೆ ಸಾಯಂ ಸಂಧ್ಯಾವಂದನೆ ಲೋಪವಾಗುವುದಿಲ್ಲವೆ?
    
    ದಯವಿಟ್ಟು ತಿಳಿಸಿಕೊಡಿ

    Vishnudasa Nagendracharya

    ದ್ವಾದಶಿಯ ಪ್ರಾತಃಕಾಲದಲ್ಲಿ ಮಾಧ್ಯಾಹ್ನಿಕೆಯನ್ನು ಮುಗಿಸಿದರೆ, ಸಾಯಂ ಸಂಧ್ಯೆ ಏಕೆ ಲೋಪವಾಗುತ್ತದೆ?
    
    ದ್ದಾದಶಿಯ ಸಾಯಂಕಾಲದಲ್ಲಿ ಸಾಯಂ ಸಂಧ್ಯೆಯನ್ನು ಮಾಡುತ್ತೇವಲ್ಲ. 
  • Vikram Shenoy,Doha

    9:24 AM , 05/01/2020

    ಈ ಪ್ರಶ್ನೆ ನನಗೆ ಯಾವಾಗಲೂ ಕಾಡುತಿತ್ತು. ವ್ಯವಹಾರದ ನಿಮಿತ್ಯ ಮಧ್ಯನಿಖ ಮಾಡಲ್ಲು ಆಗುತ್ತಿರಲಿಲ್ಲ. ಆಚಾರ್ಯರಿಗೆ ಅನೇಕ ಧನ್ಯವಾದಗಳು 🙏🙏
  • Ramesha Beejady Upadhya,Bengaluru

    2:42 PM , 04/01/2020

    ಶ್ರೀ ಕೃಷ್ಣಾಯ ನಮಃ. ಆಚಾರ್ಯರಿಗೆ ನಮಾಸ್ಕಾರಗಳು. ಸಂಧ್ಯಾವಂದನೆ‌‌ಯ ಅಂಗವಾಗಿ ಅರ್ಘ್ಯ, ಮತ್ತು ತದಂಗವಾಗಿ ಮಾಡುವ ಎಲ್ಲ ಜಪಗಳೂ ಬೆಳಿಗ್ಗೆಯೇ ಮಾಡಬಹುದಾ? ಮತ್ತು ಯಾತ್ರೆ ಅಥವಾ ಪ್ರಯಾಣಗಳಲ್ಲಿ ಸಕಾಲಕ್ಕೆಸಾಧ್ಯವಾಗದೇ (ಮುಂಚಿತವಾಗಿ ಗೊತ್ತಿಲ್ಲದೇ ಇರುವಾಗ) ಯಾವ ರೀತಿ

    Vishnudasa Nagendracharya

    ಎಲ್ಲವನ್ನೂ ಬೆಳಿಗ್ಗೆಯೇ ಮಾಡಬಹುದು. 
    
    ಮಧ್ಯಾಹ್ನ ಮಾಡಲು ಸಾಧ್ಯವಾಗುವದಿಲ್ಲ ಎಂದು ಗೊತ್ತಿಲ್ಲದಾಗ, ಸಾಯಂಕಾಲದಲ್ಲಿ ಸಾಯಂ ಸಂಧ್ಯೆಗಿಂತ ಮೊದಲು ಮಾಡಬೇಕು. 
  • Harish YG,Bangalore

    2:17 PM , 04/01/2020

    If we are doing madhyanika in the evening...should it be done before satan sandhyavandane or after satan sandhyavandane...pls let me know.

    Vishnudasa Nagendracharya

    ಮಾಧ್ಯಾಹ್ನಿಕ ಸಂಧ್ಯಾವಂದನೆಯನ್ನು ಬೆಳಿಗ್ಗೆಯೇ ಮಾಡುವಾಗ ಪ್ರಾತಃಸಂಧ್ಯಾವಂದನೆಯ ನಂತರ ಮಾಡಬೇಕು. 
    
    ಸಂಜೆ ಮಾಡುವಾಗ ಸಾಯಂ ಸಂಧ್ಯಾವಂದನೆಗಿಂತ ಮುಂಚೆ ಮಾಡಬೇಕು. 
  • MURALIDHARA BHIMARAO KULKRNI,BANGALORE

    11:46 AM, 04/01/2020

    ಇದೇ ವಿಷಯವನ್ನು ಮುಂದುವರೆಸುತ್ತಾ ಬೆಳಿಗ್ಗೆ ಸಂಧ್ಯಾವಂದನೆ ದೇವರಪೂಜೆ ಮುಂತಾದುವಾನ್ನು ಪೂರೈಸಿ ದೇವರಿಗೆ ಮತ್ತು ಇತರ ದೇವತೆಗಳಿಗಲ್ಲದೇಇ ದೇವರ ಫೋಟೋ ಮಡಿದ ಅಲಂಕಾರ ಏರಿಸಿದ ಹೂ ತುಳಸಿಗಳನ್ನು ಸಯಂಸಂಧಾವಂಅನೆ ಮುಗುಸಿ  ಮರನೇದಿನಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ ಮಾಡುವಂತೆ ಆದಿನವೇ ಸಾಯಂ ಸಂಧ್ಯೆಯನಂತರ್ಸ್ ತಗೆಯಬಹುದೇ? ಹಾಗೊಂದುವೇಳೆ ತಗೆಯುವುದಾದರೆ ಸಂಜೆ ಹೊತ್ತು ವಿಳಂಬವಾದಲ್ಲಿ ಎಷ್ಟು ಗಂಟೆಯಒಳಗೆ ವಿಸರ್ಜನೆ ಕಾರ್ಯ ಮುಗಿದಿರಬೇಕು.

    Vishnudasa Nagendracharya

    ದೇವರ ಪೆಟ್ಟಿಗೆಯ ಮೇಲಿರುವ, ಫೋಟೋಗಳ ಮೇಲಿರುವ ಹೂ ತುಳಸಿಗಳನ್ನು ಅವಶ್ಯವಾಗಿ ಸಾಯಂ ಸಂಧ್ಯೆಯ ನಂತರ, ರಾತ್ರಿ ಊಟದ ಮೊದಲು ತೆಗೆಯಬಹುದು. 
    
    ಆದರೆ ಸಾಲಿಗ್ರಾಮ ಪ್ರತಿಮೆಗಳನ್ನು ಊಟವಾದ ಬಳಿಕ ಸರ್ವಥಾ ಮುಟ್ಟಬಾರದು. ಹೀಗಾಗಿ ಸಂಪುಷ್ಟದೊಳಗಿನ ತುಳಸಿ ಹೂಗಳನ್ನು ತೆಗೆಯಲು ಬರುವದಿಲ್ಲ. ಕೇವಲ ಪೆಟ್ಟಿಗೆ ಮತ್ತು ಫೋಟೋಗಳ ಮೇಲಿರುವದನ್ನು ತೆಗೆಯಬಹುದು. 
    
    ರಾತ್ರಿ ಪ್ರತಿಮೆಗಳನ್ನು ಮುಟ್ಟಬಾರದು ಎಂದರೆ ಸಂನ್ಯಾಸಿಗಳು ರಾತ್ರಿಯ ಹೊತ್ತು ಪೂಜೆ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಬರಬಹುದು. ಸಂಸ್ಥಾನದಲ್ಲಿ ಪ್ರಾತಃಕಾಲದಲ್ಲಿ ಪೂಜೆ ಮಾಡುವ ಪ್ರತಿಮೆಗಳನ್ನು ರಾತ್ರಿಯ ಹೊತ್ತು ತೆಗೆದು ಮುಟ್ಟಿ ಪೂಜಿಸುವದಿಲ್ಲ. ರಾತ್ರಿಪೂಜೆಗಾಗಿಯೇ ಪ್ರತ್ಯೇಕ ಪ್ರತಿಮೆಗಳನ್ನಿಟ್ಟುಕೊಂಡಿರುತ್ತಾರೆ. ಸಾಲಿಗ್ರಾಮ ಮತ್ತು ಮುಖ್ಯ ಪ್ರತಿಮೆಗಳಿರುವ ಪೆಟ್ಟಿಗೆಯ ಜೊತೆಯಲ್ಲಿ ಸಾಯಂಕಾಲದ ಪೂಜೆಯ ಪ್ರತಿಮೆಗೆ ಪೂಜೆ ಸಲ್ಲಿಸುತ್ತಾರೆ. ಮತ್ತು ಸಂಜೆಯ ಪೂಜೆಯಲ್ಲಿ ಅಭಿಷೇಕಾದಿಗಳನ್ನೂ ಮಾಡುವದಿಲ್ಲ. ಅರ್ಚನೆ, ನೈವೇದ್ಯ ಮಂಗಳಾರತಿಗಳನ್ನು ಮಾಡುತ್ತಾರಷ್ಟೆ. ಸಾಯಂ ಪೂಜೆ ಮಾಡುವ ಪ್ರತಿಮೆಗಳನ್ನು ಬೆಳಿಗ್ಗೆ ಪೂಜೆಯ ಸಮಯದಲ್ಲಿ ಪೀಠದಲ್ಲಿಟ್ಟು ಪೂಜಿಸುವದಿಲ್ಲ. ಪೀಠದ ಪಕ್ಕದಲ್ಲಿಟ್ಟು ಪೂಜಿಸುತ್ತಾರೆ.