Upanyasa - VNU028

ಹನುಮಂತನ ಅವತಾರದ ಕಥೆ

03/06/2016

ವಾಲ್ಮೀಕಿಋಷಿಗಳು ಉತ್ತರಕಾಂಡದಲ್ಲಿ ತಿಳಿಸಿದ ಆಂಜನೇಯನ ಅವತಾರದ ಕಥೆಯನ್ನು ಶ್ರೀ ನಾರಾಯಣಪಂಡಿತಾಚಾರ್ಯರು ತಮ್ಮ ಸಂಗ್ರಹರಾಮಾಯಣದ ಕಿಷ್ಕಿಂಧಾಕಾಂಡದ ಪ್ರಥಮಸರ್ಗದಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಆಂಜನೇಯನಿಗೆ ಹನುಮಂತ ಎಂಬ ಹೆಸರು ಬಂದ ರೋಮಾಂಚಕಾರಿ ಘಟನೆಯ ವಿವರ ಹಾಗೂ ಈ ಘಟನೆಯ ಕುರಿತ ತಪ್ಪುಕಲ್ಪನೆಯ ನಿವಾರಣೆ ಇಲ್ಲಿದೆ. 

Play Time: 47 Minuts 08 Seconds

Size: 8.29 MB


Download Upanyasa Share to facebook View Comments
13956 Views

Comments

(You can only view comments here. If you want to write a comment please download the app.)
 • Ajeya Simha,Bengaluru

  11:29 PM, 09/04/2020

  ವಾಲ್ಮೀಕಿ ರಾಮಾಯಣ ಕಿಷ್ಕಿಂದ ಕಾಂಡದ 66ನೆ ಸರ್ಗದ 21ನೆ ಶ್ಲೋಕ,
  
  ಅಭ್ಯುತ್ಥಿತಂ ತತಸ್ಸೂರ್ಯಂ ಬಾಲೋ ದೃಷ್ಟ್ವಾ ಮಹಾವನೇ.
  
  ಫಲಂ ಚೇತಿ ಜಿಘೃಕ್ಷುಸ್ತ್ವಮುತ್ಪ್ಲುತ್ಯಾಭ್ಯುದ್ಗತೋ ದಿವಮ್৷৷4.66.21৷৷
  
  ಇಲ್ಲಿ ಜಂಬುವಂತನು ಹನುಮಂತನಿಗೆ ನೀನು ಸೂರ್ಯನನ್ನು ಹಣ್ಣು ಎಂದು ತಿಳಿದು ಆಕಾಶಕ್ಕೆ ಹಾರಿದೆ ಎಂಬುವ ಮಾತು ವಿರುದ್ಧವಾಗಿ ತೋರುತ್ತಿದೆ.
  
  ದಯವಿಟ್ಟು ಈ ಗೊಂದಲವನ್ನು ಬಗೆಹರಿಸಿ.
 • Ajeya Simha,Bengaluru

  7:10 PM , 08/04/2020

  Namaskara gurugale,
  
  I personally have confusion of celebrating Hanuma Jayanthi on
  
  1. Chitra Poornima ( as you said)
  
  2. Vishaka shuddha dashami ( given in vottikoppal panchanga)
  
  3. Margasheersha shuddha trayodashi ( usually celebrated in as hanumajayanti )
  
  I request you to please give a clear picture on this with the proofs ( like Ramayana, Mahabharata, puranas ) to clear the confusion of many others like me.
  
  Danyavadagalondige
  Nimma abhimani
  Ajeya Simha

  Vishnudasa Nagendracharya

  ಚೈತ್ರ ಮಾಸದಲ್ಲಿ ಆಚರಿಸುವದು ಹನುಮಜ್ಜಯಂತಿ. ಮಾರ್ಗಶೀರ್ಷದಲ್ಲಿ ಆಚರಿಸುವದು ಹನುಮದ್-ವ್ರತ. ಹನುಮಜ್ಜಯಂತಿಯಲ್ಲ, ಹನುಮಂತ ದೇವರ ಪ್ರೀತ್ಯರ್ಥವಾಗಿ ಆಚರಿಸುವ ವ್ರತ. 
  
  ಇನ್ನು ಚೈತ್ರ-ವೈಶಾಖಗಳ ಗೊಂದಲಗಳ ಕುರಿತು, ಈ ರೀತಿ ಅನೇಕ ಜಯಂತಿಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಶಾಸ್ತ್ರಗಳನ್ನು ನೋಡಿ ನಿರ್ಣಯಿಸಬೇಕು. ಅಲ್ಲಿಯವರೆಗೆ ನಮ್ಮ ಹಿಂದಿನವರು ಆಚರಿಸಿಕೊಂಡು ಬಂದದ್ದನ್ನು ಮುಂದುವರೆಸಬೇಕು. 
 • Santosh Patil,Gulbarga

  11:36 PM, 29/03/2020

  Thanks Gurugale 🙏🙏
 • Chandrika prasad,Bangalore

  9:12 PM , 01/02/2020

  ಆಂಜನೇಯ ಶಿವನ ಅಂಶ ಎನ್ನುತ್ತಾರಲ್ಲ ಅದು ಹೇಗೆ ತಿಳಿಸಿ ಕೊಡಿ ಪ್ರಣಾಮಗಳು 🙏
 • Vishwanandini User,Bangalore

  2:26 PM , 29/06/2019

  ನಮಸ್ಕಾರ ಆಚಾರ್ಯರೆ,
  ವಾಯುದೇವರು ತಮ್ಮ ಅವತಾರಗಳಲ್ಲಿ ಯಾವ ಪ್ರಸಂಗದಲ್ಲಿಯೂ ತಮ್ಮಗೋಸ್ಕರ ಯಾವ ಕರ್ಮಗಳನ್ನು ಮಾಡದೆ ಕೇವಲ ಭಗವಂತನ ಇಚ್ಛೆ ಅನುಗುಣವಾಗಿ ಮಾಡುವುದನ್ನು ಕಾಣುತ್ತೇವೆ. ಅದು ಘಟೋತ್ಕಚ ವೀರ ಮರಣ, ಸಭೆಯಲ್ಲಿ ದ್ರೌಪದಿಯ ಅವಮಾನ, ಅಶ್ವತ್ಥಾಮರು ಮಕ್ಕಳನ್ನು ಕೊಂದಾಗ, ನಾರಾಯಣ ಅಸ್ತ್ರದಿಂದ ತಮ್ಮನ್ನು ರಕ್ಷಸಿ ಕೊಳ್ಳೆದೆ ಮುಂತಾದ ಅನೇಕ ಸಂದರ್ಭಗಳು. ಆದರೆ ಇಂದ್ರದೇವರ ವಜ್ರ ಯುಧದಿಂದ ಹೊಡೆಯಲ್ಲ್ಪಟ್ಟಾ ಹನುಮಂತ ದೇವರನ್ನು ಕಂಡು ವಾಯುದೆವರು ಕುಪಿತರಾಗಿ ಸಕಲ ಜೀವ ರಾಶಿಗಳನ್ನು ನಿಶ್ಚೆಸ್ತಾ ರನ್ನಾಗಿ ಮಾಡುವುದನ್ನು ಕೇಳಿದ್ದೇವೆ. ಈ ಒಂದು ಪ್ರಸಂಗ ಪುತ್ರ ಮೋಹದಿಂದ ಮಾಡಿದೆಂದು ಅನಿಸುತ್ತದೆ. ಇದನ್ನು ಹೇಗೆ ಆರ್ಥೈಸಿಬೇಕು?

  Vishnudasa Nagendracharya

  ವಾಯುದೇವರಿಗೆ ಮೋಹ ಇದೆ ಎಂದು ಚಿಂತನೆ ಮಾಡುವದೂ ಸಹ ಮಹತ್ತರ ಅನರ್ಥ ಉಂಟು ಮಾಡುತ್ತದೆ. 
  
  ಅಸುರಾವೇಶದಿಂದ ಹನುಮನ ಸಾಮರ್ಥ್ಯವನ್ನು ಕಡೆಗಣಿಸಿದ್ದ ಇಂದ್ರಾದಿಗಳಿಗೆ ವಾಯುದೇವರು ನೀಡಿದ ಶಿಕ್ಷೆಯದು ಮತ್ತು ತಮ್ಮ ಮಹಾಮಾಹಾತ್ಮ್ಯವನ್ನು ಅವರಿಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟ ಪರಿ. 
 • Dr.Guruprasad,Udupi

  10:56 AM, 31/03/2018

  daasara padadallu aanjaneya ekadasha rudra endide.
  hanuman chalisa dallu shiva putra endide. shiva purana dallu ide. haagiruvaaga e sandehavannu hege pariharisuvudu???
 • Ramesh,Bangalore

  12:19 PM, 28/06/2017

  Hare srinivasa , acharyarige nanna namaskaragalu, 
  Panchamukhi hanoomat kavachavanna yaaru yaava samdhrbadalli helidaru, matte idara mahathwavenu endu thmmalli vinamradinda kelikolluttene
 • RANGASWAMY,NEETHIGERE

  6:38 PM , 18/04/2017

  Hanumanta na avathara Shiva naddu alva

  Vishnudasa Nagendracharya

         ಅಲ್ಲ. ಮುಖ್ಯಪ್ರಾಣದೇವರೇ ಹನುಮಂತನಾಗಿ ಹುಟ್ಟಿ ಬಂದದ್ದು.
 • NAGARAJA. M.S,BANGALORE

  3:38 AM , 19/04/2017

  ಹನುಮಂತನ ಕಥೆಯನ್ನು ಕೇಳಿ ತುಂಬಾ ಸಂತೋಷವಾಯಿತು.ಯೀ ನಿಂಮ್ಮ ಹೊಸ app  ನನಗೆ ಅನುಕೂಲವಾಗಿದೆ .ನಿಮಗೂ ಮತ್ತು ಹೊಸ app ಕಂಡುಹಿಡಿದವರಿಗೂ ನನ್ನ ಹರ್ತಪೂರ್ವಕ ನಮಸ್ಕಾರಗಳು.
 • S.v.desha pande,Bangalore

  1:04 PM , 21/05/2017

  Hanumajjayanti yannu vyshaka krishna dashmi yanduuu acharisuttare 
  Gondalavagide 
  Tilsikodi acharyare
   🙏🙏🙏🙏