Upanyasa - VNU489

ಭಾಗವತವನ್ನು ಏಕೆ ಕೇಳಬೇಕು?

27/08/2017

ಶ್ರೀಮದ್ ಭಾಗವತದ ಶ್ರವಣವನ್ನು ಏಕೆ ಮಾಡಬೇಕು ಎನ್ನುವದಕ್ಕೆ ಪದ್ಮಪುರಾಣದಲ್ಲಿ ಶ್ರೀ ವೇದವ್ಯಾಸದೇವರು ಅದ್ಭುತವಾದ ಉತ್ತರಗಳನ್ನು ನೀಡಿದ್ದಾರೆ. ನಮ್ಮನ್ನು ಭಾಗವತಶ್ರವಣದಲ್ಲಿ ರತರನ್ನಾಗಿ ಮಾಡಿಸುವ ಆ ವಚನಗಳ ಅರ್ಥಾನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ. Play Time: 16:41

Size: 3.03 MB


Download Upanyasa Share to facebook View Comments
3034 Views

Comments

(You can only view comments here. If you want to write a comment please download the app.)
 • Anilkumar B Rao,Bangalore

  11:30 AM, 31/08/2017

  listened to part 1 2 times. thamma sahaja shailiyalli adhuthavaagi moodi bandide. Thammalli vondu kaLa kaLiya praarthane, if possible please please arrange for pdf text material for aĺl that is said in upanyaasa. Namma mananakke thumba thumba help aagatthe. 🙏🙏🙏

  Vishnudasa Nagendracharya

  ಶಾಸ್ತ್ರಾಧ್ಯಯನದಲ್ಲಿ ನಿಮಗಿರುವ ಆಸಕ್ತಿ ಖಂಡಿತ ಶ್ಲಾಘನೀಯ. 
  
  ಸದ್ಯಕ್ಕೆ ವಿಶ್ವನಂದಿನಿಯಲ್ಲಿ ಈ ಕೆಳಕಂಡ ನಿಯಮಗಳನ್ನು ಅನುಸರಿಸುತ್ತಿದ್ದೇನೆ. 
  
  ಸದಾಚಾರಸ್ಮೃತಿ ಮತ್ತು ಪೂಜಾನಿರ್ಣಯದ ವಿಷಯದಲ್ಲಿ ಸಾಕಷ್ಟು ಸಂಶೋಧನೆಯ ಅಗತ್ಯವಿದೆ.ಹೀಗಾಗಿ ಅದರ ಲೇಖನ ಮತ್ತು ಉಪನ್ಯಾಸಗಳು ಏಕಕಾಲಕ್ಕೆ ನೀಡಬಹುದು. ಶ್ರೀಮದ್ ಭಾಗವತವನ್ನೂ ಬರೆಯಲು ಸಮಯ ಸಾಕಾಗುತ್ತಿಲ್ಲ. ಮುಂದೆ ಸಮಯವಾಗುತ್ತಿದ್ದಂತೆ ಖಂಡಿತ ಬರೆದು ನೀಡುತ್ತೇನೆ. ಈಗ ಕೇಳಿ ಆಸ್ವಾದಿಸಬಹುದು. ಆಗ ಓದಿ ಮನನ ಮಾಡಬಹುದು. 
  
  
 • Vishwanandini User,

  6:18 PM , 30/08/2017

  🙏🙏
 • Vishwanandini User,

  4:22 PM , 30/08/2017

  Poojya acharyarege namaskaragalu
  
  Prikshitmaharajru muktavikunta pravesha mididaru anta heliddere.adre allige hogbekadre bhramadevra jote virajanadi snana agi lingadeha bhanga admele Alva.parikshitrajaru hegehodru dayamadi tilise🙏🙏🙏

  Vishnudasa Nagendracharya

  ಈಗ ಪರೀಕ್ಷಿದ್ರಾಜರು ಇರುವದು ಮುಕ್ತವೈಕುಂಠದಲ್ಲಿ ಅಲ್ಲ ಅಮುಕ್ತ ವೈಕುಂಠದಲ್ಲಿ. 
  
  ಭಗವಂತನದ ಧಾಮಗಳಲ್ಲಿ ಎರಡು ಭಾಗವಿದೆ, ಮುಕ್ತಭಾಗ ಮತ್ತು ಅಮುಕ್ತಭಾಗ ಎಂದು. ಅಂದರೆ ಮುಕ್ತ ವೈಕುಂಠ ಮತ್ತು ಅಮುಕ್ತ ವೈಕುಂಠ ಎಂದು ಎರಡು ವೈಕುಂಠಗಳಿವೆ. ಮುಕ್ತವೈಕುಂಠ ಲಕ್ಷ್ಮ್ಯಾತ್ಮಕವಾದದ್ದು, ಅಮುಕ್ತವೈಕುಂಠ ಪ್ರಾಕೃತವಾದದ್ದು. 
  
  ಮುಕ್ತಭಾಗದಲ್ಲಿ ಪರಿಪೂರ್ಣವಾಗಿ ಮುಕ್ತರಾದವರು (ಏಳೂ ಆವರಣಗಳನ್ನು ಕಳೆದು ಕೊಂಡವರು, ಭಾಗವತದ 17 ಮತ್ತು 18ನೆಯ ಉಪನ್ಯಾಸಗಳಲ್ಲಿ ಈ ವಿಷಯ ವಿಸ್ತೃತವಾಗಿ ನಿರೂಪಿತವಾಗಿದೆ,) ಮಾತ್ರ ಇರುತ್ತಾರೆ. ಅಮುಕ್ತ ವೈಕುಂಠದಲ್ಲಿ, ಮತ್ತೆ ಭೂಲೋಕದಲ್ಲಿ ಹುಟ್ಟುವ ಕರ್ಮವಿಲ್ಲದವರು, ಲಿಂಗಭಂಗಕ್ಕಾಗಿ ಕಾಯುವವರು ಮಾತ್ರ ಇರುತ್ತಾರೆ. 
  
  ಅಂದರೆ, ಅಪರೋಕ್ಷಜ್ಞಾನವಾದ ಬಳಿಕ, ಮತ್ತೆ ಜನನದ ಕರ್ಮವಿಲ್ಲದವರು ಮಹರ್ಲೋಕ, ಜನಲೋಕ, ತಪೋಲೋಕ, ಸತ್ಯಲೋಕ ಮತ್ತು ಅಮುಕ್ತವೈಕುಂಠದಲ್ಲಿ ವಾಸಿಸುತ್ತಾರೆ. ಬ್ರಹ್ಮಪ್ರಳಯದ ಸಂದರ್ಭದಲ್ಲಿ ಬ್ರಹ್ಮದೇವರ ಜೊತೆಯಲ್ಲಿ ವಿರಜಾನದಿ ಸ್ನಾನ ಮಾಡಿ ಲಿಂಗಭಂಗವನ್ನು ಪಡೆಯುತ್ತಾರೆ. 
  
  ಪರೀಕ್ಷಿದ್ರಾಜರದು ಚರಮದೇಹ. ಅವರು ಭಾಗವತವನ್ನು ಕೇಳಿದ ಬಳಿಕ ಆ ದೇಹವನ್ನು ತೊರೆದು ಅಮುಕ್ತವೈಕುಂಠವನ್ನು ಪಡೆದಿದ್ದಾರೆ. ಈ ಬ್ರಹ್ಮದೇವರ ಸಮಗ್ರ ಆಯುಷ್ಯ ಮುಗಿಯುವವರೆಗೆ ಅಲ್ಲಿಯೇ ಇದ್ದು, ಬ್ರಹ್ಮಪ್ರಳಯದ ಸಂದರ್ಭದಲ್ಲಿ ವಿರಜಾನದಿ ಸ್ನಾನವನ್ನು ಮಾಡಿ ಲಿಂಗಭಂಗವನ್ನು ಪಡೆದು ಪರಮಾತ್ಮನ ಉದರವನ್ನು ಪ್ರವೇಶಿಸಿ, ಮುಂದಿನ ಸೃಷ್ಟಿಯ ಆದಿಭಾಗದಲ್ಲಿ ಪರಮಾತ್ಮನ ಅನುಗ್ರಹವನ್ನು ಪಡೆದು ಪರಿಪೂರ್ಣವಾಗಿ ಮುಕ್ತರಾಗುತ್ತಾರೆ. 
  
  ಹೀಗಾಗಿ ಪರೀಕ್ಷಿದ್ರಾಜರಿಗೆ ಇನ್ನೂ ವಿರಜಾನದಿ ಸ್ನಾನವಾಗಿಲ್ಲ. ಲಿಂಗಭಂಗವಾಗಿಲ್ಲ. ಹೀಗಾಗಿ ಮುಕ್ತವೈಕುಂಠದಲ್ಲಿ ಅವರಿಗೆ ಪ್ರವೇಶವಿಲ್ಲ. ಅವರಿರುವದು ಅಮುಕ್ತವೈಕುಂಠದಲ್ಲಿ. 
  
  
 • Srikanta,Bangalore

  10:45 PM, 29/08/2017

  Thanks a lot gurugalu. Much awaited
 • Gururaj,MYSURU

  11:59 AM, 29/08/2017

  Naale inda namma jeevanada parva kaala aarambha..."pibata bhAgavata rasamAlayam" emba maatu naale inda satyavaagalide...tamage ananta namana poorvaka dhanyavadagalu pujya Acharyare...
 • H. Suvarna kulkarni,Bangalore

  4:33 AM , 29/08/2017

  ಆಚಾಯ೯ರಿಗೆ ಪ್ರಣಾಮಗಳು ಭಾಗವತ ಪ್ರವಚನ ಕೇಳಲು ಅತ್ಯಂತ ಉತ್ಸಾಹದಿಂದ ಕಾದು ಕುಳಿತಿದ್ದೇವೆ ನಮಗೂಜನ್ಮ ಜನ್ಮಾಂತರಗಳ ಪುಣ್ಯವಿರಬೇಕು ಮನೆಯಲ್ಲಿ ಭಾಗವತ ಪುಸ್ತಕ ಗಳಿವೆ ಆದರೆ ಗುರುಗಳಿಂದ ಕೇಳುವ ಭಾಗ್ಯ, ಆ ಸೊಬಗು ಸಿಕ್ಕಿತಲ್ಲ ನಾವು ತಲ್ಲೀನರಾಗಿಬಿಡುತ್ತೇವೆ ನಮ್ಮ ಜನ್ಮ ಸಾರ್ಥಕ ಧನ್ಯವಾದಗಳು
 • H. Suvarna kulkarni,Bangalore

  4:32 AM , 29/08/2017

  ಆಚಾಯ೯ರಿಗೆ ಪ್ರಣಾಮಗಳು ಭಾಗವತ ಪ್ರವಚನ ಕೇಳಲು ಅತ್ಯಂತ ಉತ್ಸಾಹದಿಂದ ಕಾದು ಕುಳಿತಿದ್ದೇವೆ ನಮಗೂಜನ್ಮ ಜನ್ಮಾಂತರಗಳ ಪುಣ್ಯವಿರಬೇಕು ಮನೆಯಲ್ಲಿ ಭಾಗವತ ಪುಸ್ತಕ ಗಳಿವೆ ಆದರೆ ಗುರುಗಳಿಂದ ಕೇಳುವ ಭಾಗ್ಯ, ಆ ಸೊಬಗು ಸಿಕ್ಕಿತಲ್ಲ ನಾವು ತಲ್ಲೀನರಾಗಿಬಿಡುತ್ತೇವೆ ನಮ್ಮ ಜನ್ಮ ಸಾರ್ಥಕ ಧನ್ಯವಾದಗಳು
 • H. Suvarna kulkarni,Bangalore

  4:32 AM , 29/08/2017

  ಆಚಾಯ೯ರಿಗೆ ಪ್ರಣಾಮಗಳು ಭಾಗವತ ಪ್ರವಚನ ಕೇಳಲು ಅತ್ಯಂತ ಉತ್ಸಾಹದಿಂದ ಕಾದು ಕುಳಿತಿದ್ದೇವೆ ನಮಗೂಜನ್ಮ ಜನ್ಮಾಂತರಗಳ ಪುಣ್ಯವಿರಬೇಕು ಮನೆಯಲ್ಲಿ ಭಾಗವತ ಪುಸ್ತಕ ಗಳಿವೆ ಆದರೆ ಗುರುಗಳಿಂದ ಕೇಳುವ ಭಾಗ್ಯ, ಆ ಸೊಬಗು ಸಿಕ್ಕಿತಲ್ಲ ನಾವು ತಲ್ಲೀನರಾಗಿಬಿಡುತ್ತೇವೆ ನಮ್ಮ ಜನ್ಮ ಸಾರ್ಥಕ ಧನ್ಯವಾದಗಳು
 • P N Deshpande,Bangalore

  9:09 AM , 28/08/2017

  S.Namaskagalu. Attanta uttamawad peethikea.SrimadaBhagwatwannu kelalu Jataka pakkshiyente kautteddewe
 • Kind.Raghtham Rao,Hubli

  1:38 PM , 27/08/2017

  Exllent pravachan by Acharaya
 • ಸುದರ್ಶನ ಶ್ರೀ. ಲ.,ಬೆಂಗಳೂರು

  1:17 PM , 27/08/2017

  ಭಗವಂತನ ಕಾರುಣ್ಯ ಅನಂತವಾದದ್ದು 🙏🙏🙏🙏🙏
 • Vishwanandini User,

  1:08 PM , 27/08/2017

  ಧನ್ಯವಾದ ಸ್ವಾಮಿ