22/09/2017
ವೇದಗಳಲ್ಲಿನ ತತ್ವಗಳನ್ನು ಯುಕ್ತಿಯಿಂದ ನಿರ್ಣಯ ಮಾಡಿಕೊಳ್ಳಬೇಕು ಎನ್ನುವದು ಆಚಾರ್ಯರ ಸಿದ್ಧಾಂತ. ವೇದಗಳ ಬೆಂಬಲವುಳ್ಳ ತರ್ಕದಿಂದ ಆಚಾರ್ಯರು ಜಗತ್ತಿನ ನಿರ್ಮಾತೃವಾದ ದೇವರೊಬ್ಬನಿದ್ದಾನೆ ಎಂದು ಪ್ರತಿಪಾದಿಸುತ್ತಾರೆ. ಆ ವಿಷಯದ ನಿರೂಪಣೆ ಇಲ್ಲಿದೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — ಜನ್ಮಾದ್ಯಸ್ಯ ಯತೋsನ್ವಯಾತ್ “ಇತರತಃ” ಚಾರ್ಥೇಷ್ವಭಿಜ್ಞಃ ಸ್ವರಾಟ್ ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ । ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। ಭಾಗವತತಾತ್ಪರ್ಯ — ಇತರತಃ । ತರ್ಕತಃ । ಚೇತನಾದ್ಧಿ ಪಿತ್ರಾದೇ ಪುತ್ರಾದಿರುತ್ಪದ್ಯತೇ । “ಯುಕ್ತಿತಶ್ಚೇತ್ತೃಪೂರ್ವಾದೇಃ”
Play Time: 43:13
Size: 7.86 MB