05/10/2017
ಸತ್ಯಂ ಪರಂ ಧೀಮಹಿ ಎಂಬ ಶ್ರೀ ವೇದವ್ಯಾಸದೇವರ ಆದೇಶದ ಅನುಸಾರವಾಗಿ ಮೊದಲ ಪದ್ಯದ ಅರ್ಥಾನುಸಂಧಾನವನ್ನೇನು ಮಾಡಿದ್ದೇವೆ ಅದರ ಧ್ಯಾನದ ಕ್ರಮವನ್ನು ಇಲ್ಲಿ ನೀಡಲಾಗಿದೆ. ಮನೆಯಲ್ಲಿ, ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಕೃಷ್ಣಾಜಿನ ಅಥವಾ ಮಣೆಯ ಮೇಲೆ ಕುಳಿತುಕೊಂಡು, ಧ್ಯಾನಕ್ಕೆ ಯಾವುದೇ ರೀತಿಯ ತೊಂದರೆಯೂ ಉಂಟಾಗದಂತೆ ಪರಿಸರವನ್ನು ನಿರ್ಮಿಸಿಕೊಂಡು ಕಣ್ಗಳನ್ನು ಮುಚ್ಚಿ ಈ ಉಪನ್ಯಾಸವನ್ನು ಕೇಳಿ. ಪ್ರವಚನದಲ್ಲಿ ಬರುವ ವಿಷಯಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲು ಆರಂಭಿಸಿ. ಧ್ಯಾನದ ಪ್ರಕ್ರಿಯೆ ಒಂದು ದಿವಸದಲ್ಲಿ ಸಿದ್ಧಿಸುವ ವಿದ್ಯೆಯಲ್ಲ. ಮುಂದಿನ ಧ್ಯಾನದ ಪ್ರವಚನ ಬರುವವರೆಗೆ ಇದನ್ನು ಸಾಧ್ಯವಾದರೆ ಪ್ರತೀದಿವಸ ಅಭ್ಯಾಸ ಮಾಡಿ. ಇಲ್ಲವಾದಲ್ಲಿ ವಾರಕ್ಕೆ ಮೂರು ಬಾರಿಯಾದರೂ ಅಭ್ಯಾಸ ಮಾಡಿ. ನಿಮ್ಮ ಜೀವಚೈತನ್ಯ ಪರಿಶುದ್ಧವಾದ ಅನುಭವವುಂಟಾಗುತ್ತದೆ. ವಿಶೇಷ ಸೂಚನೆ — ಇದು ನಡೆದಾಡುತ್ತ, ಮತ್ತೇನೋ ಕಾರ್ಯವನ್ನು ಮಾಡುತ್ತ ಕೇಳುವ ಪ್ರವಚನವಲ್ಲ.
Play Time: 01:00:02
Size: 11.04 MB