Upanyasa - VNU550

ಶ್ರೀಮದ್ ಭಾಗವತಮ್ — 54 — ವಿಷ್ಣುಸ್ಮರಣೆಯ ರಹಸ್ಯಗಳು

29/10/2017

ಪ್ರಶ್ನೆ ಯಾವ ರೀತಿ ಮಾಡಬೇಕೆನ್ನುವದನ್ನು ಶೌನಕರಿಂದ ಕಲಿಯಬೇಕು. ಅವರ ಪ್ರಶ್ನೆ ಅದೆಷ್ಟು ಅದ್ಭುತವಾಗಿದೆಯೆಂದರೆ ಸ್ವಯಂ ಸೂತಾಚಾರ್ಯರು ಉತ್ತರ ನೀಡುವ ಮುನ್ನ ಅವರ ಪ್ರಶ್ನೆಯನ್ನು ಪ್ರಶ್ನೆ ಮಾಡಿದ ಕ್ರಮವನ್ನು ಹೊಗಳಿ ಉತ್ತರಿಸುತ್ತಾರೆ. ನಮ್ಮ ಭಗವತ್ಪಾದಾಚಾರ್ಯರು ಶೌನಕರ ನಾಲ್ಕನೆಯ ಪ್ರಶ್ನೆಯಲ್ಲಿ ಅಡಕವಾಗಿರುವ ದೇವರ ಸ್ಮರಣೆಯ ಕುರಿತ ರಹಸ್ಯತತ್ವಗಳನ್ನು ನಮಗೆ ಕಾರುಣ್ಯದಿಂದ ಅರ್ಥ ಮಾಡಿಸುತ್ತಾರೆ. 

ದೇವರ ಸ್ಮರಣೆಯಿಂದ ಸಂಸಾರವೇ ಕಳೆಯುತ್ತದೆ ಎಂಬ ಭಾಗವತದ ಮಾತಿಗೆ ವ್ಯಾಖ್ಯಾನವನ್ನು ಮಾಡುತ್ತ ಆಚಾರ್ಯರು, ಸಂಸಾರವನ್ನು ಕಳೆಯುವ ವಿಷ್ಣುಸ್ಮರಣೆಯನ್ನು ಮಾಡಲು ಏರಬೇಕಾದ ಎತ್ತರ ಏನು ಎನ್ನುವದನ್ನು ಅದ್ಭುತವಾಗಿ ಅರ್ಥ ಮಾಡಿಸುತ್ತಾರೆ. ಭಗವತ್ಪಾದರ ಆ ಪವಿತ್ರವಚನಗಳ ಅರ್ಥಾನುಸಂಧಾನದೊಂದಿಗೆ ಶೌನಕರು ಮಾಡಿದ ನಾಲ್ಕನೆಯ ಪ್ರಶ್ನೆಯ ವಿವರ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

श्रीमद्भागवते प्रथमस्कन्धे प्रथमाध्यायः।

आपन्नः सम्सृतिं घोरां यन्नाम विवशो गृणन्।
ततः सद्यो विमुच्येत यं बिभेति स्वयं भवः ॥14॥

यत्पादसंश्रयाः सूत मुनयः प्रशमायनाः।
सद्यः पुनन्त्युपस्पृष्टाः स्वर्धुनीवानुसेवया॥ 15॥

श्रीमद् भागवततात्पर्यम् — 

विवशः बह्वभ्यासात्। उक्तं च स्कान्दे — 

“शारीराद् वाचिकाभ्यासो वाचिकान्मानसो भवेत्।
मानसाद् विवशान्मुच्येन्नान्यथा मुक्तिरिष्यते” इति ॥
Play Time: 33:59

Size: 6.60 MB


Download Upanyasa Share to facebook View Comments
3495 Views

Comments

(You can only view comments here. If you want to write a comment please download the app.)
 • Guruprasad m,Bangalore

  8:43 PM , 12/02/2018

  Guruji, just few days I came across this app and now in the last 10-12 days, I am so much attached to this, that I am squeezing at least 2-3 hours to listen to your great upanyasa. We are blessed to have this. Can you please help me in giving the same/ publication of the book on bhagavatha so I start reading parallelly ?

  Vishnudasa Nagendracharya

  Will complete the audio recording first... Then books. 
 • Shantha.raghothamachar,Bangalore

  12:15 PM, 14/11/2017

  ನಮಸ್ಕಾರ ಗಳು
 • P.R.SUBBA RAO,BANGALORE

  11:39 PM, 05/11/2017

  ಶ್ರೀ ಗುರುಭ್ಯೋನಮಃ
  SB054 - ಧ್ಯಾನ ಮಾಡುವಾಗ ದೈಹಿಕವಾಗಿ ಸ್ವಲ್ಪ ಕಷ್ಟವಾಯಿತು. ಒಂದು ಘಂಟೆ ಕಾಲ ಅಲ್ಲಾಡದೆ ಕುಳಿತುಕೊಳ್ಳುವುದೇ ಒಂದು ಸಾಧನೆ. ಅಂತಹದ್ದರಲ್ಲಿ ಶ್ರಿಮದಾಚಾರ್ಯರ ಪ್ರಶಿಷ್ಯರು ತಮ್ಮ ಗುರುಗಳ ಸೇವೆ ಮಾಡಲು ಇನ್ನೆಂತಹ ಪರಿಶ್ರಮ ಪಟ್ಟಿರಲಿಕ್ಕಿಲ್ಲ? ಇಂದ್ರಿಯ ನಿಗ್ರಹ ಎಂತಹ ಪರಿಯದ್ದು? ಅವರ ಮೇಲೆ ಭಗವಂತನ, ಗುರುಗಳ ಅನುಗ್ರಹ ಎಷ್ಟು ಇರಲಿಕ್ಕಿಲ್ಲ? ಅಬ್ಬಾ!!!
  ನಮಗೆ ಎಲ್ಲಾ ಅನುಕೂಲಗಳಿದ್ದೂ ಒದ್ದಾಡುತ್ತೇವೆ. ಗುರುಗಳು ಹೇಳಿದಂತೆ ಸತತ ವಿಷ್ಣು ಸ್ಮರಣೆಯಿಂದ, ಅವನ ಕರುಣೆಯಿಂದ/ಪ್ರೇರಣೆಯಿಂದ ಮಾತ್ರ ದೈಹಿಕ ಮಾನಸಿಕ ಹತೋಟಿ ಸಾಧಿಸಲಿಕ್ಕೆ ಸಾಧ್ಯ.
  ಗುರುಗಳ ಮಹಿಮೆ, ಕಾರುಣ್ಯ ಕೇಳಲಿಕ್ಕೆ ಮನೋಹರವಾಗಿತ್ತು. ಶ್ರಿಶೌನಕಾಚಾರ್ಯರು ನಮ್ಮ ಮೇಲಿನ ಅನುಗ್ರಹದಿಂದಲೆ ಅಲ್ಲವೇ ಪ್ರಶ್ನೆಗಳ ಮುಖಾಂತರ ಭಾಗವತದ ಹೊಳೆ ಹರಿಸಲು ಕಾರಣರಾದದ್ದು. ಇಂತಹ ಸಮಸ್ತ ಗುರು ಪರಂಪರೆಗೆ...
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • Mrs laxmi laxman padaki,Pune

  11:49 AM, 04/11/2017

  👏👏👏👏👏
 • P N Deshpande,Bangalore

  10:28 AM, 04/11/2017

  S.Namaskargalu. attyanta Shrestha rahasyywannu tilsi Bhagwantanannu heage hoandbeaku embdannu tilsi anuhraha maadiddri
 • H. Suvarna kulkarni,Bangalore

  7:22 PM , 03/11/2017

  ಗುರುಗಳಿಗೆ ಪ್ರಣಾಮಗಳು ಭಕ್ತಿ ಪರವಶರಾಗಿ ಭಗವಂತನ ನಾಮಸ್ಮರಣೆ ಮಾಡಬೇಕು ಎಂಬುದನ್ನು ತಿಳಿಸಿದಿರಿ ಅದನ್ನು ಕೇಳಿಯೇ ಮನಸ್ಸಿಗೆ ಅಘಾದ ಆನಂದವಾಯಿತು ಧನ್ಯವಾದಗಳು
 • prema raghavendra,coimbatore

  10:26 AM, 03/11/2017

  Anantha namaskara! Danyavada!
 • Niranjan Kamath,Koteshwar

  8:29 AM , 03/11/2017

  Shrimannarayan Smarane sada ellarinda aguthirali. Nimma prerane yinda dhanyaradevu.