Upanyasa - VNU552

ಪ್ರಥಮಸ್ಕಂಧ ಪ್ರಥಮಾಧ್ಯಾಯ

03/11/2017

ಶ್ರೀಮದ್ ಭಾಗವತದ ಮೊದಲನೆಯ ಸ್ಕಂಧದ ಮೊದಲನೆಯ ಅಧ್ಯಾಯದ ಪಾರಾಯಣ. 


श्री गुरुभ्यो नमः। 

परमगुरुभ्यो नमः। 

समस्तपरम्परागुरुभ्यो नमः। 

श्रीमदानन्दतीर्थभगवत्पादाचार्यगुरुभ्यो नमः। 

श्रीवेदव्यासाय नमः। 

समस्तदेवताभ्यो नमः। 

भारतीपतये मुख्यप्राणाय नमः। 

भैष्मीसत्यामेतश्रीगोपालकृष्णाय नमः। 

जन्माद्यस्य यतोऽन्वयादितरतश्‍चार्थेष्वभिज्ञः स्वराट्
 
तेने ब्रह्म हृदा य आदिकवये मुह्यन्ति यं सूरयः।

तेजोवारिमृदां यथा विनिमयो यत्र त्रिसर्गो मृषा

धाम्ना स्वेन सदा निरस्तकुहकं सत्यं परं धीमहि॥1॥

धर्मः प्रोज्झितकैतवोऽत्र परमो निर्मत्सराणां सतां

वेद्यं वास्तवमत्र वस्तु शिवदं तापत्रयोन्मूलनम्।

श्रीमद्भागवते महामुनिकृते किं वा परैरीश्‍वरः

सद्यो हृद्यवरुद्ध्यतेऽत्र कृतिभिः शुश्रूषुभिस्तत्क्षणात्॥2॥

निगमकल्पतरोर्गलितं फलं शुकमुखादमृतद्रवसंयुतम्।

पिबत भागवतं रसमालयं मुहुरहो रसिका भुवि भावुकाः॥3॥

नैमिशेऽनिमिषक्षेत्रे ऋषयः शौनकादयः।

सत्रं स्वर्गाय लोकाय सहस्रसममासत ॥4॥

त एकदा तु मुनयः प्रातर्हुतहुताशनाः।
सत्कृतं सूतमासीनं पप्रच्छुरिदमादृताः॥ 5॥

ऋषय ऊचुः —

त्वया खलु पुराणानि सेतिहासानि चानघ। 

आख्यातान्यप्यधीतानि धर्मशास्त्राणि तान्युत ॥ 6॥

यानि वेद विदां श्रेष्ठो भगवान् बादरायणः।

अन्ये च मुनयः सूत परावरविदो विदुः ॥7॥ 

वेत्थ त्वं सौम्य तत् सर्वं तत्त्वतस्तदनुग्रहात्।

ब्रूयुः स्निग्धस्य शिष्यस्य गुरवो गुह्यमप्युत ॥8॥

तत्रतत्राञ्जसाऽऽयुष्मन् भवता यद् विनिश्‍चितम्।

पुंसामेकान्ततः श्रेयस्तन्नः शंसितुमर्हसि ॥ 9॥

प्रायेणाल्पायुषो मर्त्याः कलावस्मिन् युगे जनाः।

मन्दाः सुमन्दमतयो मन्दभाग्या ह्युपद्रुताः ॥ 10॥

भूरीणि भूरिकर्माणि श्रोतव्यानि विभागशः।

अतः साधोऽत्र यत् सारं समुद्गृह्य मनीषया।

ब्रूहि भद्राय भूतानां येनात्माऽऽशु प्रसीदति ॥ 11॥

सूत जानासि भद्रं ते भगवान् सात्वतां पतिः।

देवक्यां वसुदेवस्य जातो यस्य चिकीर्षया ॥ 12॥

तन्नः शुश्रूषमाणानामर्हस्यङ्गानुवर्णितुम्।

यस्यावतारो भूतानां क्षेमाय विभवाय च ॥ 13॥

आपन्नः सम्सृतिं घोरां यन्नाम विवशो गृणन्।

ततः सद्यो विमुच्येत यं बिभेति स्वयं भवः ॥14॥

यत्पादसंश्रयाः सूत मुनयः प्रशमायनाः।

सद्यः पुनन्त्युपस्पृष्टाः स्वर्धुनीवानुसेवया॥ 15॥

को वा भगवतस्तस्य पुण्यश्‍लोकेड्यकर्मणः।

शुद्धिकामो न शृणुयाद् यशः कलिमलापहम्॥ 16॥

तस्य कर्माण्युदाराणि परिगीतानि सूरिभिः।

ब्रूहि नः श्रद्दधानानां लीलया दधतः कलाः॥ 17॥

अथाऽख्याहि हरेर्धीमन्नवतारकथाः शुभाः।

लीला विदधतः स्वैरमीश्‍वरस्याऽत्ममायया॥18॥

वयं तु न वितृप्याम उत्तमश्‍लोकविक्रमैः।

यच्छृण्वतां रसज्ञानां स्वादुस्वादु पदेपदे॥ 19॥

कृतवान् किल वीर्याणि सह रामेण केशवः।

अतिमर्त्यानि भगवान् गूढः कपटमानुषः॥ 20॥

कलिमागतमाज्ञाय क्षेत्रेऽस्मिन् वैष्णवे वयम्।

आसीना दीर्घसत्रेण कथायां सक्षणा हरेः॥ 21॥

त्वं नः सन्दर्शितो धात्रा दुस्तरं निस्तितीर्षताम्।

कलिं सत्वहरं पुंसां कर्णधार इवार्णवम्॥ 22॥

ब्रूहि योगेऽश्‍वरे कृष्णे ब्रह्मण्ये धर्मकर्मणि। 

स्वां काष्ठामधुनोपेते धर्मः कं शरणं गतः॥ 23॥

इति श्रीमत्कृष्णद्वैपायनकृते श्रीमद्भागवते प्रथमस्कन्धे प्रथमोऽध्यायः।

Play Time: 05:23

Size: 1.42 MB


Download Upanyasa Share to facebook View Comments
7165 Views

Comments

(You can only view comments here. If you want to write a comment please download the app.)
 • Shalini,Palamaner

  9:40 AM , 28/10/2019

  Kannada like please
 • Manoj,Bengaluru

  8:54 PM , 13/01/2019

  Where i can get this book. Plz mention the book name, and author
 • Laxmi laxman padaki,Gurgaon,Delhi

  7:30 AM , 30/09/2018

  ನಮಸಾಕ್ಕರಗಳು ಗುರುಗಳಿಗೆ.
 • Jayashree Karunakar,Bangalore

  4:27 PM , 01/01/2018

  gurugale please insert mangalacharane shloka also in this folder, it will be more easier for us to follow before bhagavatha parayana..
 • ಗಂಗಾ ಗೋಪಾಲಕೃಷ್ಣ ರಾವ್,ಬೆಂಗಳೂರು

  7:36 PM , 05/11/2017

  ಆಚಾರ್ಯರಿಗೆ ಪ್ರಣಾಮಗಳು.ನಾವು ಮಹಿಳೆಯರು ಈ ಶ್ಲೋಕಗಳ ಪಾರಾಯಣ ಮಾಡಬಹುದಾ

  Vishnudasa Nagendracharya

  ಶುದ್ಧ ಸದಾಚಾರವಿರುವ ಬ್ರಾಹ್ಮಣಸ್ತ್ರೀಯರು ಅವಶ್ಯವಾಗಿ ಭಾಗವತ-ಭಾರತ-ಗೀತಾ ಗ್ರಂಥಗಳನ್ನು ಗ್ರಂಥಪುರಸ್ಸರವಾಗಿ ಅಧ್ಯಯನ ಮಾಡಬಹುದು. ಶ್ರೀ ಕವೀಂದ್ರತೀರ್ಥರ ಪರಂಪರೆಯ ಭೂಷಾಮಣಿಗಳಾದ ಶ್ರೀ ಸುಮತೀಂದ್ರತೀರ್ಥಶ್ರೀಪಾದಂಗಳವರು ಈ ತತ್ವವನ್ನು ನಿರ್ಣಯಿಸಿ ತಿಳಿಸಿದ್ದಾರೆ. ವಾಯುಪುರಾಣದ ವಚನವನ್ನೂ ನೀಡಿದ್ದಾರೆ. 
  
  ತತ್ರ ಯಾ ಬ್ರಾಹ್ಮಣೀ ನಾರೀ 
  ತಸ್ಯಾಃ ಗ್ರಂಥಪುರಸ್ಸರಮ್
  ತಂತ್ರಜ್ಞಾನೇಧಿಕಾರೋಸ್ತಿ 
  
  ಈ ವಚನದಿಂದ ಹಾಗೂ 
  
  "ಸ್ತ್ರೀ ಶೂದ್ರ ಬ್ರಹ್ಮಬಂಧೂನಾಂ 
  ತ್ರಯೀ ನ ಶ್ರುತಿಗೋಚರಾ 
  ಇತಿ ಭಾರತಮಾಖ್ಯಾನಂ 
  ಕೃಪಯಾ ಮುನಿನಾ ಕೃತಮ್" 
  
  ಎಂಬ ವಚನದಿಂದಲೂ ನಿಸ್ಸಂದಿಗ್ಧವಾಗಿ ಸ್ತ್ರೀಯರು ವಿಷ್ಣುಸಹಸ್ರನಾಮ-ಗೀತಾ-ಭಾರತ-ಭಾಗವತಗಳನ್ನು ಗ್ರಂಥಪುರಸ್ಸರವಾಗಿಯೇ ಅಧ್ಯಯನ ಮಾಡಬಹುದು ಎಂದು ನಿರ್ಣಯವಾಗುತ್ತದೆ. 
  
  ಈ ವಿಷಯದಲ್ಲಿ ಸರಿಯಾದ ತಿಳುವಳಿಕೆಯಿಲ್ಲದ ಕೆಲವರು ಆಕ್ಷೇಪ ಮಾಡುತ್ತಾರೆ. ಸಮಯ ದೊರೆತ ತಕ್ಷಣ ಒಂದು ವಿಸ್ತೃತ ಚರ್ಚೆಯನ್ನು ಮಾಡಿ ಈ ತತ್ವವನ್ನು ಪ್ರತಿಪಾದಿಸುತ್ತೇನೆ. 
  
  ನೀವು ನಿಸ್ಸಂಶಯವಾಗಿ ಸಮಗ್ರ ಭಾಗವತವನ್ನು ಕಲಿತು ಪಾರಾಯಣ ಮಾಡಬಹುದು. 
  
  ಶುಭವಾಗಲಿ. 
  
 • Jayashree Karunakar,Bangalore

  9:17 PM , 12/11/2017

  ಗುರುಗಳೆ
  
   ಜೀವನದಲ್ಲಿ ನಾವು ಬೇರೆಯವರಿಂದ ಎದುರಿಸುವ ಅಸೂಯೆ, ಅನ್ಯಾಯ, ಮೋಸಗಳಂತಹ ಸಂಸಾರಿಕ ಒತ್ತಡಗಳನ್ನು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಎಂಬುದನ್ನು ಶ್ರೀಮದ್ಭಾಗವತದಿಂದ ಕಲಿಯುತಿದ್ದೇನೆ.
  
  ನಾವು ಪ್ರತೀನಿತ್ಯ ಶ್ರೇಷ್ಟವಾದ ತತ್ವಗಳನ್ನು ಶ್ರೀಮದ್ಭಾಗವತದಿಂದ ಕಲಿಯುತಿದ್ದೇವೆ, ಹಾಗಾಗಿ ಅವಿವೇಕಿಗಳಂತೆ ಕ್ಷುಲ್ಲುಕವಾದ ಕಾರಣಗಳಿಗೆ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾ , ನಮ್ಮ ಅಮೂಲ್ಯವಾದ ಸಮಯವನ್ನು ಹಾಳುಮಾಡಬಾರದು ಎನ್ನುವ ಎಚ್ಚರಿಕೆಯು ಆಶ್ಚರ್ಯಕರವಾದ ರೀತಿಯಲ್ಲಿ ಮನಸ್ಸಿಗೆ ತೋರುತ್ತದೆ.
  
  ತಾವು ಉಪನ್ಯಾಸದಲ್ಲಿ ಕೆಲವು ಶಬ್ದಗಳನ್ನು ಮತ್ತೆ ಮತ್ತೆ ಪುನರುಚ್ಚಾರಣೆ ಮಾಡಿ ಹೇಳುವ 
   ಆತ್ಮಮಾಯಯ, ಮುಂತಾದ  ಶಬ್ದಗಳಂತೂ ನನ್ನ ಮನಸ್ಸಿನಲ್ಲಿ ನೆಲೆ ನಿಂತು ಬಿಟ್ಟಿದೆ.
  ತಾವು ಹೇಳಿದಿರಿ ಶ್ರೀಮದ್ಭಾಗವತವು ಅದ್ಭುತವಾದ ರೀತಿಯಲ್ಲಿ ಪರಿಣಾಮನ್ನುಂಟುಮಾಡುತ್ತದೆ ಎಂದು , ಆದರೆ ಅದು ಇಂದು ನನ್ನ ಅನುಭವಕ್ಕೆ ಬರುತ್ತಿದೆ.
  ಜೀವನವನ್ನು ಎದುರಿಸವ ರೀತಿ, ಶ್ರೀಮದ್ಭಾಗವತದ ಶ್ರೇಷ್ಟವಾದ ತತ್ವಗಳನ್ನು ನಮ್ಮ ಮನಸ್ಸಿಗೆ ನಾಟುವಂತೆ ತಿಳಿಸುವ ನಿಮಗೂ, ನಿಮ್ಮೂಳಗೆ ನಿಂತು ನಮಗೆ ಜ್ಞಾನ,ಭಕ್ತಿ, ವ್ಯೆರಾಗ್ಯಗಳನ್ನು ನೀಡುವ ಗುರುಗಳಿಗೂ, ನಿಮ್ಮಲ್ಲಿ ನಿಂತು ಇಂತಹ ಜ್ಞಾನಕಾಯ೯ ಮಾಡಿಸುವ ಭಗವಂತನಿಗೂ ಭಕ್ತಿಪೂವ೯ಕ ನಮಸ್ಕಾರಗಳು.

  Vishnudasa Nagendracharya

  ದೇವರು ಗುರುಗಳ ಪರಮಾನುಗ್ರಹವಿದು. 
 • Jayashree Karunakar,Bangalore

  11:04 AM, 11/11/2017

  Acharyare it would have been more useful, if you could start samskritha surabhi also along with "srimadbhagavatha " 
  
  Because it will be more easier for us at least to identify the letters in the script of " Bhagavatha parayana". 
  
  When he hear this parayana, in your spiritual voice, it will be tempting us too sing along with you. But we find it difficult even to pronounce the same .
  Eagerness of learning the parayana made me to demand for the samskritha surabhi at the earliest, in spite of your huge gyanakarya gurugale. 
  Extreamly sorry for the pressure we are putting on you

  Vishnudasa Nagendracharya

  ಸಂಸ್ಕೃತಸುರಭಿಯ ನಿರ್ಮಾಣ ಅಷ್ಟು ಸುಲಭವಲ್ಲ. ತಯಾರಿ ನಡೆಯುತ್ತಿದೆ. ಸಮೀರ್ ಬದಾಮಿಯವರಂತೂ ಹಗಲಿರುಳೂ ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಅತ್ಯಂತ Complicated ಆದ APP ಅನ್ನು ಅತ್ಯಂತ ಸಿಂಪಲ್ಲಾಗಿ ನೀಡಲು ಕಾರ್ಯ ನಡೆಯುತ್ತಿದೆ.
  
  ಸಂಸ್ಕೃತಸುರಭಿಯಲ್ಲಿ ಸಂಸ್ಕೃತ ಕಲಿತ ಬಳಿಕವೂ ಭಾಗವತ ಕೇಳಿ. ಪಿಬತ ಭಾಗವತಂ ರಸಂ ಆಲಯಮ್ ಎಂದು ಶ್ರೀ ವೇದವ್ಯಾಸದೇವರು ಆದೇಶಿಸಿದ್ದಾರಲ್ಲವೇ. ಪಾಲಿಸೋಣ. ಮತ್ತೆಮತ್ತೆ ಕೇಳೋಣ. 
  
  ಮತ್ತೊಂದು ಮಾತು. ಭಾಗವತವನ್ನು ಕೇಳಿ ದೇವರ ಅನುಗ್ರಹ ಸಂಪಾದಿಸಿದರೆ ಸಂಸ್ಕೃತ ಬೇಗ ಬರುತ್ತದೆ. ಸಂಸ್ಕೃತ ಕಲಿತು ಭಾಗವತ ಕೇಳಿದರೆ ಮತ್ತಷ್ಟು ಸ್ಪಷ್ಟತೆ ದೊರೆಯುತ್ತದೆ. ಎರಡೂ ಒಂದಕ್ಕೊಂದು ಪೂರಕ. 
 • Kirana N A,Bengaluru

  4:47 PM , 05/11/2017

  ಗುರುಗಳಿಗೆ ನಮಸ್ಕಾರಗಳು. ೨೩ ಶ್ಲೋಕಗಳ ಅಥಾ೯ನುಸಂಧಾನನ್ನು ನಮಗೆಲ್ಲ ಅಥ೯ವಾಗುವ ಹಾಗೆ ಮಾಡಿದ ತಮಗೆ ಸಾಷ್ಟಾಂಗ ನಮಸ್ಕಾರಗಳು...🙏
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  7:39 AM , 05/11/2017

  ಆಚಾರ್ಯರಿಗೆ ನಮಸ್ಕಾರಗಳು. ನನ್ನ ಒಂದು ಸಣ್ಣ ಬೇಡಿಕೆ. ಈ ನಾರಾಯಣ ವನ್ನು ಕನ್ನಡದಲ್ಲೂ ಪ್ರಕಟಿಸಿದರೆ ಸಂಸ್ಕೃತ ಕಲಿಯದಿದ್ದವರಿಗೆ ಬಹಳ ಅನುಕೂಲ ವಾಗುತ್ತದೆ.

  Vishnudasa Nagendracharya

  ಒಂದೆರಡು ತಿಂಗಳಲ್ಲಿ ಆ ವ್ಯವಸ್ಥೆಯನ್ನೂ ಮಾಡುತ್ತೇನೆ. 
 • Ramesh Desai,Bellary

  6:38 AM , 05/11/2017

  ಏನ ಹೇಳಲಿ ಗುರುವೇ ?
  ಮನದಲಿ ಮೂಡುವ ಮುನ್ನವೇ ಬಯಕೆ
  ಕರುಣದಿ ಕರೆದು ಕೈಎತ್ತಿ ಕೊಡುತಿರುವಾಗ,
  ಚಿನ್ಮಯ ಚಿಂತನೆ ಚಿತ್ತದಿ ಚಿಗುರುವ ಮುನ್ನವೇ ಚಿನ್ನದ ಹರಿವಾಣದಿ ನೀಡುತಾ ಹರಸುತಿರುವಾಗ 
  ಮೌನಕ್ಕೆ ಶರಣಾಗಿ, ಕೈಗಳೆರಡೊಂದಾಗಿ ನಮೋ ಎಂದಿತು ಜೀವ, ತುಂಬಿದೆ ಮನದಲಿ ಧನ್ಯತಾ ಭಾವ.

  Vishnudasa Nagendracharya

  ಘೋರ ಕಲಿಯುಗದಲ್ಲಿಯೂ
  ಹರಿಯ ಕಥೆಯನ್ನು ಕೇಳುವ
  ಸುಜನರಿರುವಾಗ ನೀಡದಿದ್ದರೆ ತಪ್ಪಾದೀತಲ್ಲವೇ.. 
  
  ಹರಿವಾಯುದೇವತಾಗುರುಗಳು ಮಾಡಿಸುತ್ತಿದ್ದಾರೆ. ಅವರ ಚರಣಗಳಿಗೆ ಸರ್ವವೂ ಸಮರ್ಪಿತ. 
 • P N Deshpande,Bangalore

  9:42 AM , 05/11/2017

  S.Namaskargalu.it is very good for making practice with all shlokas & it is worth to be continued for all future addyasa

  Vishnudasa Nagendracharya

  ಖಂಡಿತ. ಪ್ರತಿಯೊಂದು ಅಧ್ಯಾಯದ ಉಪನ್ಯಾಸ ಮುಗಿಯುತ್ತಿದ್ದಂತೆ ಅದರ ಪಾರಾಯಣವನ್ನೂ ಇದೇ ರೀತಿ ಪ್ರಕಟಿಸುತ್ತೇನೆ. 
 • Preeti S Nayak.,HUBBLLI

  2:17 PM , 05/11/2017

  Dhnyavadagalu 👏👏👏👏👏👏👏👏👏👏
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  7:41 AM , 05/11/2017

  Correction please read as PARAYANA instead of NARAYANA.