27/11/2017
“ದೃಷ್ಟ ಏವಾsತ್ಮನೀಶ್ವರೇ” ಎಂಬ ಮಾತಿಗೆ ಜೀವನನ್ನೇ ಪರಬ್ರಹ್ಮ ಎಂದು ತಿಳಿದಾಗ ಮತ್ತು ಜೀವನಲ್ಲಿ ಪರಬ್ರಹ್ಮನನ್ನು ತಿಳಿದಾಗ ಎಂಬ ಎರಡೂ ಅರ್ಥವನ್ನು ಹೇಳಲು ಸಾಧ್ಯ. ಹಾಗಾದರೆ ಇಲ್ಲಿ ಜೀವಬ್ರಹ್ಮೈಕ್ಯದ ಅರ್ಥವನ್ನು ಸ್ವೀಕರಿಸಬೇಕೋ, ಜೀವಬ್ರಹ್ಮಭೇದದ ಅರ್ಥವನ್ನು ಸ್ವೀಕರಿಸಬೇಕೋ ಎನ್ನುವ ಪ್ರಶ್ನೆಯನ್ನು ಕೈಗೆತ್ತಿಕೊಂಡು ಚರ್ಚೆಯನ್ನು ಆರಂಭಿಸುವ ಶ್ರೀ ಭಗವತ್ಪಾದರು ಭೇದದ ಅರ್ಥವನ್ನೇ ಸ್ವೀಕರಸಿಬೇಕು ಎನ್ನುವದನ್ನು ಸರಳವಾದ ಕ್ರಮದಲ್ಲಿ ಆರ್ಥ ಮಾಡಿಸುತ್ತಾರೆ. ಮೊದಲಿಗೆ ಒಂದು ವಾಕ್ಯಕ್ಕೆ ಅರ್ಥವನ್ನು ಹೇಳಬೇಕಾದರೆ, ಅದಕ್ಕೆ ಮೂಲವಾಕ್ಯವಿದ್ದರೆ ಆ ಮೂಲವಾಕ್ಯದ ಅರ್ಥಾನುಸಾರಿಯಾಗಿ ಅರ್ಥವನ್ನು ಹೇಳಬೇಕು. ಭಾಗವತದ ಈ ವಾಕ್ಯದ ಮೂಲ ವಾಕ್ಯ ಆಥರ್ವಣೋಪನಿಷತ್ತಿನಲ್ಲಿದೆ. ಅದನ್ನು ಉದಾಹರಿಸುವ ಆಚಾರ್ಯರು ಆ ವಾಕ್ಯದಲ್ಲಿ ಭೇದದ ಅರ್ಥವೇ ಇದೆ ಎನ್ನುವದನ್ನು ತೋರಿಸಿಕೊಟ್ಟು ಶ್ರೀಮದ್ ಭಾಗವತದ ವಾಕ್ಯಗಳನ್ನೂ ಉದಾಹರಿಸಿ ಭಾಗವತದ ಸಿದ್ಧಾಂತ ಭೇದವೇ ಹೊರತು, ಅಭೇದವಲ್ಲ ಎನ್ನುವದನ್ನು ಪ್ರತಿಪಾದಿಸುತ್ತಾರೆ. ಆಚಾರ್ಯರ ಆ ಪರಮಮಂಗಳವಚನಗಳ ಯಥಾಮತಿ ಅರ್ಥಾನುಸಂಧಾನ ಈ ಭಾಗದಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕ — भिद्यते हृदयग्रन्थिश्छिद्यन्ते सर्वसंशयाः । क्षीयन्ते चास्य कर्माणि दृष्ट एवाऽत्मनीश्वरे ॥ २२ ॥ ಭಿದ್ಯತೇ ಹೃದಯಗ್ರಂಥಿಃ ಛಿದ್ಯಂತೇ ಸರ್ವಸಂಶಯಾಃ। ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟ ಏವಾऽತ್ಮನೀಶ್ವರೇ ।। ಭಾಗವತತಾತ್ಪರ್ಯದ ವಚನಗಳು — आत्मनीश्वर इति न जीवैक्यमुच्यते। परेषामपि ब्रह्मादीनां यतोऽवरत्वं स परावरः। “भेददृष्ट्याभिमानेन” इति च कापिलेये। “ब्रह्म प्रधानमुपयान्त्यगताभिमानाः” इति च। “विद्याऽऽत्मनि भिदाबोधः” ಆತ್ಮನೀಶ್ವರೇ ಇತಿ ನ ಜೀವೈಕ್ಯಮುಚ್ಯತೇ । ಪರೇಷಾಮಪಿ ಬ್ರಹ್ಮಾದೀನಾಂ ಯತೋsವರತ್ವಂ ಸ ಪರಾವರಃ । “ಭೇದದೃಷ್ಟ್ಯಾಭಿಮಾನೇನ” ಇತಿ ಚ ಕಾಪಿಲೇಯೇ । “ಬ್ರಹ್ಮ ಪ್ರಧಾನಮುಪಯಾಂತ್ಯಗತಾಭಿಮಾನಾಃ” ಇತಿ ಚ । “ವಿದ್ಯಾऽऽತ್ಮನಿ ಭಿದಾಬೋಧಃ”
Play Time: 39:00
Size: 7.60 MB