05/12/2017
ಭಾಗವತದಲ್ಲಿ 22 ಅವತಾರಗಳನ್ನು ಹೇಳುವಾಗ, ಮೊದಲು ಅವತಾರ ಮಾಡಿದ ನರಸಿಂಹರೂಪವನ್ನು ನಂತರ ಉಲ್ಲೇಖ ಮಾಡಿ, ನಂತರ ಅವತಾರ ಮಾಡಿದ ಕೂರ್ಮ, ಧನ್ವಂತರಿ, ಮೋಹನಿರೂಪಗಳನ್ನು ಮೊದಲು ಉಲ್ಲೇಖ ಮಾಡಲಾಗಿದೆ. ವರಾಹ ರೂಪದ ನಂತರ ಮತ್ಸ್ಯರೂಪವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ದಶಾವತರಗಳ ಉಲ್ಲೇಖದಲ್ಲಿಯೂ ಕೂರ್ಮ ಮೊದಲು ನರಸಿಂಹ ನಂತರ. ಈ ರೀತಿಯಾಗಿ ಕ್ರಮವನ್ನು ವ್ಯತ್ಯಾಸ ಮಾಡಿ ಉಲ್ಲೇಖಿಸುವ ಹಿಂದಿನ ಕಾರಣವನ್ನು ಆಚಾರ್ಯರು ತಂತ್ರಸಾರಸಂಗ್ರಹದಲ್ಲಿ ತಿಳಸಿದ್ದಾರೆ. ಶ್ರೀ ಶೇಷಚಂದ್ರಿಕಾಚಾರ್ಯರ ವಚನಗಳ ವಿವರಣೆಯೊಂದಿಗೆ ಆ ಪ್ರಮೇಯವನ್ನು ಇಲ್ಲಿ ನಿರೂಪಿಸಲಾಗಿದೆ. ಡಾರ್ವಿನ್ನಿನ ವಿಕಾಸವಾದವನ್ನು ಶಾಸ್ತ್ರವೂ ಒಪ್ಪಿದೆ ಎನ್ನುವ ಭರದಲ್ಲಿ ದಶಾವತಾರಗಳನ್ನು ವಿಕಾಸವಾದದೊಂದಿಗೆ ಸಮೀಕರಿಸುವ ಆಧುನಿಕರ ವಾದದ ವಿಮರ್ಶೆಯೊಂದಿಗೆ. ಮತ್ಸ್ಯ ಜಲಚರ, ಕೂರ್ಮ ಉಭಯಚರ, ವರಾಹ ಭೂಚರ, ನರಸಿಂಹ ಅರ್ಧಮೃಗ, ವಾಮನ ಪೂರ್ಣ ಬೆಳೆಯದ ಕುಳ್ಳ ಮನುಷ್ಯ, ಕೊಡಲಿ ಹಿಡಿದು ಕಂಡವರನ್ನು ಕೊಂದು ಹಾಕಿದ ಪರಶುರಾಮ ಒರಟ, ಸಮಸ್ಯೆಗೀಡಾದ ಮನುಷ್ಯ ರಾಮ, ವಿಪರೀತ ತುಂಟಾಟದ, ವಿಪರೀತ ಬೆಳವಣಿಗೆಯ ಮನುಷ್ಯ ಕೃಷ್ಣ, ಜ್ಞಾನೋದಯ ಪಡೆದ ಮನುಷ್ಯ ಬುದ್ಧ, ಕಡೆಗೆ ಎಲ್ಲರನ್ನೂ ಕೊಂದು ಹಾಕುವ ಕಲ್ಕಿ ಎಂದು ಬನ್ನಂಜೆ ಮುಂತಾದ ಕೆಲವು ಆಧುನಿಕರು ಹೇಳುತ್ತಾರೆ. ಆದರೆ ಮತ್ಸ್ಯಾದಿಗಳ ಕಾಲದಲ್ಲಿಯೇ ಪೂರ್ಣ ವಿಕಾಸಗೊಂಡ ಮನುಷ್ಯರಿದ್ದರು ಮುಂತಾದ ಕಾರಣಗಳೊಂದಿಗೆ ಅವರ ವಾದವನ್ನು ಇಲ್ಲಿ ವಿಮರ್ಶಿಸಲಾಗಿದೆ.
Play Time: 41:56
Size: 7.60 MB