18/10/2018
ಎಲ್ಲ ಶಬ್ದಗಳೂ ದೇವರ ಹೆಸರು ಹೇಗಾಗಲು ಸಾಧ್ಯ ಎನ್ನುವದಕ್ಕೆ ಶಾಸ್ತ್ರ ತಿಳಿಸುವ ಆರು ಕಾರಣಗಳ ವಿವರಣೆಯೊಂದಿಗೆ ದೇವರನ್ನು ಸರ್ವಶಬ್ದವಾಚ್ಯ ಎಂದು ಒಪ್ಪುವದರಿಂದ ಉಂಟಾಗುವ ಮಹತ್ತರ ಪ್ರಯೋಜನದ ಕುರಿತು ನಾವಿಲ್ಲಿ ಕೇಳುತ್ತೇವೆ. ವೇದಗಳು ಕೋಟಿ ಕೋಟಿ ದೇವರನ್ನು ಹೇಳುತ್ತವೆ ಎಂದು ಲೇವಡಿ ಮಾಡುವ ಜನರಿಗೆ, ವೇದಗಳಲ್ಲಿ ಕೋಟಿ ದೇವರು ದೂರ ಉಳಿಯಿತು ಇಬ್ಬರು ದೇವರನ್ನೂ ಸಹ ವೇದಗಳು ಉಲ್ಲೇಖಿಸುವದಿಲ್ಲ, ವೇದಗಳು ಹೇಳುವದು ಕೇವಲ ಒಬ್ಬ ದೇವರನ್ನು ಮಾತ್ರ ಎನ್ನುವ ಉತ್ತರದ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಎರಡನೆಯ ಸ್ಕಂಧ, ಎರಡನೆಯ ಅಧ್ಯಾಯ. ಶಬ್ದಸ್ಯ ಹಿ ಬ್ರಹ್ಮಣ ಏಷ ಪನ್ಥಾ ಯನ್ನಾಮಭಿರ್ಧ್ಯಾಯತಿ ಧೀರಪಾರ್ಥೈಃ। ಪರಿಭ್ರಮಂಸ್ತತ್ರ ನ ವಿನ್ದತೇಽರ್ಥಾನ್ ಮಾಯಾಮಯೇ ವಾಸನಯಾ ಶಯಾನಃ ।। ೨ ।। ಅತಃ ಕವಿರ್ನಾಮಸು ಯಾವದರ್ಥಃ ಸ್ಯಾದಪ್ರಮತ್ತೋ ವ್ಯವಸಾಯಬುದ್ಧಿಃ। ಸಿದ್ಧೇಽನ್ಯಥಾರ್ಥೇ ನ ಯತೇತ ತತ್ತತ್ಪರಿಶ್ರಮಂ ತತ್ರ ಸಮೀಕ್ಷಮಾಣಃ ।। ೩ ।। ಭಾಗವತತಾತ್ಪರ್ಯಮ್ । ಏಷಃ ಹರಿಃ । ಯದಪಾರ್ಥೈರ್ಧ್ಯಾಯತಿ । ತತ್ರಾರ್ಥಾನ್ ನ ವಿನ್ದತೇ । “ಸರ್ವನಾಮಾ ಯತೋ ವಿಷ್ಣುಸ್ತದನ್ಯಾರ್ಥಾನ್ ನತು ಸ್ಮರೇತ್ । ಸ್ಮರಂಸ್ತು ಯಾವದರ್ಥಃ ಸ್ಯಾತ್ ಅನ್ಯಥಾ ಸ್ವಾತ್ಮಹಾ ಸ್ಮೃತಃ” ಇತಿ ಬ್ರಹ್ಮಾಂಡೇ।
Play Time: 38:04
Size: 5.97 MB