Upanyasa - VNU709

ಶ್ರೀಮದ್ ಭಾಗವತಮ್ — 159 — ಮಹರಾದಿ ಲೋಕಗಳ ಮಾಹಾತ್ಮ್ಯ

23/10/2018

ಶಾಸ್ತ್ರಗಳು ಶೇಷದೇವರನ್ನು, ಕೂರ್ಮನನ್ನೂ ಜಗದಾಧಾರ ಎನ್ನುತ್ತವೆ, ಶಿಂಶುಮಾರನನ್ನೂ ಜಗದಾಧಾರ ಎನ್ನುತ್ತವೆ. ಈ ವಿರೋಧವನ್ನು ಪರಿಹಾರ ಮಾಡಿಕೊಳ್ಳುವ ಬಗೆಯೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ಮಹರ್ಲೋಕ, ಜನಲೋಕ, ತಪೋಲೋಕ, ಸತ್ಯಲೋಕಗಳ ಮಾಹಾತ್ಮ್ಯವನ್ನು ಕೇಳುತ್ತೇವೆ. 

ಮಹರ್ಲೋಕದಲ್ಲಿ ಮೂರು ತರಹದ ಆಯುಷ್ಯವುಳ್ಳ ಜನರಿರುತ್ತಾರೆ. ಅದರ ವಿವರಣೆಯೊಂದಿಗೆ ಬ್ರಹ್ಮಜ್ಞಾನಿಗಳ ಶರೀರ ಯಾವ ರೀತಿ ಇರುತ್ತದೆ ಎನ್ನುವದರ ನಿರೂಪಣೆಯೂ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ತದ್ ವಿಶ್ವನಾಭಿಂ ತ್ವಭಿಪದ್ಯ ವಿಷ್ಣೋರಣೀಯಸಾ ವಿರಜೇನಾಽತ್ಮನೈಕಮ್ ।
ನಮಸ್ಕೃತಂ ಬ್ರಹ್ಮವಿದಾಮುಪೈತಿ ಕಲ್ಪಾಯುಷೋ ಯದ್ ವಿಬುಧಾ ರಮಂತೇ  ।। ೨೮  ।।

“ಅಶೇಷಜಗದಾಧಾರಃ ಶಿಂಶುಮಾರೋ ಹರಿಃ ಪರಃ । 
ಸರ್ವೇ ಬ್ರಹ್ಮವಿದೋ ನತ್ವಾ ತಂ ಯಾನ್ತಿ ಪರಮಂ ಪದಮ್” ಇತಿ ಬ್ರಹ್ಮಾಂಡೇ ।

ತದ್ ವಿಷ್ಣೋಃ ವಿಶ್ವಾಧಾರಸ್ವರೂಪಂ ಪ್ರತಿಪದ್ಯ ಯತ್ರ ಕಲ್ಪಾಯುಷಸ್ತಂ ಮಹರ್ಲೋಕಮುಪೈತಿ।  
“ಮನ್ವಂತರಾಯುಷಃ ಸ್ವರ್ಗ್ಯಾಃ ಮಹರ್ಲೋಕೇ ತು ಕಾಲ್ಪಿಕಾಃ। 
ಆ ಬ್ರಹ್ಮಣೋ ಜನಾದ್ಯಾಸ್ತು ಮಹರ್ಲೋಕೇಽಪಿ ಯೇ ವರಾಃ” ಇತಿ ಬ್ರಾಹ್ಮೇ। 

(Explanation of the 29th shloka will be available in the coming Upanyasa)

ನ ಯತ್ರ ಶೋಕೋ ನ ಜರಾ ನ ಮೃತ್ಯುರ್ನಾಽಧಿರ್ನಚೋದ್ವೇಗ ಋತೇ ಕುತಶ್ಚಿತ್ ।
ಯಶ್ಚಿತ್ತತೋದಃ ಕ್ರಿಯಯಾಽನಿದಂವಿದಾಂ ದುರಂತದುಃಖಪ್ರಭವಾನುದರ್ಶನಾತ್  ।। ೩೦  ।।

ಋತೇ ಸತ್ಯಲೋಕೇ । ಅನಿದಂವಿದಾಂ ಅಬ್ರಹ್ಮವಿದಾಮ್ । ದುರಂತದುಃಖಂ ಚ ಪ್ರಭವಶ್ಚ ।

“ಸರ್ವದುಃಖವಿಹೀನಾ ಯೇ ಮುಕ್ತಾಃ ಪ್ರಾಯಸ್ತು ತಾದೃಶಾಃ । 
ಅಮುಕ್ತಾಸ್ತೇ ಜನಾದ್ಯೇಷು ವಿಶೇಷೇಣ ತು ಸತ್ಯಗಾಃ” ಇತಿ ವಾರಾಹೇ ।

“ವಿಷ್ಣೋರ್ಲೋಕಂ ತದೈವೇಕೇ ಯಾಂತಿ ಕಾಲಾಂತರೇ ಪರೇ ।
ಆಜ್ಞಯೈವ ಹರೇಃ ಕೇಚಿದಪೂರ್ತೇಃ ಕೇಚಿದಂಜಸಾ । 
ವಿಹೃತ್ಯೈವಾನ್ಯಲೋಕೇಷು ಮುಚ್ಯಂತೇ ಬ್ರಹ್ಮಣಾ ಸಹ” ಇತಿ ವಾಮನೇ ।


Play Time: 52:35

Size: 5.97 MB


Download Upanyasa Share to facebook View Comments
5409 Views

Comments

(You can only view comments here. If you want to write a comment please download the app.)
  • H.Suvarna kulkarni,Bangalore

    8:56 PM , 10/05/2019

    ಗುರುಗಳಿಗೆ ಭಕ್ತಿಯ ನಮನಗಳು