Upanyasa - VNU744

ಶ್ರೀಮದ್ ಭಾಗವತಮ್ — 183 — ದೇವರ ಮೂರು ಅಪೂರ್ವ ನಾಮಗಳು

06/04/2019

ಪುರುಷಸೂಕ್ತದ ವಿವರಣೆಯಲ್ಲಿ ನಾಲ್ಕನೆಯ ಭಾಗ

ಶ್ವೇತದ್ವೀಪ, ಅನಂತಾಸನ, ವೈಕುಂಠಗಳ ಕುರಿತ ಅಪೂರ್ವ ಮತ್ತು ರಹಸ್ಯ ವಿಷಯಗಳ ನಿರೂಪಣೆ ಈ ಭಾಗದಲ್ಲಿದೆ. ದೇವರ ಅಮೃತ, ಕ್ಷೇಮ, ಅಭಯ ಎಂಬ ರೂಪ-ನಾಮಗಳ ಚರ್ಚೆಯೊಂದಿಗೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

पादोऽस्य सर्वभूतानि पुंसः स्थितिविदो विदुः ।
अमृतं क्षेममभयं त्रिमूर्ध्नोऽधायि मूर्धसु ।। १८ ।।

भागवततात्पर्यम् ।

“स्वरूपांशो विभिन्नांश इति द्वेधांऽश इष्यते । 
अनन्तासनवैकुण्ठपद्मनाभाः स्वयं हरिः ।।
जीवा इमे विभिन्नांशा धर्माधर्मादिसंयुताः” इति वामने ।

सर्वस्य यथावत् स्थितिविदः ।

“त्रिमूर्धा सन् हरिर्धत्ते द्युत्रयं मूर्धभिस्त्रिभिः ।
अनन्तासनवैकुण्ठनारायणपुराणि तु ।
बहुलक्षोच्छ्रितेष्वेषु स वसत्यमृतो हरिः” इति मात्स्ये ।

Play Time: 35:04

Size: 5.51 MB


Download Upanyasa Share to facebook View Comments
6838 Views

Comments

(You can only view comments here. If you want to write a comment please download the app.)
  • Vikram Shenoy,Doha

    12:19 PM, 30/03/2020

    ಆಚಾರ್ಯರಿಗೆ ಅನಂತ ಧನ್ಯವಾದಗಳು. ಒಂದು ಪ್ರಶ್ನೆ: ನಮ್ಮ ಬರೀ ಕಣ್ಣಿಗೆ ಕಾಣುವ ಭೂಮಿ ( ಗುಂಡಗೆ)  ಮತ್ತೆ ಭಾಗವತದಲ್ಲಿ ನಿರೂಪಿಸಿದ ಭೂಮಂಡಲದಲ್ಲಿ ವ್ಯತ್ಯಾಸ ಏಕೆ??

    Vishnudasa Nagendracharya

    ಅತ್ಯಂತ ಗಂಭೀರ ಮತ್ತು ವಿಸ್ತಾರವಾದ ವಿಷಯ. ಶ್ರೀಮದ್ ಭಾಗವತದ ಐದನೆಯ ಸ್ಕಂಧದ ಉಪನ್ಯಾಸಗಳಲ್ಲಿ ವಿಸ್ತೃತವಾಗಿ ತಿಳಿಸುತ್ತೇನೆ. 
  • Shilpa,London

    8:00 PM , 20/03/2020

    ಆಚಾರ್ಯರಿಗೆ ಆದರ ಪೂರ್ವಕ ನಮಸ್ಕಾರಗಳು‌ 🙏🙏
    ಬ್ರಹ್ಮಾಂಡದ ಒಳಗೆ ‌ಶ್ವೇತದ್ವೀಪ ಮತ್ತು ವೈಕುಂಠ ಇದೆ ಅಂಥ ಹೇಳಿದ್ದಿರಾ.
    ಆದರೆ ಪ್ರಳಯ ಕಾಲದಲ್ಲಿ ಬ್ರಹ್ಮಾಂಡ ನಾಶ ಆಗುವಾಗ ಈ ಎರಡು ಲೋಕಗಳನ್ನು ಪರಮಾತ್ಮನು ಏನು ಮಾಡುತ್ತಾನೆ? ಇವು ಅಪ್ರಾಕೃತಾ, ಅದಕ್ಕೆ ನಾಶ ಇಲ್ಲ ಅಂಥ ಸಹಜ ಆದರೆ ಪ್ರಾಕೃತವಾದ ಬ್ರಹ್ಮಾಂಡ ನಾಶವಾದಾಗ ಏನು ಆಗುತ್ತದೆ ದಯವಿಟ್ಟು ತಿಳಿಸಿ

    Vishnudasa Nagendracharya

    ಶ್ವೇತದ್ವೀಪ ಅನಂತಾಸನ ಮತ್ತು ವೈಕುಂಠ ಇವು ಮೂರು ಪರಮಾತ್ಮನ ಧಾಮಗಳು. ಇವಕ್ಕೆ ಹುಟ್ಟಿಲ್ಲ ಮತ್ತು ನಾಶವಿಲ್ಲ.  ಸೃಷ್ಟಿಕಾಲದಲ್ಲಿ ಅಭಿವ್ಯಕ್ತ ಗೊಳಿಸುತ್ತಾನೆ, ಪ್ರಳಯಕಾಲದಲ್ಲಿ ಯಾರ ಕಣ್ಣಿಗೂ ಕಾಣಿಸದಂತೆ ಕಣ್ಮರೆ ಮಾಡುತ್ತಾನೆ. ಈ ಲೋಕಗಳಲ್ಲಿ ಇರುವ ಮುಕ್ತರೆಲ್ಲರೂ ಪ್ರಳಯಕಾಲದಲ್ಲಿ  ಪರಮಾತ್ಮನ ಉದರಪ್ರವೇಶ ಮಾಡಿ, ಆನಂದಭರಿತರಾಗಿರುತ್ತಾರೆ.  ಸೃಷ್ಟಿಕಾಲದಲ್ಲಿ ಮತ್ತೆ ಪರಮಾತ್ಮನ ಉದರದಿಂದ ಬಂದು ಈ ಲೋಕಗಳಲ್ಲಿ ವಿಹಾರ ಮಾಡುತ್ತಾರೆ. 
    
    ಇವೆಲ್ಲವನ್ನೂ ಈಗಾಗಲೇ ಶ್ರೀಮದ್ ಭಾಗವತ ಮತ್ತು ಶ್ರೀಮಧ್ವವಿಜಯದ ಹನ್ನೊಂದನೆಯ ಸರ್ಗಗಳ ಉಪನ್ಯಾಸಗಳಲ್ಲಿ ತಿಳಿಸಿದ್ದೇನೆ. 
  • prema raghavendra,coimbatore

    11:11 AM, 13/08/2019

    Anantha namaskara danyavada.
  • Mudigal sreenath,Bengulutu

    5:13 PM , 06/04/2019

    Acharyarige namanagalu.ksheera kuuda deepthi virodha.hali nolage belli coin kanisodilla.swathadweepa kuuda ksheera samudrada ache ide alva.adakke deepthi virodha yennu bahuda.

    Vishnudasa Nagendracharya

    ಮುಕ್ತ ಶ್ವೇತದ್ವೀಪಕ್ಕೆ ಸೂರ್ಯನ ಬೆಳಕಿನ ಆವಶ್ಯಕವಿಲ್ಲವಾದ್ದರಿಂದ, ಅಲ್ಲಿನ ಕ್ಷೀರ ಅಭ ಎಂದು ಕರೆಸಿಕೊಳ್ಳುತ್ತದೆ. 21 ನೆಯ ನಿಮಿಷದ ನಂತರ ಈ ವಿಷಯ ನಿರೂಪಿತವಾಗಿದೆ.