Upanyasa - VNU767

ಶ್ರೀಮದ್ ಭಾಗವತಮ್ — 204 — ಸರ್ವದಾ ಚಿಂತನೆ ಮಾಡಲೇಬೇಕಾದ ಭಗವಂತನ ಗುಣ

30/04/2019

ಮನಸ್ಸು ಗಾಸಿಗೊಂಡಾಗಲೂ, ದೇಹದಲ್ಲಿ ಆರೋಗ್ಯ ಇಲ್ಲದಾಗಲೂ ಯಾವ ಭಗವಂತನ ಗುಣದ ಚಿಂತನೆಯನ್ನು ಸರ್ವಥಾ ಬಿಡಬಾರದೋ ಅಂತಹ ಮಹತ್ತ್ವದ ಚಿಂತನೆಯನ್ನು ಭಗವಂತ ಬ್ರಹ್ಮದೇವರಿಗೆ ಉಪದೇಶಿಸುತ್ತಾನೆ. 

ಹಿಂದಿನ ಉಪನ್ಯಾಸಗಳಲ್ಲಿ ವಿಸ್ತಾರವಾಗಿ ತಿಳಿದಂತಹ ಚತುಃಶ್ಲೋಕೀ ಭಾಗವತದ ಸಂಗ್ರಹ ಇಲ್ಲಿದೆ. 

ಮನುಷ್ಯೋತ್ತಮರಿಂದ ಆರಂಭಿಸಿ ಬ್ರಹ್ಮದೇವರ ವರೆಗಿನ ಸಜ್ಜೀವರು ಭಗವಂತನನ್ನು ಯಾವ ರೀತಿ ಕಾಣುತ್ತಾರೆ ಎಂಬ ಅಪೂರ್ವ ವಿಷಯದ ವಿವರಣೆಯೊಂದಿಗೆ ಸೃಷ್ಟಿ ಮಾಡುವ ಮುನ್ನು ಬ್ರಹ್ಮದೇವರ ಮಾಡಿದ ಚಿಂತನೆ ಇಲ್ಲಿ ನಿರೂಪಿತವಾಗಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯಗಳ ವಚನಗಳು — 

एतावदेव जिज्ञास्यं तत्वजिज्ञासुनाऽऽत्मनः ।
अन्वयव्यतिरेकाभ्यां यत् स्यात् सर्वत्र सर्वदा ।। ३५ ।।

भागवततात्पर्यम् — अन्यभावाभावकाले देशे तद्विद्यमानाविद्यमानशक्तिमान् चेत्यन्वयव्यतिरेकः ।

एतन्मतं ममाऽतिष्ठ परमेण समाधिना ।
भवान् कल्पविकल्पेषु न विमुह्यति कर्हिचित् ।। ३६ ।।

श्रीशुक उवाच — 

सम्प्रदिश्यैवमजनो जनानां परमेष्ठिनः ।
पश्यतस्तस्य तद् रूपमात्मनो न्यरुणद्धरिः ।। ३७ ।।

अन्तर्हितेन्द्रियार्थाय हरयेऽवहिताञ्जलिः ।
सर्वभूतमयो विश्वं ससर्जेदं स पूर्ववत् ।। ३८ ।।

भागवततात्पर्यम् — “सर्वस्यापि प्रधानत्वात् स सर्वमय ईर्यते” इति च ।

Play Time: 46:48

Size: 5.51 MB


Download Upanyasa Share to facebook View Comments
6921 Views

Comments

(You can only view comments here. If you want to write a comment please download the app.)
 • DESHPANDE P N,BANGALORE

  8:20 PM , 11/05/2019

  S.Namaskargalu. Anugrahvirali
 • Jasyashree Karunakar,Bangalore

  8:25 PM , 04/05/2019

  ಗುರುಗಳೆ 
  
  ಭಾಗವತವನ್ನು ಓದಬಾರದು , ಶ್ರವಣಮಾಡಬೇಕು ಅಂತ ಎಲ್ಲರೂ ಹೇಳುತ್ತಾರೆ....
  
  ಯಾಕೆ ಅಂತ ನಿಮ್ಮ ಉಪನ್ಯಾಸಗಳನ್ನು ಶ್ರವಣ ಮಾಡಲು ಪ್ರಾರಂಭಿಸಿದ ನಂತರವೇ ಗೊತ್ತಾಗಿದ್ದು....🙏🙏
 • T venkatesh,Hyderabad

  3:00 PM , 04/05/2019

  This upanyasa successfully explains to us the easiest possible way to get over our vices.
 • Jasyashree Karunakar,Bangalore

  4:01 PM , 03/05/2019

  "ಸ್ವತಂತ್ರನಾದ ಭಗವಂತನಿಗೆ ಅಸ್ವಾತಂತ್ರರಾದ ಸಕಲಜೀವ, ಜಡರಿಂದಲೂ ಎನೂ ಪ್ರಯೋಜನವಿಲ್ಲದವನಾಗಿ, ಅವರವರ ಯೋಗ್ಯತೆಗನುಗುಣವಾಗಿ, ತನ್ನ ಗುಣಗಳನ್ನು ಅಭಿವ್ಯಕ್ತಿಗೊಳಿಸಿಕೊಳ್ಳುವ, ಭಗವಂತ, ಸವ೯ ಕಾಲದಲ್ಲಿಯೂ ಅನಂತಗುಣ ಪರಿಪೂಣ೯ನಾಗಿದ್ದಾನೆ"
  
  ಚತುಃಶ್ಲೋಕೀ ಭಾಗವತವನ್ನು ಉಪನ್ಯಾಸದ ಅವಧಿಮುಗಿದರೂ, ಕಿವಿಗಳಲ್ಲಿ ಇನ್ನೂ ಪ್ರತಿಧ್ವನಿಸುತ್ತಿರುವ ಹಾಗೆ ವೖಭವದ ಶ್ರವಣನೀಡಿದ ಗುರುಗಳ ಚರಣಕ್ಕೆ ಶರಣು 🙏....
  
   ನಾಲ್ಕು ದಿನಗಳಿಂದ ಮನಸ್ಸು ಶ್ವೇತದ್ವೀಪದಲ್ಲಿದ್ದುಕೊಂಡು ಸಂಭ್ರಮ ಪಡುತ್ತಿತ್ತು....
  
  ಇದೀಗ ಗುರುಗಳು ಗಂಗಾತಟ ಅಂತ ಹೇಳಿದಾಗಲೇ ಶುಕಾಚಾಯ೯ರು ಮತ್ತು ಪರೀಕ್ಷಿತ ಮಹಾರಾಜರು ಇರುವ ಗಂಗಾತಟಕ್ಕೆ ಬಂದದ್ದು....
  
  ಆದರೆ ನಾವಿರುವದು ನಮ್ಮ ಮನೆಯಲ್ಲಿಯೇ ಅಂತ ಗೊತ್ತಾಗಿದ್ದು ಉಪನ್ಯಾಸ ಮುಗಿದಾಗಲೇ....!!! 
  
  ಮನುಷ್ಯೋತ್ತಮರು, ದೇವತೆಗಳು, ರುದ್ರದೇವರು, ಬ್ರಹ್ಮದೇವರು, ಯಾವ ರೀತಿಯಾಗಿ ಭಗವಂತನನ್ನು ಕಾಣುತ್ತಾರೆ ಅನ್ನುವದನ್ನೂ ಸಹ, ಉದಾಹರಣೆ ನೀಡದೆ ಅಥ೯ಮಾಡಿಕೊಳ್ಳುವ ಯೋಗ್ಯತೆವಿಲ್ಲದಿರುವಷ್ಟು ಸಣ್ಣವರು ನಾವು.... ನಮಗೆಲ್ಲಿಯ ಶ್ವೇತದ್ವೀಪ....?
  
  ಆದರೂ ನಮ್ಮ ಇರುವಿಕೆಯನ್ನೇ ಮರೆಸುವಂತಹ ಸನ್ನಿವೇಶಗಳನ್ನು, ವಿಷಯಗಳನ್ನು ಶ್ರೀಮದ್ಭಾಗವತದಿಂದ ಗುರುಗಳ ಮೂಲಕ ತಿಳಿಯುತ್ತಿರುವ ಧನ್ಯರು ನಾವು....
  
  ಆ ಬ್ರಹ್ಮದೇವರು ಸೃಷ್ಟಿ ಮಾಡುವ ಸಾಮಥ್ಯ೯ವನ್ನು ಪಡೆದು, ಶ್ವೇತದ್ವೀಪದಿಂದ ಮರಳಿ ಪದ್ಮದಲ್ಲಿ ಕುಳಿತು, ಹಿಂದಿನ ಕಲ್ಪದಲ್ಲಿದ್ದಂತಹ ಸವ೯ ಲೋಕಗಳನ್ನು ಕಾಣುವ ಪರಿಯನ್ನು , ಹೇಳಿದ ಗುರುಗಳು.... 
   ನೀಡಿದ ಉಪನ್ಯಾಸದ ವೖಭವವನ್ನು ಯಾವ ಶಬ್ದಗಳಿಂದ ಹೇಳಲಿ...?
  
  ಭಕ್ತಿಯ ನಮಸ್ಕಾರವೂಂದನ್ನು ಬಿಟ್ಟು ಬೇರೇನೂ ಮಾಡಲು, ಹೇಳಲು ಸಾಧ್ಯವಿಲ್ಲ...🙏