Upanyasa - VNU799

ಶ್ರೀಮದ್ ಭಾಗವತಮ್ — 223 — ತತ್ವವನ್ನು ನೆನಪಿಟ್ಟುಕೊಳ್ಳಲು ಏನು ಮಾಡಬೇಕು

07/08/2019

ಪ್ರವಚನ ಕೇಳಬೇಕಾದರೆ, ಪಾಠ ಕಲಿಯಬೇಕಾದರೆ ತತ್ವ ತಿಳಿಯುತ್ತದೆ, ಆದರೆ ಅದು ನೆನಪಿನಲ್ಲುಳಿಯುವದಿಲ್ಲ. ಕಲಿತ, ತಿಳಿದ ಎಲ್ಲ ಭಗವತ್-ತತ್ವಗಳೂ ಸದಾ ನೆನಪಿನಲ್ಲುಳಿಯಲು ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಶ್ರೀಮದ್ ಭಾಗವತ ನೀಡಿದ ಉತ್ತರದ ವಿವರಣೆ ಇಲ್ಲಿದೆ. 

ಕಲಿ ನಮ್ಮನ್ನು ಸಾವಿರಾರು ಕ್ರಮದಲ್ಲಿ ಆಕ್ರಮಿಸಿ, ನಾವು ಸಾಧನೆ ಮಾಡದಂತೆ ನಮ್ಮನ್ನು ತಡೆಯುತ್ತಾನೆ. ಆ ಕಲಿಯ ಆಕ್ರಮಣವನ್ನು ಮೀರಿ ಸಾಧನೆಯನ್ನು ಮಾಡುವ ಉಪಾಯವನ್ನು ಉದ್ಧವರು ಈ ಪ್ರಸಂಗದಲ್ಲಿ ತಿಳಿಯುತ್ತಾರೆ,. 

ವಾಯುಸ್ತುತಿಯ “ಅಸ್ಮಿನ್ನಸ್ಮದ್ಗುರೂಣಾಂ” ಎಂಬ ಶ್ಲೋಕದ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — 

को वा अमुष्याङ्घ्रिसरोजरेणुं विस्मर्तुमीशेत पुमान् विजिघ्रन्। 
यो विस्फुरद्भ्रूविटपेन भूमेर्भारं कृतान्तेन तिरश्चकार ॥१८॥

श्रीमद्विजयध्वजीयम् — विस्फुरदभ्रूविटपेन विस्फुरन्त्योः भ्रमन्त्योभ्रुवोर्विटपेन लेशेन। कृतान्तेन कालोपमेन ॥१८॥

Play Time: 49:12

Size: 5.51 MB


Download Upanyasa Share to facebook View Comments
7185 Views

Comments

(You can only view comments here. If you want to write a comment please download the app.)
  • prema raghavendra,coimbatore

    9:47 AM , 14/11/2019

    Anantha namaskara! Danyavada!
  • DESHPANDE P N,BANGALORE

    9:31 AM , 11/08/2019

    S.N. karma Sankalp, samarpanea, mattu anusthana muuru Divya updesa sadakara sadhaneagea attyanta rahsyyawaada updesha
  • Jasyashree Karunakar,Bangalore

    3:20 PM , 10/08/2019

    ಗುರುಗಳೆ
    
    ಹಾಲನ್ನು ಶೇಖರಿಸಿಡುವ ಪಾತ್ರೆಯಿಂದಾರಂಭಿಸಿ, ತುಪ್ಪ ಮಾಡುವವರೆಗಿನ ಪ್ರಕ್ರಿಯೆಯನ್ನು,  ನಾವು  ಮಾಡುವ ತತ್ವದ   ಶ್ರವಣಕ್ಕೆ  ಸಮೀಕರಿಸಿದ ರೀತಿಯೇ 
    ಬಲು ಸೊಗಸಾಗಿತ್ತು....ಮತ್ತು ಅಥ೯ಪೂಣ೯ವಾಗಿತ್ತು...
    
    ನೀವು ನೀಡುವ ಉದಾಹರಣೆಗಳೇ ಅದ್ಭುತವಾಗಿರುತ್ತದೆ ...
    
     ನೀವು ಹೇಳುವ ಭಗವದ್ತತ್ವಗಳನ್ನು    ತಿಳಿಯುತ್ತಾ ಹೋದಂತೆ ಮನಸ್ಸು ಬುದ್ಧಿಗಳು ಶ್ರೀಮಂತವಾಗುತಿದೆ...
    
    ಬಹು ಜನ್ಮದಿ ಪಡೆದ ಈಸೌಭಾಗ್ಯಕೆ...
    ಹೃದಯವು ತುಂಬಿ ಬರುತಿದೆ...
    
    ಶಿರವು ಬಾಗುತಲಿದೆ....
    ತನ್ನತನವ ಕಳೆದುಕೊಳ್ಳುತಾ....
  • Vishwnath MJoshi,Bengaluru

    6:44 AM , 09/08/2019

    ಗುರುಗಳ ಪಾದಗಳಿಗೆ ನಮಸ್ಕಾರ ,ನಾವು ಸ್ನಾನ ಮಾಡುವಾಗ ,ನಿರ್ಮಾಲ್ಯ ತೀರ್ಥವನ್ನು ನಮ್ಮ ಮೇಲೆ ಅಭಿಷೇಕ ಮಾಡಿ ಕೋಳ್ಳ ಬೇಕಾದರೆ ,ಮೋದಲು ಬಂದು ಸ್ನಾನ ಮಾಡಿ ಶುಧ್ಧೀ ಮಾಡಿಕೊಂಡು ಆಮೆಲೆ ನಮ್ಮ ತಲೆಯ ಮೇಲೆ ನಿರ್ಮಾಲ್ಯ ತೀರ್ಥ ಹಾಕಿಕೊಳ್ಳಬೇಕೆ? ,ಇದು ಸರಿಯಾದ ಕ್ರಮಾನಾ ದಯವಿಟ್ಟು ತಿಳಿಸಿ

    Vishnudasa Nagendracharya

    ಹಿಂದಿನ ದಿನ ಪೂಜೆಯಾದ ನಂತರ ನಿರ್ಮಾಲ್ಯ ತೀರ್ಥವನ್ನು,  ಮಾರನೆಯ ದಿವಸ ಸ್ನಾನಕ್ಕಿಂತ ಮುಂಚೆ ತೆಗೆದುಕೊಳ್ಳಲು ಅನುಕೂಲವಾಗುವಂತಹ ಕಡೆಯಲ್ಲಿ, (ಬೀಳುವಂತೆ, ಚೆಲ್ಲುವಂತೆ ಇಡಬಾರದು) ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. 
    
    ಮಾರನೆಯ ದಿವಸ ಶೌಚ, ದಂತಧಾವನ್ನಗಳನ್ನು ಮುಗಿಸಿ ದೇವರಿಗೆ ನಮಸ್ಕಾರ ಮಾಡಿ, ಹಿಂದಿನ ದಿವಸ ಇಟ್ಟಿರುವ ಆ ನಿರ್ಮಾಲ್ಯ ತೀರ್ಥವನ್ನು ತೆಗೆದುಕೊಂಡು  ಸ್ನಾನಕ್ಕೆ ತೆರಳಬೇಕು. 
    
    ದೇಹದ ಕೊಳೆಯನ್ನು ಕಳೆದುಕೊಳ್ಳುವ ಹಂತದ ಸ್ನಾನ ಮುಗಿದ ಬಳಿಕ, ಆ ನಿರ್ಮಾಲ್ಯ ತೀರ್ಥವನ್ನು ತಲೆಯ ಮೇಲೆ ಹಾಕಿಕೊಳ್ಳಬೇಕು. 
    
    ಆ ನಂತರ ಮತ್ತೆ ಸ್ನಾನವನ್ನು ಮುಂದುವರೆಸಬೇಕು. 
    
    
  • Vikram Shenoy,Doha

    12:53 PM, 08/08/2019

    ನಾವು ಏನು ಪಡೆದಿದ್ದೇವೆ ಎಂದು ಎಚ್ಚರವಿಲ್ಲ.ಈ ಮಾತು ಪರಮ ಸತ್ಯ ಆಚರ್ಯರೆ!! ಶ್ರೀಮದ್ ಆನಂದತೀರ್ಥ ರ ಅನುಗ್ರಹ ಅಗತ್ಯ