04/11/2019
ತೋಟಂತಿಲ್ಲಾಯರಿಗೊಬ್ಬ ಮಗ. ಅವನ ಹೆಸರೂ ವಾಸುದೇವನೆಂದೆ. ಆಚಾರ್ಯರ ಸಮವಯಸ್ಕ, ಗೆಳೆಯ. ಅವನಿಗೆ ಹುಟ್ಟಿನಿಂದ ಇದ್ದ ಭರಿಸಲಾಗದ ತಲೆನೋವನ್ನು ಆಚಾರ್ಯರು ಪರಿಹರಿಸಿದ ಅದ್ಭುತ ಚರಿತ್ರೆಯನ್ನು ಇಲ್ಲಿ ಕೇಳುತ್ತೇವೆ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ತತ್ವಪ್ರದೀಪದಲ್ಲಿ ತಿಳಿಸಿದ ಮಹಾಮಾಹಾತ್ಮ್ಯದ ಚಿಂತನೆಯೊಂದಿಗೆ. ಗುರುಪುತ್ರನ ಪ್ರಾರ್ಥನೆಯಂತೆ ಅವನಿಗೆ ಅವನ ಹಿಂದಿನ ಎಲ್ಲ ಜನ್ಮಗಳ ಜ್ಞಾನವನ್ನು ಕರುಣಿಸಿದ ದಿವ್ಯಮಾಹಾತ್ಮ್ಯದ ಚಿತ್ರಣವೂ ಇಲ್ಲಿದೆ. ಪ್ರಿಯವಯಸ್ಯಶಿರೋಗುರುವೇದನಾಂ ಅಶಮಯತ್ ಸಹಜಾಮಪಿ ದುಸ್ಸಹಾಮ್। ಸ ವಿಪಿನೇ ವಿಜನೇ ಮುಖವಾಯುನಾ ಶ್ರವಣಗೋಚರಿತೇನ ಕದಾಚನ । ಸ್ಪೃಷ್ಟಂ ಕರೇಣ ವಿಷಮಪ್ಯಮೃತಾಯ ದೃಷ್ಟಂ ಯಸ್ಯೋದಯಃ ಸ ಭಗವಾನ್ ಯದು ರಾತಿ ಕಿಂಚಿತ್। ತದ್ ಭೇಷಜಂ ಗದವತಾಂ ಪ್ರತಿಕ್ಲೃಪ್ತಮಾಯು- ರ್ವೇದೇ ಸುಸಿದ್ಧಮಮುನೇತ್ಯವಿಚಾರ್ಯಮೇತತ್ ।
Play Time: 15:52
Size: 4.59 MB