29/08/2018
ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ಪಾದಪದ್ಮಗಳ ಸ್ಪರ್ಶ ಪಡೆದ ಧೂಳಿಯಿಂದ ದೇಹವನ್ನು ಅಲಂಕರಿಸಿಕೊಳ್ಳುವ ಶ್ರೀ ಯೋಗೀಂದ್ರತೀರ್ಥರೇ ಮೊದಲಾದ ಮಹಾನುಭಾವರ, ಅವರ ಪಾದಕಮಲಗಳಲ್ಲಿಯೇ ಮನಸ್ಸನ್ನು ನೆಟ್ಟಂತಹ ಶ್ರೀ ಜಗನ್ನಾಥದಾಸಾರ್ಯರೇ ಮೊದಲಾದ ಮಹಾನುಭಾವರ, ಅವರ ಗುಣಗಳನ್ನು ಸ್ತೋತ್ರಮಾಡುವದಕ್ಕಾಗಿಯೇ ತಮ್ಮ ವಾಕ್-ಶಕ್ತಿಯನ್ನು ಬಳಸುವ ಶ್ರೀ ವಾದೀಂದ್ರತೀರ್ಥರೇ ಮೊದಲಾದ ಮಹಾನುಭಾವರ ಮಾಹಾತ್ಮ್ಯವನ್ನು ನಾವಿಲ್ಲಿ ತಿಳಿಯುತ್ತೇವೆ. ಸರ್ವತಂತ್ರಸ್ವತಂತ್ರ ಎಂಬ ಶಬ್ದದ ಅರ್ಥವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ರಾಯರ ಸ್ತೋತ್ರದ ಶ್ಲೋಕಗಳು — ಯತ್-ಪಾದ-ಕಂಜ-ರಜಸಾ ಪರಿಭೂಷಿತಾಂಗಾ ಯತ್-ಪಾದ-ಪದ್ಮ-ಮಧುಪಾಯಿತ-ಮಾನಸಾ ಯೇ | ಯತ-ಪಾದ-ಪದ್ಮ-ಪರಿಕೀರ್ತನ-ಜೀರ್ಣ-ವಾಚಃ ತದ್-ದರ್ಶನಂ ದುರಿತ-ಕಾನನ-ದಾವ-ಭೂತಮ್ || ೯ || ಸರ್ವ-ತಂತ್ರ-ಸ್ವತಂತ್ರೋಽಸೌ ಶ್ರೀ-ಮಧ್ವ-ಮತ-ವರ್ಧನಃ | ವಿಜಯೀಂದ್ರ-ಕರಾಬ್ಜೋತ್ಥ- ಸುಧೀಂದ್ರ-ವರ-ಪುತ್ರಕಃ || ೧೦ || ಶ್ರೀರಾಘವೇಂದ್ರೋ ಯತಿ-ರಾಡ್ ಗುರುರ್ಮೇ ಸ್ಯಾದ್ ಭಯಾಪಹಃ | ಜ್ಞಾನ-ಭಕ್ತಿ-ಸು-ಪುತ್ರಾಯು- ರ್ಯಶಃ-ಶ್ರೀ-ಪುಣ್ಯ-ವರ್ಧನಃ || ೧೧ || ಪ್ರತಿ-ವಾದಿ-ಜಯ-ಸ್ವಾಂತ- ಭೇದ-ಚಿಹ್ನಾದರೋ ಗುರುಃ | ಸರ್ವ-ವಿದ್ಯಾ-ಪ್ರವೀಣೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೨ || ಅಪರೋಕ್ಷೀಕೃತ-ಶ್ರೀಶಃ ಸಮುಪೇಕ್ಷಿತ-ಭಾವಜಃ | ಅಪೇಕ್ಷಿತ-ಪ್ರದಾತಾಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೩ ||
Play Time: 32:02
Size: 7.33 MB