Pooja Nirnaya



Upanyasas - VNU483

ಗುರುದೇವತಾಭಿಷೇಕ

 ನಮ್ಮ ಮನೆಯಲ್ಲಿ ಯಾವ ಗುರುಗಳ ಹಾಗೂ ಯಾವ ದೇವತೆಗಳ ಪ್ರತೀಕಗಳಿರಬೇಕು, ಅವುಗಳಲ್ಲಿ ಸಾನ್ನಿಧ್ಯವನ್ನು ತುಂಬುವ ಸಂಕ್ಷಿಪ್ತಕ್ರಮದ ವಿವರಣೆ,  ಗುರು ದೇವತೆಗಳಿಗೆ ನಿರ್ಮಾಲ್ಯಾಭಿಷೇಕವನ್ನು ಅಭಿಷೇಕವನ್ನು ಮಾಡುವ ಆರೋಹಣ ಹಾಗೂ ಅವರೋಹಣಕ್ರಮಗಳು,  ಅತೀಸಂಕ್ಷಿಪ್ತ, ಸಂಕ್ಷಿಪ್ತ, ವಿಸ್ತೃತ, ಪರಿಪೂರ್ಣವಾಗಿ ಮಾಡುವ ಅಭಿಷೇಕಾದಿಗಳ ವಿವರಣೆಯನ್ನು ಈ ಉಪನ್ಯಾಸದಲ್ಲಿ ನೀಡಲಾಗಿದೆ. 

3026 Views
Upanyasas - VNU481

ಪೂಜೆಗೆ ನೀರನ್ನು ತರುವ ಕ್ರಮ

ದೇವರ ಪೂಜೆಗೆ ನೀರು ತರಬೇಕಾದರೆ ವಿಶಿಷ್ಟ ಕ್ರಮಗಳನ್ನು ಅನುಸರಿಸಬೇಕು. ನದೀ ಸರೋವರಗಳಲ್ಲಿ ಸ್ನಾನ ಮಾಡಿದಾಗ ನೀರು ತರುವ ಕ್ರಮ, ಬಾವಿಯಲ್ಲಿ ಸ್ನಾನ ಮಾಡಿದಾಗ ನೀರು ತರುವ ಕ್ರಮ ಮತ್ತು ಮನೆಯಲ್ಲಿ ಸ್ನಾನ ಮಾಡಿದಾಗ ನೀರು ತರುವ ಕ್ರಮ ಇವುಗಳನ್ನು ಇಲ್ಲಿ ತಿಳಿಸಲಾಗಿದೆ.   ದೇವರ ಪೂಜೆಗೆ ಬೇಕಾದ ಕಮಂಡಲು ಮತ್ತು ದೇವರ ಪೂಜೆಯಲ್ಲಿ ಬಳಸಲ್ಪಡುವ ಆರು ವಸ್ತ್ರಗಳ ಕುರಿತ ವಿವರಣೆ ಈ ಉಪನ್ಯಾಸದಲ್ಲಿದೆ. 

2349 Views
Upanyasas - VNU480

ನೀರಿನ ಮಹತ್ತ್ವ ಮತ್ತು ಗುಣಲಕ್ಷಣಗಳು

 ದೇವರನ್ನು ಪೂಜೆ ಮಾಡಲು ನೀರೇ ಯಾಕೆ ಬೇಕು, ಹಾಲು ಎಳನೀರು ಮುಂತಾದ ಪದಾರ್ಥಗಳಿಂದ ದೇವರ ಪೂಜೆಯನ್ನು ಮಾಡಬಾರದೇ? ಎಂಬ ಪ್ರಶ್ನೆಗೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಬೃಹದಾರಣ್ಯೋಕಪನಿಷತ್ತಿನ ಭಾಷ್ಯದಲ್ಲಿ ತಿಳಿಸಿದ,  ಶ್ರೀ ಮಂತ್ರಾಲಯಪ್ರಭುಗಳು ವಿವರಿಸಿರುವ ತತ್ವವನ್ನು ಇಲ್ಲಿ ನಿರೂಪಿಸಿ ನೀರಿಲ್ಲದೇ ಪೂಜೆಯಿಲ್ಲ ಎಂಬ ಮಾತನ್ನು ಪ್ರತಿಪಾದಿಸಲಾಗಿದೆ. 

1926 Views
Upanyasas - VNU460

PN09 ನಿರ್ಮಾಲ್ಯವಿಸರ್ಜನೆಯ ಕ್ರಮ

ನಿರ್ಮಾಲ್ಯ ವಿಸರ್ಜನೆಯ ಉಂಟಾಗುವ ಮಹತ್ತರ ಫಲಗಳು, ಆ ಫಲಕ್ಕಾಗಿ ಸಂಕಲ್ಪ ಮಾಡಬೇಕೆ ಎಂಬ ಪ್ರಶ್ನೆಗೆ ಶ್ರೀ ಮಂತ್ರಾಲಯಪ್ರಭುಗಳು ನೀಡಿದ ಉತ್ತರ, ನಿರ್ಮಾಲ್ಯ ವಿಸರ್ಜನೆಯ ಕ್ರಮ, ಇರಬೇಕಾದ ಎಚ್ಚರಗಳು, ಮಾಡಬೇಕಾದ ಅನುಸಂಧಾನಗಳ ಕುರಿತ ವಿವರಣೆ ಈ ಉಪನ್ಯಾಸದಲ್ಲಿದೆ.   ಇದರ ಲೇಖನ — VNA246

1965 Views
Upanyasas - VNU459

PN08 ನಿರ್ಮಾಲ್ಯವಿಸರ್ಜನೆಯ ಸಮಯ

ಪದ್ಯಮಾಲಾ ಗ್ರಂಥದಲ್ಲಿ ಶ್ರೀಮಟ್ಟೀಕಾಕೃತ್ಪಾದರು ಮಧ್ಯಾಹ್ನಕಾಲದಲ್ಲಿ ನಿರ್ಮಾಲ್ಯವಿಸರ್ಜನೆಯನ್ನು ವಿಧಿಸಿದಂತೆ ತೋರುತ್ತದೆ. ಇದು ಪಂಚರಾತ್ರಾಗಮ, ಸಂನ್ಯಾಸಪದ್ಧತಿ ಮತ್ತು  ಶ್ರೀ ಮಧ್ವವಿಜಯಗಳಿಗೆ ವಿರುದ್ಧ. ಆದರೆ ವಸ್ತುಸ್ಥಿತಿಯಲ್ಲಿ ವಿರೋಧವೇ ಇಲ್ಲ. ಅರುಣೋದಯಕಾಲದಲ್ಲಿಯೇ ನಿರ್ಮಾಲ್ಯವಿಸರ್ಜನೆ ಎನ್ನುವದು ಟೀಕಾಕೃತ್ಪಾದರಿಗೂ ಅಭಿಪ್ರೇತ. ಆದರೆ ಇಲ್ಲಿ ಮಧ್ಯಾಹ್ನಕಾಲದಲ್ಲಿ ನಿರ್ಮಾಲ್ಯವಿಸರ್ಜನೆಯನ್ನು ಹೇಳುತ್ತಿರುವ ಟೀಕಾಕೃತ್ಪಾದರು ಅನೇಕ ಅಪೂರ್ವ ತತ್ವಗಳನ್ನು ತಿಳಿಸಿ ಹೇಳುತ್ತಿದ್ದಾರೆ. ಪ್ರಮಾಣಗಳ ಸಮೇತವಾಗಿ ಆ ತತ್ವಗಳ ನಿರೂಪಣೆ ಇಲ್ಲಿದೆ.    ಇದರ ಲೇಖನ — VNA245

1749 Views
Upanyasas - VNU458

PN07 ನಿರ್ಮಾಲ್ಯತೀರ್ಥ ಮತ್ತು ಊರ್ಧ್ವಪುಂಡ್ರಧಾರಣೆ

ಕೆಲವರು, “ಕೇವಲ ನೀರಿನಿಂದ ಗೋಪೀಚಂದನ ಹಚ್ಚಿಕೊಳ್ಳಬಾರದು, ಕಾರಣ ಕೇವಲ ನೀರಿನಲ್ಲಿ ಕಲಿಯ ಸನ್ನಿಧಾನವಿರುತ್ತದೆ. ಅದಕ್ಕಾಗಿ ನಿರ್ಮಾಲ್ಯತೀರ್ಥದಿಂದಲೇ ಗೋಪಿಯನ್ನು ತೇಯಬೇಕು” ಎಂದು ತಿಳಿದು ಸ್ನಾನ ಮಾಡಿ, ನಿರ್ಮಾಲ್ಯವಿಸರ್ಜನೆ, ಅಭಿಷೇಕಗಳನ್ನು ಮುಗಿಸಿ, ಆ ನಂತರ ಗೋಪಿಯನ್ನು ಹಚ್ಚಿಕೊಂಡು ಸಂಧ್ಯಾವಂದನೆ ಮಾಡುವ ಕ್ರಮ ಇಟ್ಟುಕೊಂಡಿದ್ದಾರೆ. ಇದು ಶ್ರೀಮದಾಚಾರ್ಯರ ಆಚರಣೆಗೆ ಮತ್ತು ಪರಂಪರೆಯ ಜ್ಞಾನಿಗಳು ತಿಳಿಸಿದ ಕ್ರಮಕ್ಕೆ ವಿರುದ್ದ ಎನ್ನುವದನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ. ಇದರ ಲೇಖನ VNA244

1765 Views
Upanyasas - VNU436

PN06 ದೇವರ ಮನೆಯ ಸ್ವಚ್ಛತೆ

ದೇವರ ಮನೆಯನ್ನು ಸ್ವಚ್ಛ ಮಾಡಬೇಕಾದ ಸಮಯ, ಮಾಡುವ ಕ್ರಮ, ಸ್ವಚ್ಛ ಮಾಡಬೇಕಾದರೆ ಇರಬೇಕಾದ ಎಚ್ಚರಗಳು,  ಮನಸ್ಸಿಗೆ ಬರಬೇಕಾದ ಅನುಸಂಧಾನಗಳು, ಸ್ವಚ್ಛ ಮಾಡುವ ಈ ಸಾಮಾನ್ಯ ಕ್ರಿಯೆಗೆ ನಮ್ಮ ಸ್ವಾಮಿ ನೀಡುವ ಅಸಾಮಾನ್ಯ ಫಲಗಳು ಇವೆಲ್ಲದರ ಕುರಿತ ವಿವರಣೆ ಈ ಉಪನ್ಯಾಸದಲ್ಲಿದೆ. 

1714 Views
Upanyasas - VNU431

PN05 ಪೂಜೆಯ ಪಕ್ಷಿನೋಟ

ದೇವರ ಮನೆಯ ಸ್ವಚ್ಛತೆಯಿಂದ ಆರಂಭಿಸಿ ಸಮಗ್ರ ದೇವರ ಪೂಜೆಯ ಒಂದು ಪಕ್ಷಿನೋಟ ಇಲ್ಲಿದೆ. ಯಾವುದರ ನಂತರ ಯಾವ ಕ್ರಿಯೆಯನ್ನು ಮಾಡಬೇಕು ಎಂದು ತಿಳಿಸುವ ಉಪನ್ಯಾಸ. ಇದರ ಲೇಖನ VNA239. 

2905 Views
Upanyasas - VNU430

PN04 ಪೂಜೆಯಿಂದ ಉಂಟಾಗುವ ಪ್ರಯೋಜನಗಳು

ಶ್ರೀಹರಿಯ ಅನಂತ ಪ್ರೀತಿಯನ್ನು ಕರುಣಿಸುವ, ಮಹಾಪಾತಕಗಳನ್ನೂ ಪರಿಹರಿಸುವ, ವಿಷ್ಣುಮಾಯೆಯನ್ನೂ ನಮ್ಮಿಂದ ಗೆಲ್ಲಿಸುವ ದೇವರ ಪೂಜೆಯ ಮಹಾಮಾಹಾತ್ಮ್ಯಗಳನ್ನು ಹಿಂದಿನ ಲೇಖನಗಳಲ್ಲಿ ತಿಳಿದೆವು. ನಮ್ಮ ಮನಸ್ಸಿನ ಸಣ್ಣಸಣ್ಣ ಅಪೇಕ್ಷೆಗಳನ್ನೂ ಸಹ ಪೂರೈಸುವ ಕಾಮಧೇನು ಈ ದೇವರಪೂಜೆ ಎನ್ನುವದನ್ನು ಶ್ರೀಮದಾಚಾರ್ಯರು ಪ್ರತಿಪಾದಿಸುತ್ತಾರೆ. ಅವರ ಪವಿತ್ರವಚನಗಳ ಅರ್ಥಾನುಸಂಧಾನ ಇಲ್ಲಿದೆ. ಇದರ ಲೇಖನ VNA238

2794 Views
Upanyasas - VNU429

PN03 ಪೂಜೆಯ ಮಾಹಾತ್ಮ್ಯ

ಶ್ರೀಕೃಷ್ಣಾಮೃತಮಹಾರ್ಣವ ಮುಂತಾದ ಕೃತಿಗಳಲ್ಲಿ ದೇವರ ಪೂಜೆಯ ಮಾಹಾತ್ಮ್ಯವನ್ನು ದಿವ್ಯವಾದ ಕ್ರಮದಲ್ಲಿ ತಿಳಿಸಿ ಹೇಳಿದ್ದಾರೆ. ದೇವರ ಪೂಜೆಯ ಕುರಿತು ನಮಗೆ ಶ್ರದ್ಧೆ ಮೂಡಿಸುವ, ಇರುವ ಶ್ರದ್ಧೆಯನ್ನು ನೂರ್ಮಡಿ ಮಾಡುವ ಆ ಭಗವತ್ಪಾದರ ಪರಮಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. 

2315 Views
Upanyasas - VNU426

PN02 ದೇವರ ಪೂಜೆಯಿಂದ ದೊರೆಯುವ ಪುಣ್ಯ

 ಫಲದ ಅಪೇಕ್ಷೆ ಇಲ್ಲದೆ ಕರ್ಮ ಮಾಡು ಎನ್ನುವದು ಗೀತಾಸಿದ್ಧಾಂತ. ಫಲವನ್ನು ಅಪೇಕ್ಷಿಸಬಾರದು ಎಂದಾದ ಮೇಲೆ, ಫಲದ ಕುರಿತು ಏಕೆ ತಿಳಿಯಬೇಕು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಭಾಗವತತಾತ್ಪರ್ಯನಿರ್ಣಯದಲ್ಲಿ ನೀಡಿದ ಉತ್ತರದೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ಶಾಸ್ತ್ರ ತಿಳಿಸುವ ಸಾಧನೆಗಳಲ್ಲಿ ದೇವರ ಪೂಜೆಯ ಸ್ಥಾನ ಎಷ್ಟನೆಯದು ಎನ್ನುವದನ್ನು ನಿರೂಪಿಸಲಾಗಿದೆ.   ವಿಷ್ಣುಪ್ರೇರಣಯಾ ವಿಷ್ಣುಪ್ರೀತ್ಯರ್ಥಂ ಎಂದು ಸಂಕಲ್ಪ ಮಾಡುತ್ತೇವೆ, ದೇವರ ಪೂಜೆ ಮಾಡುವದರಿಂದ ಆ ವಿಷ್ಣುಪ್ರೀತಿ ಎಷ್ಟು ದೊರೆಯುತ್ತದೆ, ನಮ್ಮ ಸ್ವಾಮಿ ಎಷ್ಟು ಕರುಣಾಳು, ಪ್ರತೀನಿತ್ಯ ನಾವು ಮಾಡುವ ಈ ದೇವರಪೂಜೆ ಅದೆಂತ ಮಹೋತ್ಕೃಷ್ಟ ಸಾಧನೆ ಎನ್ನುವದನ್ನು ಮನದಟ್ಟು ಮಾಡಿಸುವ ಉಪನ್ಯಾಸವಿದು. ತಪ್ಪದೇ ಕೇಳಿ. 

3781 Views
Upanyasas - VNU425

PN01 ಪೂಜೆಯನ್ನು ಏಕೆ ಮಾಡಬೇಕು?

ದೇವರ ಪೂಜೆಯನ್ನು ಯಾಕಾಗಿ ಮಾಡಬೇಕು ಎನ್ನುವ ಪ್ರಶ್ನೆಗೆ ಭಗವದ್ಗೀತೆ ನಾಲ್ಕು ಉತ್ತರಗಳನ್ನು ನೀಡಿದೆ. ಶ್ರೀಮದಾಚಾರ್ಯರು ತಂತ್ರಸಾರಸಂಗ್ರಹದಲ್ಲಿ ಒಂದು ಉತ್ತರವನ್ನು ನೀಡಿದ್ದಾರೆ. ಪ್ರಧಾನವಾದ ಈ ಐದು ಉತ್ತರಗಳ ವಿವರಣೆ ಈ ಉಪನ್ಯಾಸದಲ್ಲಿದೆ. ಕೇಳಿದ ನಂತರ ದೇವರ ಪೂಜೆಯನ್ನು ಮಾಡದೆ ಇರಲು ಸಾಧ್ಯವಿಲ್ಲದಂತಹ ಮನಃಸ್ಥಿತಿಯನ್ನು ಕರುಣಿಸುವ ಅದ್ಭುತವಾದ ಉತ್ತರಗಳು. ನೀವು ಕೇಳುವದಷ್ಟೇ ಅಲ್ಲ, ನಿಮ್ಮ ಮಕ್ಕಳಿಗೂ ತಪ್ಪದೇ ಈ ಉಪನ್ಯಾಸವನ್ನು ಕೇಳಿಸಿ. 

4035 Views

Prashnottara - VNP147

ದೇವರ ಮನೆಯಲ್ಲಿ, ದೇವರಿಗೆ ಎದುರಾಗಿ ಕನ್ನಡಿಯನ್ನು ಯಾವಾಗಲೂ ಇಡಬಹುದೆ?

ದೇವರಿಗೆ ಕನ್ನಡಿಯನ್ನು ಹೇಗೆ ಸಮರ್ಪಿಸಬೇಕು, ಎನ್ನುವದರ ಕುರಿತು ಶ್ರೀ ನಾರಾಯಣಪಂಡಿತಾಚಾರ್ಯರು, ಶ್ರೀ ಸ್ಮೃತಿಮುಕ್ತಾವಲಿಕೃಷ್ಣಾಚಾರ್ಯರು ತಿಳಿಸಿರುವ ವಿಷಯದ ನಿರೂಪಣೆ. 

1789 Views
Prashnottara - VNP116

ಪ್ರತಿಮೆ, ವೃಂದಾವನಗಳನ್ನು ಮನೆಗೆ ತರಬೇಕಾದರೆ ಅನುಸರಿಸಬೇಕಾದ ನಿಯಮಗಳೇನು?

ಗುರುಗಳೇ,   ಪೂಜೆಗಾಗಿ ಸಣ್ಣ ಪ್ರತಿಮೆಗಳನ್ನು ಅಥವಾ ಗುರುಗಳ ಬೃಂದಾವನಗಳನ್ನು ಕೊಂಡಾಗ ಮನೆಗೆ ಯಾವ ರೀತಿ ತರಬೇಕು?  — ಪ್ರಸನ್ನ ಸಿಂಹ ರಾವ್

4343 Views
Prashnottara - VNP099

ಪೂಜೆಯಲ್ಲಿ ಶ್ರೇಷ್ಠ,ನಿಷಿದ್ಧ ಲೋಹಗಳ್ಯಾವುವು?

ನಮಸ್ಕಾರ, ದೇವರ ಪೂಜೆಗೆ ಯಾವ ಲೋಹದಿಂದ ಮಾಡಿದ ಸಾಮಗ್ರಿಗಳನ್ನು ಬಳಸಬೇಕು ಹಾಗೂ ಬಳಸಬಾರದು?  — ಅನಂತ್ ರಾಜ್. 

4690 Views
Prashnottara - VNP085

ಟ್ಯಾಂಕಿನ ನೀರನ್ನು ಪೂಜೆಗೆ ಬಳಸಲು ಏನಾದರೂ ಉಪಾಯವಿದೆಯೇ?

ಆಚಾರ್ಯರಲ್ಲಿ ಸಾಷ್ಟಾಂಗ ನಮಸ್ಕಾರಗಳು.   ಅಪಾರ್ಟುಮೆಂಟುಗಳಲ್ಲಿ ನೀರು Overhead tank ನಿಂದ ಸರಬರಾಜು ಆಗುತ್ತದೆ. ಇಂತಹ ನೀರು ಪೂಜೆಗೆ ಅರ್ಹವೇ?  — ಆನಂದ್ ರಾವ್.  ಗುರುಗಳಿಗೆ ನಮಸ್ಕಾರಗಳು.   ಆಚಾರ್ಯರೇ, ಶುದ್ಧ ನೀರು ಇಲ್ಲವೆಂದು ಪೂಜೆ ಬಿಡಬೇಕೋ, ಅಥವಾ ಟ್ಯಾಂಕಿನ ನೀರಿನಿಂದಾದರೂ ಪೂಜೆ ಮಾಡಬಹುದೋ? ಟ್ಯಾಂಕಿನ ನೀರನ್ನು ಶುದ್ಧ ಪಡಿಸುವ ದಾರಿ ಏನಾದರೂ ಇದೆಯೇ?  — ವಾಸುದೇವ್ ದೇಶಪಾಂಡೆ  ಆಚಾರ್ಯರೆ, ಪಕ್ಕದ ಬೀದಿಯಲ್ಲಿ ಬಾವಿಯಿದ್ದಾಗ ಕೆಲವರು ಅಲ್ಲಿಗೆ ಹೋಗಿ ಸ್ನಾನ ಮಾಡಿಕೊಂಡು ದೇವರ ಪೂಜೆಗೆ ನೀರು ತೆಗೆದುಕೊಂಡು ಬರುತ್ತಾರೆ. ಆದರೆ, ಬೀದಿಯಲ್ಲಿ ಹೋಗುವಾಗ ಕೊಳಕಾದ ರಸ್ತೆಯ ಮೇಲೇ ನಡೆದುಕೊಂಡು ಹೋಗಬೇಕು. ಕೇವಲ ಬಾವಿಯಲ್ಲಿ ಸ್ನಾನ ಮಾಡಿ, ಹೊಲಸು ರಸ್ತೆಯಲ್ಲಿ ನಡೆದು ಕೊಂಡು ಹೋದರೆ ಮಡಿಯಾಗುತ್ತದೆಯೇ. ಸಂಶಯ ಪರಿಹರಿಸಿ.   — ನರಸಿಂಹಮೂರ್ತಿ. 

6132 Views
Prashnottara - VNP076

ಅಯ್ಯಪ್ಪನನ್ನು ನಾವು ಏಕೆ ಪೂಜಿಸುವದಿಲ್ಲ?

ಆಚಾರ್ಯರೇ, ಮಾಧ್ವರು ಏಕೆ ಅಯ್ಯಪ್ಪನ ಪೂಜೆಯನ್ನು ಮಾಡುವದಿಲ್ಲ ಮತ್ತು ಶಬರಿಮಲೈ ಯಾತ್ರೆಯನ್ನು ಮಾಡುವದಿಲ್ಲ. ದಯವಿಟ್ಟು ತಿಳಿಸಿ.   — ಪ್ರಸಾದ್ ಕೆ. ಎನ್.

5990 Views
Prashnottara - VNP050

ತೀರ್ಥವನ್ನು ನೀರಿನಂತೆ ಕುಡಿಯಬಹುದೇ?

ಆಚಾರ್ಯರಿಗೆ 🙏🙏  ಶಾಲಿಗ್ರಾಮದ ತೀರ್ಥವನ್ನು ನಾವು ಪ್ರತಿನಿತ್ಯ ಕುಡಿಯುವ ನೀರಿನಲ್ಲಿ ಹಾಕಿ ಅದನ್ನು ಸ್ವೀಕರಿಸಬಹುದೇ?  ಶಾಲಗ್ರಾಮದ ತೀರ್ಥದಿಂದ ಆಚಮನ ಮಾಡಬಾರದು ಅಂತ ಕೇಳಿದ್ದೇನೆ, ಇದು ನಿಜವೇ?  ತೀರ್ಥದಿಂದ ಪರಿಷೇಚನ ಮಾಡಬಹುದೇ? ತಿಳಿಸಿ.   — ಮೋಹನ್ ಕುಲಕರ್ಣಿ. 

2511 Views
Prashnottara - VNP037

ಜಪ/ಪೂಜೆ ಯಾವ ಮಣೆ ಉಪಯೋಗಿಸಬೇಕು?

 ಆಚಾರ್ಯರೇ ಪೂಜೆ / ಜಪ ಮಾಡುವಾಗ ಮಣೆ ಉಪಯೋಗಿಸಬಹುದೇ? ಯಾವ ಮರದ ಮಣೆ ಉಪಯೋಗಿಸಬೇಕು?  — ಕೆ. ವಿ. ಸುರೇಶ

2427 Views
Prashnottara - VNP036

ಏಕಾದಶೀ ಪೂಜೆಯ ವಿಶೇಷತೆಗಳೇನು?

 ನಮಸ್ಕಾರ. ದಿನನಿತ್ಯದ ಪೂಜೆಗೆ ಮತ್ತು ಏಕಾದಶೀಯ ಪೂಜೆಗೆ ಏನೇನು ವ್ಯತ್ಯಾಸಗಳಿವೆ ಎಂದು ತಿಳಿಸಿ. ದೇವಪೂಜೆಯ ಸರಣಿಯಲ್ಲಿ ನೀವಿದನ್ನ ಹೇಳಿಯೇ ಹೇಳುತ್ತೀರಿ ಅಂತ ಭರವಸೆ ಇದ್ದೇ ಇದೆ. ಆದರೂ ತಾತ್ಕಾಲಿಕವಾಗಿ ಈಗೂಮ್ಮೆ ಸಂಕ್ಷಿಪ್ತವಾಗಿ ಹೇಳಿಕೊಟ್ಟರೆ ಉಪಕಾರವಾಗುವುದು.  — ಜಯತೀರ್ಥ, ಹುಬ್ಬಳ್ಳಿ.

2909 Views
Prashnottara - VNP013

ಈ ನಿರ್ಮಾಲ್ಯದ ಕ್ರಮ ತಪ್ಪಾ?

ಆಚಾರ್ಯರೇ ಸಾಷ್ಟಾಂಗ ನಮಸ್ಕಾರಗಳು. ದೇವರ ಪೂಜೆಯಲ್ಲಿ ಇನ್ನೊಂದು ಕ್ರಮವನ್ನು ಕೇಳಿದ್ದೇನೆ.   1.  ನಿರ್ಮಾಲ್ಯ ವಿಸರ್ಜನೆ ಮಾಡಿ 2. ನಿರ್ಮಾಲ್ಯ ಅಭಿಷೇಕ ಮಾಡಿ 3. ಶಂಖ ಮತ್ತು ಪ್ರಾಣದೇವರ ಅಭಿಷೇಕ ಮಾಡಿ 4. ಶಂಖ ಮತ್ತು ಪ್ರಾಣದೇವರಿಗೆ ನಿರ್ಮಾಲ್ಯ ತೀರ್ಥವನ್ನು ಕೊಟ್ಟು 5. ನಾವು ನಿರ್ಮಾಲ್ಯ ಸ್ವೀಕಾರ ಮಾಡಿ 6. ನಿರ್ಮಾಲ್ಯ ತೀರ್ಥದಿಂದ ಗೋಪೀಚಂದನ ಧಾರಣೆ ಮಾಡಿ ಆಮೇಲೆ ಸಂಧ್ಯಾವಂದನೆ ಮಾಡುವದು.   ಈ ಕ್ರಮ ತಪ್ಪಾದದ್ದಾ.   ದಯಮಾಡಿ ಕಾರಣಗಳನ್ನು ತಿಳಿಸಿಕೊಡಿ.   — ಆದಿತ್ಯ ಸಿ. ಎಸ್. 

2586 Views
Prashnottara - VNP012

ಯಾವುದು ದೇವರ ಪೂಜೆ?

ಸಾಲಿಗ್ರಾಮಕ್ಕೆ ಪೂಜೆ ಮಾಡುವದು ಮಾತ್ರ ಪೂಜೆಯೇ? ಬೇರೆ ಪೂಜೆಯಿಲ್ಲವೇ?

3449 Views
Prashnottara - VNP008

ಸಂಕ್ಷಿಪ್ತ ಪೂಜೆ

ಆಚಾರ್ಯರಿಗೆ ನಮಸ್ಕಾರಗಳು.ಉದ್ಯೋಗಸ್ಥರಿಗೆ ನಿತ್ಯ ಪೂಜೆ ಮಾಡಲು ಸಂಕ್ಷಿಪ್ತ ಪೂಜಾ-ವಿಧಾನವನ್ನು ತಿಳಿಸಿದರೆ ಮಹದುಪಕಾರವಾಗುತ್ತದೆ. 

5169 Views