Hari Guru Mangalashtakam



Upanyasas - VNU417

HGM13 ಭಕ್ತರ ಮೇಲೆ ಶ್ರೀ ವಿದ್ಯಾರತ್ನಾಕರತೀರ್ಥರ ಅನುಗ್ರಹ

 ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರು ಈ  ಹರಿಗುರುಮಂಗಳಾಷ್ಟಕದ ಕಡೆಯ ಪದ್ಯದಲ್ಲಿ ತುಂಬು ಕಾರುಣ್ಯದಿಂದ ನಮ್ಮನ್ನು ಆಶೀರ್ವದಿಸುತ್ತಾರೆ. ಅವರ ಪರಮಪವಿತ್ರ ಆಶೀರ್ವಚನಗಳ ಅನುವಾದ ಈ ಭಾಗದಲ್ಲಿದೆ. 

1414 Views
Upanyasas - VNU416

HGM12 ಶ್ರೀ ವಿದ್ಯಾಸಮುದ್ರತೀರ್ಥರ ಕಾರುಣ್ಯದ ವರ್ಣನೆ

ಹರಿಗುರುಮಂಗಳಾಷ್ಟಕದ ಎಂಟನೆಯ ಪದ್ಯದಲ್ಲಿ ಶ್ರೀ ವಿದ್ಯಾರತ್ನಾಕರತೀರ್ಥಗುರುರಾಜರು ತಮ್ಮ ಗುರುಗಳಾದ ಶ್ರೀ ವಿದ್ಯಾಸಮುದ್ರತೀರ್ಥಗುರುಸಾರ್ವಭೌಮರ ಕಾರುಣ್ಯ ಮಾಹಾತ್ಮ್ಯಗಳನ್ನು ಮೈಯುಬ್ಬಿ ವರ್ಣನೆ ಮಾಡಿ ಅವರಿಂದ ಮಂಗಳವನ್ನು ಪ್ರಾರ್ಥಿಸುತ್ತಾರೆ. ಆ ಪರಮಪವಿತ್ರ ಶ್ಲೋಕದ ವಿವರಣೆ ಈ ಭಾಗದಲ್ಲಿದೆ. 

1111 Views
Upanyasas - VNU415

HGM11 ಶ್ರೀ ವಿದ್ಯಾ ಶ್ರೀನಿವಾಸತೀರ್ಥಶ್ರೀಪಾದರ ವರೆಗಿನ ಪರಂಪರೆ

ಶ್ರೀವಿದ್ಯಾನಿಧಿತೀರ್ಥಶ್ರೀಪಾದಂಗಳವರು, ಶ್ರೀವಿದ್ಯಾಪೂರ್ಣತೀರ್ಥಶ್ರೀಪಾಂದಗಳವರು, ಶ್ರೀವಿದ್ಯಾಸಿಂಧುತೀರ್ಥಶ್ರೀಪಾದಂಗಳವರು, ಶ್ರೀವಿದ್ಯಾಶ್ರೀಧರತೀರ್ಥಶ್ರೀಪಾದಂಗಳವರು, ಶ್ರೀವಿದ್ಯಾಶ್ರೀನಿವಾಸತೀರ್ಥಶ್ರೀಪಾದಂಗಳರು, ಇಷ್ಟು ಗುರುಗಳ ಮಾಹಾತ್ಮ್ಯವನ್ನು ಇಲ್ಲಿ ಸಂಕ್ಷಿಪ್ತವಾಗಿ ಕೇಳುತ್ತೇವೆ. 

1084 Views
Upanyasas - VNU414

HGM10 ಶ್ರೀ ವಿದ್ಯಾಕಾಂತೀರ್ಥರ ವರೆಗಿನ ಪರಂಪರೆ

ನಮ್ಮ ಶ್ರೀಮದ್ ವ್ಯಾಸರಾಜಸಂಸ್ಥಾನದಲ್ಲಿ ಮತ್ತೊಬ್ಬ ಶ್ರೀ ವ್ಯಾಸರಾಜರು ಮತ್ತೊಬ್ಬ ಶ್ರೀ ವಿಜಯೀಂದ್ರರು ಎಂದೇ ಖ್ಯಾತರಾದ ಶ್ರೀ ವಿದ್ಯಾವಲ್ಲಭತೀರ್ಥಶ್ರೀಪಾದಂಗಳವರ ಮತ್ತು ಶ್ರೀ ವಿದ್ಯಾಕಾಂತತೀರ್ಥಶ್ರೀಪಾದಂಗಳವರ ಚರಿತ್ರೆಯ ಸಂಕ್ಷಿಪ್ತ ನಿರೂಪಣೆ. 

1035 Views
Upanyasas - VNU413

HGM09 ಶ್ರೀ ವಿದ್ಯಾನಾಥತೀರ್ಥಶ್ರೀಪಾದರವರೆಗಿನ ಪರಂಪರೆ

ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು,  ಶ್ರೀಲಕ್ಷ್ಮೀನಾಥತೀರ್ಥಶ್ರೀಪಾದಂಗಳವರು,  ಶ್ರೀಲಕ್ಷ್ಮೀಪತಿತೀರ್ಥಶ್ರೀಪಾದಂಗಳವರು,  ಶ್ರೀಲಕ್ಷ್ಮೀನಾರಾಯಣತೀರ್ಥಶ್ರೀಪಾದಂಗಳವರು,  ಶ್ರೀಶೇಷಚಂದ್ರಿಕಾಚಾರ್ಯರು,  ಶ್ರೀಭಾಷ್ಯದೀಪಿಕಾಚಾರ್ಯರು,  ಶ್ರೀಶ್ರೀನಾಥತೀರ್ಥಶ್ರೀಪಾದಂಗಳವರು,  ಶ್ರೀವಿದ್ಯಾನಾಥತೀರ್ಥಶ್ರೀಪಾದಂಗಳವರು,  ಇಲ್ಲಿಯವರೆಗಿನ ಪರಂಪರೆಯ ಕುರಿತ ಸಂಕ್ಷಿಪ್ತ ಚಿತ್ರಣವನ್ನು ಈ ಭಾಗದಲ್ಲಿ ಕೇಳುತ್ತೇವೆ. 

1096 Views
Upanyasas - VNU412

HGM08 ಶ್ರೀ ರಾಮಚಂದ್ರತೀರ್ಥಶ್ರೀಪಾದಂಗಳವರ ವರೆಗಿನ ಪರಂಪರೆ

ಶ್ರೀಶ್ರೀನಿವಾಸತೀರ್ಥಶ್ರೀಪಾದಂಗಳವರು, ಶ್ರೀರಾಮತೀರ್ಥಶ್ರೀಪಾದಂಗಳವರು, ಶ್ರೀಲಕ್ಷ್ಮೀಕಾಂತತೀರ್ಥಶ್ರೀಪಾದಂಗಳವರು, ಶ್ರೀಶ್ರೀಪತಿತೀರ್ಥಶ್ರೀಪಾದಂಗಳವರು, ಶ್ರೀರಾಮಚಂದ್ರತೀರ್ಥಶ್ರೀಪಾದಂಗಳವರು, ಇಷ್ಟು ಜನ ಮಹಾನುಭಾವರ ಕುರಿತು ಸಂಕ್ಷಿಪ್ತವಾಗಿ ನಾವಿಲ್ಲಿ ತಿಳಿಯುತ್ತೇವೆ. 

1065 Views
Upanyasas - VNU411

HGM07 ಶ್ರೀ ವಿದ್ಯಾಧಿರಾಜರಿಂದ ಶ್ರೀ ವ್ಯಾಸರಾಜರವರೆಗೆ

ಶ್ರೀವಿದ್ಯಾರತ್ನಾಕರತೀರ್ಥರು  ಶ್ರೀ ವಿದ್ಯಾಧಿರಾಜತೀರ್ಥಗುರುಸಾರ್ವಭೌಮರನ್ನು ಯತಿವಂಶವಾರ್ಧಿಹಿಮಗುಃ ಎಂದು ಕರೆಯುತ್ತಾರೆ. ಆ ಮಾತಿನ ಹಿಂದಿನ ಆಂತರ್ಯವನ್ನು ವಿವರಿಸುತ್ತ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದಂಗಳವರು ಬುದ್ಧಿಪೂರ್ವಕವಾಗಿಯೇ ಶ್ರೀ ರಾಜೇಂದ್ರತೀರ್ಥರು ಮತ್ತು ಶ್ರೀ ಕವೀಂದ್ರತೀರ್ಥರು ಇಬ್ಬರಿಗೂ ಸಂನ್ಯಾಸವನ್ನು ನೀಡಿ ಎರಡು ಮಹತ್ತರ ಪರಂಪರೆಗಳನ್ನು ಆರಂಭಿಸಿದರು ಎಂಬ ಇತಿಹಾಸವನ್ನು ನಿರೂಪಿಸಲಾಗಿದೆ. ಹಾಗೂ ರಾಜೇಂದ್ರತೀರ್ಥಗುರುಸಾರ್ವಭೌಮರ ಕುರಿತು ಅವರ ಪಾದಪದ್ಮಾರಾಧಕರಾದ ಶ್ರೀ ವಿಷ್ಣುದಾಸಾಚಾರ್ಯರು ತಮ್ಮ ಗ್ರಂಥ ವಾದರತ್ನಾವಲಿಯಲ್ಲಿ ದಾಖಲಿಸಿರುವ ಮಹತ್ತ್ವದ ಅಂಶದ ಅನುಸಂಧಾನ ಇಲ್ಲಿದೆ.  ಶ್ರೀ ವ್ಯಾಸರಾಜರವರೆಗಿನ ಪರಂಪರೆಯ ಸ್ಮರಣೆಯೊಂದಿಗೆ. 

1178 Views
Upanyasas - VNU410

HGM06 ಶ್ರೀಮದಾಚಾರ್ಯರಿಂದ ಟೀಕಾಕೃತ್ಪಾದರವರೆಗೆ

ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರ ಶಬ್ದಪ್ರಯೋಗಕೌಶಲದ ಪರಿಚಯ ನಮಗಿಲ್ಲಾಗುತ್ತದೆ. ಶ್ರೀಮದಾಚಾರ್ಯರಿಂದ ಆರಂಭಿಸಿ ಈ ವಿದ್ಯಾ ಪರಂಪರೆಯ ಯತಿಗಳನ್ನು ಅವರು ಉಲ್ಲೇಖಿಸಬೇಕಾದರೆ ಕೇವಲ ಹೆಸರನ್ನು ಉಲ್ಲೇಖಿಸಿಲ್ಲ. ಅವರು ಅಂದು ಮಾಡಿದ ಮಹತ್ತರ ಕಾರ್ಯಗಳು, ಆ ನಂತರವೂ ಪರಂಪರೆಯಲ್ಲಿ ನಿಂತು ಮಾಡಿದ ಅದ್ಭುತ ಕಾರ್ಯಗಳ ಕುರಿತು ಶ್ರೀಗುರುಗಳು ನಮಗೆ ತಿಳಿಸುತ್ತಾರೆ. 

1702 Views
Upanyasas - VNU408

HGM05 ಸರ್ವಾರ್ಥಪ್ರದ ಪ್ರತಿಮೆಗಳು

ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರು ಕಾರುಣ್ಯದಿಂದ ರಚಿಸಿ ನೀಡಿರುವ ಹರಿ ಗುರು ಮಂಗಳಾಷ್ಟಕದ  ಮೂರನೆಯ ಪದ್ಯದ ಅರ್ಥಾನುಸಂಧಾನ. ಶ್ರೀಮದಾಚಾರ್ಯರು ಪೂಜಿಸಿದ ಕೃಷ್ಣ-ರಾಮ-ವ್ಯಾಸಮುಷ್ಟಿಗಳಿಂದಾರಂಭಿಸಿ ಶ್ರೀನಾಥತೀರ್ಥಗುರುಸಾರ್ವಭೌಮರ ಮೇಲೆ ಪರಮಾನುಗ್ರಹ ಮಾಡಿದ ಶ್ರೀ ವೇದವ್ಯಾಸದೇವರ ಪ್ರತಿಮೆಯವರೆಗಿನ ಎಲ್ಲ ಪ್ರತೀಕಗಳ ಮಹಾಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ. 

1893 Views
Upanyasas - VNU407

HGM04 ಸಂತಾನ ಗೋಪಾಲ ಕೃಷ್ಣ

ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರು ಕಾರುಣ್ಯದಿಂದ ರಚಿಸಿ ನೀಡಿರುವ ಹರಿ ಗುರು ಮಂಗಳಾಷ್ಟಕದ ಎರಡನೆಯ ಪದ್ಯದ ಅರ್ಥಾನುಸಂಧಾನ. ಬ್ರಹ್ಮಣ್ಯತೀರ್ಥರಿಗೆ ಒಲಿದು ಬಂದ ವಿಠ್ಠಲ, ತುಮಕೂರಿನ ಶ್ರೀ ಯತಿರಾಜ ಒಡೆಯರು ಸಂಸ್ಥಾನಕ್ಕೆ ಸಮರ್ಪಿಸಿದ ಬೇಡಿ ಕೃಷ್ಣ, ಯಜ್ಞವರಾಹ, ಭೂವರಾಹ, ವಾಸುದೇವ ಮೂರ್ತಿ, ದಿಗ್ವಿಜಯಗೋಪಾಲಕೃಷ್ಣ, ಸಂತಾನಗೋಪಾಲಕೃಷ್ಣ, ಶ್ರೀ ಭೂ ಸಮೇತ ಶ್ರೀನಿವಾಸ, ಧನ್ವಂತರಿ, ಬಲಮುರಿ ಶಂಖಗಳು ಮತ್ತು ಹಯಗ್ರೀವದೇವರು, ಇಷ್ಟು ಪ್ರತಿಮೆಗಳ ಕುರಿತು ನಾವಿಲ್ಲಿ ಕೇಳುತ್ತೇವೆ. 

1948 Views
Upanyasas - VNU405

HGM03 ಮೂಲಪ್ರತಿಮೆಗಳು

ಶ್ರೀಮದ್ ವ್ಯಾಸರಾಜಸಂಸ್ಥಾನದ  ಪ್ರತಿಮೆಗಳ — ನೀಲಾದೇವಿಕರಾರ್ಚಿತವಾದ ಶ್ರೀ ಮೂಲಗೋಪಾಲಕೃಷ್ಣ, ಶ್ರೀಮದಾಚಾರ್ಯರಿಂದಲೇ ನಿರ್ಮಿತವಾದ ಶ್ರೀ ಮೂಲಪಟ್ಟಾಭಿರಾಮ, ಶ್ರೀವೇದವ್ಯಾಸದೇವರ ಬೆರಳು ಮತ್ತು ರೇಖೆಗಳನ್ನುಳ್ಳು ಒಂದು ವ್ಯಾಸಮುಷ್ಟಿ, ಶ್ರೀಮಟ್ಟೀಕಾಕೃತ್ಪಾದರು ಅರ್ಚನೆ ಮಾಡಿದ ಶ್ರೀ ಲಕ್ಷ್ಮೀನೃಸಿಂಹದೇವರ, ಶ್ರೀ ದಿಗ್ವಿಜಯಪಟ್ಟಾಭಿರಾಮದೇವರ — ಕುರಿತ ವಿವರಣೆ ಮೊದಲ ಪದ್ಯದಲ್ಲಿದೆ. 

1913 Views
Upanyasas - VNU404

HGM02 ಶ್ರೀಮದ್ ವ್ಯಾಸರಾಜಸಂಸ್ಥಾನದಲ್ಲಿ ಪೂಜಾಕ್ರಮ

ಶ್ರೀಮದ್ ವ್ಯಾಸರಾಜ ಸಂಸ್ಥಾನದಲ್ಲಿ ಇಂದಿಗೆ ಅನೇಕ ಸಂಪ್ರದಾಯಗಳು ಲುಪ್ತವಾಗಿವೆ. ಅಂತಹುದರಲ್ಲಿ ಒಂದು, ನಾಲ್ಕು ಹಂತದ ಪೀಠದಲ್ಲಿ ಪೂಜೆ. ಪ್ರಾತಃಸ್ಮರಣೀಯರಾದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥಶ್ರೀಪಾದಂಗಳವರ ಕಾಲದವರೆಗೆ ಶ್ರೀಮತ್ ಸಂಸ್ಥಾನದಲ್ಲಿ ನಾಲ್ಕು ಹಂತದ ಪೀಠದಲ್ಲಿ ಪೂಜೆಯಾಗುತ್ತಿತ್ತು. ಆ ಸಂಪ್ರದಾಯದ ವಿವರಣೆ ಈ ಉಪನ್ಯಾಸದ ಭಾಗದಲ್ಲಿದೆ. 

1951 Views
Upanyasas - VNU403

HGM01 ಈ ಸ್ತೋತ್ರದ ಸಾರಾಂಶ

 ಶ್ರೀಮದ್ ವ್ಯಾಸರಾಜಸಂಸ್ಥಾನದ ಭೂಷಾಮಣಿಗಳಾದ ಶ್ರೀಮದ್ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರು ರಚಿಸಿರುವ ಶ್ರೀಹರಿಗುರು ಮಂಗಳಾಷ್ಟಕ, ಸಮಗ್ರ ಸ್ತೋತ್ರಪ್ರಪಂಚದಲ್ಲಿಯೇ ಅತ್ಯಪೂರ್ವವಾದ ಸ್ತೋತ್ರ. ಶ್ರೀಮತ್ ಸಂಸ್ಥಾನದ ಮೂಲದೇವರಿಂದ ಆರಂಭಿಸಿ ಸಮಗ್ರ ಗುರುಪರಂಪರೆಯನ್ನು ಪ್ರಾರ್ಥಿಸಿ ಮಂಗಳವನ್ನು ಬೇಡುವ ಮತ್ತೊಂದು ಸ್ತೋತ್ರ ಮಾಧ್ವ ಸಾಹಿತ್ಯದಲ್ಲಿ ಇಲ್ಲವೇ ಇಲ್ಲ. ಈ ಸ್ತೋತ್ರದ ಅರ್ಥಾನುಸಂಧಾನ ಮಾಲಿಕೆಯ ಈ ಪ್ರಥಮ ಪುಷ್ಪದಲ್ಲಿ ಸ್ತೋತ್ರದ ಒಟ್ಟಾರೆ ಸಾರಾಂಶವನ್ನು ಕೇಳುತ್ತೇವೆ. 

2071 Views