ಅಶ್ರದ್ಧೆಯಿಂದ ಮಾಡಿದ ಕರ್ಮ ನಾಶಕರ
ಯಾವುದೇ ಕಾರ್ಯವನ್ನು ಮಾಡಬೇಕಾದರೂ ಅವಜ್ಞೆಯಿಂದ ಮಾಡಬಾರದು, ಶ್ರದ್ಧೆಯಿಂದ ಮಾಡಬೇಕು, ತಿರಸ್ಕಾರದಿಂದ ಮಾಡಿದ ಕರ್ಮವೇ ನಮ್ಮ ನಾಶಕ್ಕೆ ಕಾರಣವಾಗುತ್ತದೆ
ವಾಮನ ಬಲಿಯನ್ನು ಬೇಡಲು ಏನು ಕಾರಣ?
ಲಕ್ಷ್ಮೀಪತಿಯಾದ ಶ್ರೀಹರಿ ವಾಮನನಾಗಿ ಬಲಿಯನ್ನು ಬೇಡಿದ್ದೇಕೆ ಎಂಬ ಪ್ರಶ್ನೆಗೆ ಬ್ರಹ್ಮದೇವರು ನೀಡಿದ ಅದ್ಭುತ ಉತ್ತರ ಇಲ್ಲಿದೆ.
ತೊಂದರೆಗಳಿಂದ ಪಾರಾಗಲು ಉಪಾಸನೆ
ಜಗತ್ತಿನಿಂದ ದೇವರಿಗೆ ಪ್ರಯೋಜನವಿಲ್ಲ ನಿಜ, ಆದರೆ ಜೀವರಿಗೆ ಉಪಕಾರ ಮಾಡಲು ಹೋಗಿ ದೇವರಿಗೆ ತೊಂದರೆಯಾಗಲಿಲ್ಲವೇ, ಸೃಷ್ಟಿಯಿಲ್ಲದ ಸ್ವಾಮಿ ಹುಟ್ಟಬೇಕಾಯಿತು, ರಾಮ-ಕೃಷ್ಣಾದಿ ರೂಪಗಳಲ್ಲಿ ತೊಂದರೆ ಅನುಭವಿಸಬೇಕಾಯಿತು, ಅಪಘಾತವಾದವನಿಗೆ ಸಹಾಯ ಮಾಡಲು ಹೋಗಿ ನಾವು ಸಮಸ್ಯೆಯಲ್ಲಿ ಸಿಲುಕಿಕೊಂಡಹಾಗೆ ಎಂಬ ಆಧುನಿಕರ ಪ್ರಶ್ನೆಗೆ ಸ್ವಯಂ ಭಗವಂತನೇ ನೀಡಿದ ಉತ್ತರ ಇಲ್ಲಿದೆ. ನಾವು ಜಗತ್ತಿನಿಂದ ಉಂಟಾಗುವ ತೊಂದರೆಗಳಿಂದ ಪಾರಾಗುವ ಉಪಾಸನೆಯನ್ನು ತಿಳಿಸುತ್ತಾನೆ.
ದೇವರ ಮೂರು ರಹಸ್ಯ ರೂಪಗಳು
ಶ್ರೀಮದ್ ಭಾಗವತ ತಿಳಿಸಿದ ಮೂರು ಅಪೂರ್ವ ಹೆಸರುಳ್ಳ ಮೂರು ರೂಪಗಳ ವಿವರಣೆ ಇಲ್ಲಿದೆ.
ನಮ್ಮ ನಿಯತ ಗುರುಗಳ ಅನುಗ್ರಹ ಪಡೆಯಲು ಏನು ಮಾಡಬೇಕು?
ನಮಗೆ ದೇವರ ಸಾಕ್ಷಾತ್ಕಾರವನ್ನು ಅನುಗ್ರಹಿಸುವ ಗುರುಗಳೇ ನಮ್ಮ ನಿಯತ ಗುರುಗಳು. ಆ ಮಹಾಗುರುಗಳ ಕಾರುಣ್ಯವನ್ನು ಪಡೆಯಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ.
ಜನನೇಂದ್ರಿಯದ ಮಹತ್ತ್ವ
ಭಗವಂತ ನಿರ್ಮಾಣ ಮಾಡಿದ ಮೊಟ್ಟ ಮೊದಲ ಶರೀರದಲ್ಲಿ ಶಿಶ್ನೇಂದ್ರಿಯದ ನಿರ್ಮಾಣವಾಗುವ ಸಂದರ್ಭದಲ್ಲಿ ಭಾಗವತ ತಿಳಿಸಿದ ಮಹತ್ತ್ವದ ಪ್ರಮೇಯಗಳ ವಿವರಣೆ ಇಲ್ಲಿದೆ.
ಅತೃಪ್ತಿ ಏಕೆ ಕಾಡುತ್ತದೆ
ಜೀವನದಲ್ಲಿ ಸಾಕಷ್ಟು ಹಣ ಸಂಪಾದನೆ ಮಾಡಿದ್ದರೂ, ಜವಾಬ್ದಾರಿಗಳನ್ನೆಲ್ಲ ಮುಗಿಸಿದ್ದರೂ, ಅನುಭವಿಸಬೇಕಾದ ಸೌಲಭ್ಯಗಳನ್ನೆಲ್ಲ ಅನುಭವಿಸಿದ್ದರೂ, ಜೀವನದ ಕಡೆಯಲ್ಲಿ ಯಾವ ಸಮಸ್ಯೆ ಇಲ್ಲದಿದ್ದರೂ ಮನುಷ್ಯರಿಗೆ ಅತೃಪ್ತಿ ಕಾಡುತ್ತದೆ. ಏಕೆ
ಆಚಾರ್ಯರ ಮೇಲೆ ದೇವತೆಗಳು ಮಾಡಿದ ಪುಷ್ಪವೃಷ್ಟಿ
ಶ್ರೀಮದಾಚಾರ್ಯರು ಐತರೇಯೋಪನಿಷತ್ತಿನ ಅರ್ಥವನ್ನು ತಿಳಿಸಿ ಹೇಳುವ ಸಂದರ್ಭದಲ್ಲಿ ಎಲ್ಲ ದೇವತೆಗಳು ಆಕಾಶದಲ್ಲಿ ನೆರೆನಿಂತು ಆಚಾರ್ಯರ ಸ್ತೋತ್ರ ಮಾಡಿ ಮನುಷ್ಯರ ಕಣ್ಣಿಗೆ ಕಾಣುವಂತೆ ಆಚಾರ್ಯರ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದ ಪರಮಮಂಗಳವಾದ ಅಪೂರ್ವಘಟನೆಯ ಚಿತ್ರಣ ಇಲ್ಲಿದೆ. ಆಚಾರ್ಯರ ಬದರಿಕಾಶ್ರಮಪ್ರವೇಶದ ಕುರಿತು ನಾವು ತಿಳಿಯಬೇಕಾದ ಮಹತ್ತ್ವದ ವಿಚಾರದ ನಿರೂಪಣೆಯೊಂದಿಗೆ.
ಮತ್ತೊಬ್ಬರ ಪಾಪದ ಕುರಿತು
ಸಜ್ಜನರು ಮಾಡಿದ ಪಾಪವನ್ನು ಹೇಳಬಾರದು ಎನ್ನುತ್ತದೆ ಶಾಸ್ತ್ರ. ಆದರೆ ಅದೇ ಶಾಸ್ತ್ರ ದೇವತೋತ್ತಮರು, ಋಷಿಪುಂಗವರು ಮುಂತಾದ ಸಜ್ಜನೋತ್ತಮರು ಮಾಡಿದ ಪಾಪಗಳನ್ನು ದಾಖಲಿಸುತ್ತದೆ. ಆಚಾರ್ಯರು ನಿರ್ಣಯಿಸುತ್ತಾರೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವದು ಎನ್ನುವ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ದಿವ್ಯ ಉತ್ತರಗಳ ಸಂಕಲನ ಇಲ್ಲಿದೆ, ತಪ್ಪದೇ ಕೇಳಿ.
ದೇವರಲ್ಲಿ ನೆನಪು ದೋಷವಲ್ಲವೇ?
ದೇವರಲ್ಲಿ ಸ್ಮೃತಿ ಎಂಬ ಗುಣವಿದೆ ಎಂದು ಭಾಗವತ ಹೇಳುತ್ತದೆ. ನಾವು ಮಾಡಿದ್ದನ್ನು ನೆನಪಿಸಿಕೊ ಸ್ವಾಮಿ ಎಂದು ಈಶಾವಾಸ್ಯೋಪನಿಷತ್ತಿನಲ್ಲಿ ಪ್ರಾರ್ಥನೆಯೂ ಇದೆ. ನೆನಪು ಬರಬೇಕಾದರೆ ಮರೆವಿರಬೇಕು. ಮರೆವು ಅನ್ನುವದೊಂದು ದೋಷ. ದೇಷವಿಲ್ಲದ ದೇವರಲ್ಲಿ ಮರೆವೂ ಇರಲು ಸಾಧ್ಯವಿಲ್ಲ, ಮರೆವಿದ್ದರೆ ಸರ್ವಜ್ಞನಲ್ಲ, ಮರೆವಿಲ್ಲದೆ ನೆನಪಿರಲು ಸಾಧ್ಯವಿಲ್ಲ ಎಂಬ ಪ್ರಶ್ನೆಗಳ ಸರಮಾಲೆಗೆ ಶ್ರೀಮದಾಚಾರ್ಯರು ಟೀಕಾಕೃತ್ಪಾದರು ಮತ್ತು ವಿಜಯಧ್ವಜತೀರ್ಥಗುರುಸಾರ್ವಭೌಮರು ನೀಡಿದ ಅತ್ಯಪೂರ್ವ ಉತ್ತರಗಳು ಇಲ್ಲಿವೆ.
ಮೋಹವನ್ನು ಕಳೆದುಕೊಳ್ಳುವದು ಹೇಗೆ
ನಮ್ಮ ಎಲ್ಲ ದುಃಖಕ್ಕೂ ಅಭಿಮಾನವೇ ಮೂಲ ಎಂದು ಶಾಸ್ತ್ರವನ್ನು ಹೇಳುತ್ತದೆ. ಆ ಅಭಿಮಾನ, ಮೋಹಗಳನ್ನು ಕಳೆದುಕೊಳ್ಳುವ ಬಗೆ ಹೇಗೆ ಎನ್ನುವದನ್ನು ಭಾಗವತ ಅದ್ಭುತವಾಗಿ ವಿವರಿಸುತ್ತದೆ. ತಪ್ಪದೇ ಕೇಳಿ.
ದೇವರಲ್ಲಿರುವ ಆಸ್ತಿಕತೆ
ದೇವರ ಅಸ್ತಿತ್ವವನ್ನು ನಂಬುವವನು ಆಸ್ತಿಕ ಎನ್ನುವದು ನಾವು ತಿಳಿದ ಅರ್ಥ. ಆದರೆ, ಆದರೆ ಶ್ರೀಮದ್ ಭಾಗವತ ದೇವರಲ್ಲಿ ಆಸ್ತಿಕತೆ ಇದೆ ಎಂದು ಎನ್ನುತ್ತದೆ. ದೇವರಲ್ಲಿರುವ ಆಸ್ತಿಕತೆ ಯಾವ ರೀತಿಯಾದದ್ದು ಎನ್ನುವದನ್ನು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನಾವು ಬೆರಗಾಗುವಂತೆ ಅದ್ಭುತವಾಗಿ ವಿವರಿಸುತ್ತಾರೆ. ತಪ್ಪದೇ ಕೇಳಿ.
ಕಲಿಯ ಪ್ರಭಾವ
ಅಂತ್ಯಕಾಲದಲ್ಲಿ ಬರುವ ಹರಿಸ್ಮರಣೆಯನ್ನು ತಪ್ಪಿಸಲು ಕಲಿ ಯಾವ ರೀತಿ ಪ್ರಭಾವ ಬೀರುತ್ತಾನೆ, ನಮ್ಮ ‘ಸ್ವಧರ್ಮ’ ವನ್ನು ತಪ್ಪಿಸಲು ಪ್ರಯತ್ನಿಸುತ್ತಾನೆ ಎನ್ನುವದರ ವಿವರಣೆ ಇಲ್ಲಿದೆ.
ರುದ್ರ ರಥದ ವೈಭವ
ಸೂರ್ಯ ಚಂದ್ರರನ್ನು ಚಕ್ರಗಳನ್ನಾಗಿ, ವೇದಗಳನ್ನೇ ಅಶ್ವಗಳನ್ನಾಗಿ, ಬ್ರಹ್ಮದೇವರನ್ನೇ ಸಾರಥಿಯನ್ನಾಗಿ ಉಳ್ಳ ರುದ್ರರಥದ ವೈಭವದ ಚಿತ್ರಣ ಇಲ್ಲಿದೆ.
ಕೆಟ್ಟ ಸುದ್ದಿಯನ್ನು ಹೇಳುವ ಮುನ್ನ
ನಮ್ಮ ಜೀವನದಲ್ಲಿ ಅನೇಕ ಬಾರಿ ಕೆಟ್ಟ ಸುದ್ದಿಯನ್ನು ಹೇಳುವ ಪ್ರಸಂಗ ಒದಗುತ್ತದೆ. ಆದರೆ, ಕೆಟ್ಟ ಸುದ್ದಿಯನ್ನು ಹೇಳುವ ಮುನ್ನು ಯಾವೆಲ್ಲ ಎಚ್ಚರಗಳಿರಬೇಕು ಎನ್ನುವದನ್ನು ನಾವಿಲ್ಲಿ ತಿಳಿಯುತ್ತೇವೆ. “ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ ಸತ್ತ ಸುದ್ದಿಯ ಪೇಳಿದೆ” ಎಂಬ ಶ್ರೀ ಜಗನ್ನಾಥದಾಸಾರ್ಯರ ವಚನದ ಚಿಂತನೆಯೊಂದಿಗೆ. ಜಾತಕದ ಸಮಸ್ಯೆಗಳನ್ನು ಹೇಳುವ ಮುನ್ನ ಜ್ಯೋತಿಷಿಗಳಿಗೆ ಯಾವ ಎಚ್ಚರ ಇರಬೇಕು ಎಂಬ ವಿವರಣೆಯೊಂದಿಗೆ.
ಬಂಧುಗಳೇ ಶತ್ರುಗಳಾದಾಗ
ಅನೇಕ ಬಾರಿ ನಾವು ಪ್ರೀತಿಸುವ, ಗೌರವಿಸುವ ಜನರೇ ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಾರೆ. ತಂದೆ ತಾಯಿಯರು ಎಷ್ಟೇ ಪ್ರೀತಿ ತೋರಿದರೂ ಮಕ್ಕಳು ತಿರಸ್ಕರಿಸುತ್ತಾರೆ. ಮಕ್ಕಳು ಎಷ್ಟೈ ಗೌರವ ತೋರಿದರೂ ತಂದೆ ತಾಯಿಗಳು ಅವಜ್ಞೆ ಮಾಡುತ್ತಾರೆ. ನಾವು ಭಾಗವತರು, ಪರಮಾತ್ಮನಿಗೆ ಪ್ರಿಯರು, ಎಂದು ಕರೆಸಿಕೊಳ್ಳಬೇಕಾದರೆ ಇಂತಹ ಸಂದರ್ಭಗಳಲ್ಲಿ ನಮ್ಮ ವ್ಯವಹಾರ ಹೇಗಿರಬೇಕು ಎನ್ನುವದನ್ನು ವಿವರಿಸುವ ಭಾಗ. ತಪ್ಪದೇ ಕೇಳಿ.
ನೈವೇದ್ಯದ ಅನುಸಂಧಾನ
ಭಗವಂತನಿಗೆ ನೈವೇದ್ಯವನ್ನು ಸಮರ್ಪಿಸಬೇಕಾದರೆ ಯಾವ ಎಚ್ಚರ, ಅನುಸಂಧಾನಗಳಿರಬೇಕು ಎನ್ನುವದನ್ನು ವಿವರಿಸುವ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ವಚನಗಳ ಅರ್ಥಾನುಸಂಧಾನ.
ಯಾವುದು ಕಾಕಶಾಸ್ತ್ರ, ಯಾವುದು ಹಂಸಶಾಸ್ತ್ರ?
ಇವತ್ತು ಓದಲಿಕ್ಕೆ ನೂರಾರು ರೀತಿಯ ವಿಷಯಗಳಿವೆ. ಆದರೆ ಯಾವುದು ಕಾಕಶಾಸ್ತ್ರ ಯಾವುದು ಹಂಸಶಾಸ್ತ್ರ ಎಂದು ಶ್ರೀ ನಾರದರು ಅದ್ಭುತವಾಗಿ ವಿಭಾಗ ಮಾಡಿ ನೀಡಿದ್ದಾರೆ. ತಪ್ಪದೇ ಕೇಳಿ.
ಎಲ್ಲರನೂ ಸಲುಹವವನು
ಬಡವ ಬಲ್ಲಿದ ಎಂದು ಭೇದ ಮಾಡದೇ, ಬ್ರಾಹ್ಮಣ ಶೂದ್ರ ಎಂಬ ಭೇದ ಮಾಡದೇ, ಗಂಡು, ಹೆಣ್ಣು, ತಿಳಿದವ, ತಿಳಿಯದವ ಮುಂತಾದ ಯಾವ ಬೇದವನ್ನೂ ಮಾಡದೇ ಭಗವಂತ ಎಲ್ಲರನ್ನೂ ಕಾಪಾಡುವ ದೇವರಲ್ಲಿ ನಾವು ಮಾಡಬೇಕಾದ ಒಂದು ಪ್ರಾರ್ಥನೆಯ ವಿವರಣೆ ಇಲ್ಲಿದೆ.
ಶ್ರೀಮದ್ವಾದಿರಾಜರ ಸ್ತೋತ್ರರಚನಾಕೌಶಲ
ಕವಿಕುಲತಿಲಕರಾದ ನಮ್ಮ ಶ್ರೀಮದ್ವಾದಿರಾಜಗುರುಸಾರ್ವಭೌಮರ ಅದ್ಭುತ ಕವಿತಾಕೌಶಲದ ಒಂದು ಚಿತ್ರಣ. “ಬಳಸುವರು ಸತ್ಕವಿಗಳವರು, ಅವರಗ್ಗಳಿಕೆ ಎನಗಿಲ್ಲ” ಎಂಬ ಶ್ರೀ ಕನಕದಾಸಾರ್ಯರ ವಚನದ ಅರ್ಥಾನುಸಂಧಾನದ ಸಂದರ್ಭದಲ್ಲಿ.
ಸರ್ವಕರ್ತಾ ಅಕರ್ತೃವೇ?
ಶಾಸ್ತ್ರಗಳು ಒಂದು ಕಡೆಯಲ್ಲಿ ಭಗವಂತನನ್ನು ಸರ್ವಕರ್ತಾ ಎಂದು ಕರೆಯುತ್ತದೆ. ಮತ್ತೊಂದೆಡೆ ಕರ್ತೃವೇ ಅಲ್ಲ ಎಂದು ಕರೆಯುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುವದು ಹೇಗೆ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ಉತ್ತರದ ವಿವರಣೆ ಇಲ್ಲಿದೆ.
ಬಾಣಾಸುರನ ಕಥೆ
ಬಾಣಾಸುರ ರುದ್ರದೇವರ ಅನುಗ್ರಹವನ್ನು ಪಡೆದದ್ದು, ಶ್ರೀಕೃಷ್ಣ ರೂಪದ ಭಗವಂತ ಅವನನ್ನು ಶಾಸನ ಮಾಡಿದ ಕ್ರಮ, ಶೈವಜ್ವರ ವೈಷ್ಣವಜ್ವರಗಳ ರೋಚಕ ಸಂಗ್ರಾಮ ಮುಂತಾದವುಗಳ ಚಿತ್ರಣ ಇಲ್ಲಿದೆ.
ದೇವರ ತೀರ್ಥವನ್ನು ತೆಗೆದುಕೊಳ್ಳುವ ಮುಂಚೆ
ಸಾಲಿಗ್ರಾಮ ಪ್ರತಿಮೆಗಳಿಗೆ ಮಾಡಿದ ಅಭಿಷೇಕದ ತೀರ್ಥವನ್ನು ತೆಗೆದುಕೊಳ್ಳುವದಕ್ಕಿಂತ ಮುಂಚೆ ನಮಗಿರಬೇಕಾದ ಅನುಸಂಧಾನ, ತೀರ್ಥದ ಮಾಹಾತ್ಮ್ಯ, ತೀರ್ಥದ ಮುಖಾಂತರ ದೇವರು ಮಾಡುವ ಅನುಗ್ರಹದ ಚಿಂತನೆ ಇಲ್ಲಿದೆ.
ಶರಣಾಗತಿಯ ಮಾಹಾತ್ಮ್ಯ
ಮಾಡಿದ ದುಷ್ಕರ್ಮಕ್ಕೆ ದುಷ್ಫಲ ತಪ್ಪಿದ್ದಲ್ಲ, ಬಂದೇ ಬರುತ್ತದೆ ಎಂದಾದ ಬಳಿಕ ದೇವರಿಗೆ ಶರಣಾಗಿ ಉಪಯೋಗವೇನು ಎಂಬ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ಕರ್ಣನ ದೃಷ್ಟಾಂತದ ಮೂಲಕ ನೀಡಿದ ದಿವ್ಯವಾದ ಉತ್ತರದ ವಿವರಣೆ ಇಲ್ಲಿದೆ.
ದೇವರೇಕೆ ನಮಗೆ ನೇರವಾಗಿ ಉಪದೇಶಿಸುವದಿಲ್ಲ?
ರಾಮಚಂದ್ರನ ಜೊತೆಯಲ್ಲಿದ್ದರೂ ಸುಗ್ರೀವ ಯಾಕಾಗಿ ಅಣ್ಣನ ಹೆಂಡತಿಯನ್ನು ಅಪಹರಿಸುವಂತಹ ತಪ್ಪು ಮಾಡಿದ? ದೇವರು ತಡೆಯಬಹುದಿತ್ತಲ್ಲವೇ? ನಮಗೂ ಸಹ ದೇವರು, ಗುರುಗಳು ನೇರವಾಗಿ ಉಪದೇಶ ಮಾಡಿ ಸಂಸಾರದಿಂದ ಉದ್ದಾರ ಮಾಡಿಬಿಡಬಹುದಲ್ಲವೇ ಎಂಬ ಪ್ರಶ್ನೆಗೆ ಶಾಸ್ತ್ರ ನೀಡಿದ ಉತ್ತರದ ವಿವರಣೆ ಇಲ್ಲಿದೆ.
ಪೂತನಾ ಸಂಹಾರ
ಪೂತನೆಯ ಸ್ವರೂಪ, ಅವಳು ಶ್ರೀಕೃಷ್ಣನನ್ನು ಕೊಲ್ಲಲು ಬಂದದ್ದು, ಅವಳಲ್ಲಿದ್ದ ತಾಟಕೆಯನ್ನು ನಿಗ್ರಹಿಸಿ, ಊರ್ವಶಿಯನ್ನು ಭಗವಂತ ಅನುಗ್ರಹಿಸಿದ ಕಥೆಯ ವಿವರಣೆ ಇಲ್ಲಿದೆ.
ವಸುದೇವ ದೇವಕಿಯರ ಎತ್ತರ
ವಸುದೇವ ದೇವಕಿಯರ ಕಾಲಿಗೆ ಸಂಕೋಲೆಗಳನ್ನು ಹಾಕಿ, ಅವರ ಆರು ಮಕ್ಕಳನ್ನು ಕೊಂದು, ಈ ಹೆಣ್ಣು ಮಗುವನ್ನಾದರೂ ಬಿಡು ಎಂದು ಗೋಗರೆದರೂ ದುರ್ಗೆಯನ್ನು ಕೊಲ್ಲಲು ಪ್ರಯತ್ನಿಸಿ ವಿಫಲನಾದ ನಂತರ ಕಂಸ ವಸುದೇವ ದೇವಕಿಯರನ್ನು ಕರೆಯಿಸಿ ಕ್ಷಮೆ ಬೇಡುತ್ತಾನೆ. ಆ ಪರಿ ಅಪರಾಧ ಅವನು ಮಾಡಿದ್ದರೂ ಅವನ ಮೇಲೆ ಸಿಟ್ಟಾಗದೇ ವಸುದೇವ ದೇವಕಿಯರು ಆಡುವ ಮಾತು ಅವರು ಎಂತಹ ಭಾಗವತೋತ್ತಮರು ಎನ್ನುವದನ್ನು ತೋರಿಕೊಡುತ್ತದೆ. ಆ ಕಥೆಯ ಚಿಂತನೆ ಇಲ್ಲಿದೆ.
ಗುರ್ವನುಗ್ರಹ
ಈಗ ನಡೆಯುತ್ತಿರುವ ಶ್ರೀಮದ್ ಭಾಗವತದ ಪ್ರವಚನದ ಮಾಲಿಕೆಯ ಮೇಲೆ ಶ್ರೀಮದ್ ವಾದಿರಾಜಗುರುಸಾರ್ವಭೌಮರ ಮತ್ತು ಶ್ರೀ ವಿದ್ಯಾವಾರಿಧಿತೀರ್ಥಗುರುವರೇಣ್ಯರ ಅನುಗ್ರಹದ ಸ್ಮರಣೆ.
ನಿನ್ನ ಬಂಧಕ ಶಕ್ತಿಗೆ ನಮೋ ಎಂಬೆ
ದೇವರು ಜೀವರನ್ನು ಯಾವ ರೀತಿ ಸಂಸಾರದಲ್ಲಿ ಬಂಧಿಸಿದ್ದಾನೆ ಎನ್ನುವದರ ಒಂದು ವಿವರಣೆ.
ಕಲಿಯುಗಕ್ಕೇಕೆ ಅವಕಾಶ?
ಕಲಿಯುಗದಲ್ಲಿ ಎಲ್ಲ ರೀತಿಯ ಅಪಚಾರಗಳು ಸಂಭವಿಸುತ್ತವೆ, ಕಲಿಯುಗ ನೀಚವಾದ ಯುಗ ಎಂದೆಲ್ಲ ನಾವು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ, ಶಾಸ್ತ್ರದಲ್ಲಿಯೂ ಕೇಳುತ್ತೇವೆ. ಅಂದ ಮೇಲೆ ಕಲಿಯುಗಕ್ಕೇ ಭಗವಂತ ಏಕೆ ಅವಕಾಶ ನೀಡಬೇಕು ಎಂಬ ಪ್ರಶ್ನೆಗೆ ನಾರದರು ನೀಡಿದ ಅದ್ಭುತವಾದ ಉತ್ತರದ ವಿವರಣೆ ಇಲ್ಲಿದೆ.
ಲಕ್ಷ್ಮಿಯ ಅನುಗ್ರಹಕ್ಕೆ ಯಾರು ಪಾತ್ರರು?
ಮಹಾಲಕ್ಷ್ಮೀದೇವಿ ಯಾರ ಮೇಲೆ ಅನುಗ್ರಹ ಮಾಡುತ್ತಾರೆ ಎನ್ನುವದನ್ನು ಸ್ವಯಂ ಲಕ್ಷ್ಮೀದೇವಿಯೇ ವೇದಗಳಲ್ಲಿ ತಿಳಿಸಿದ್ದಾರೆ. ಆ ಮಾತಿನ ಚಿಂತನೆ ಇಲ್ಲಿದೆ.
ವಿಭೀಷಣ ಮಹಾರಾಜರ ಕಥೆ
ರಾವಣನನ್ನು ತೊರೆದು ಬಂದ ವಿಭೀಷಣ, ಶ್ರೀರಾಮಚಂದ್ರನ ಬಳಿಗೆ ಬಂದು ಆಶ್ರಯ ಪಡೆಯುವ ಕ್ರಮವನ್ನು ಶ್ರೀ ನಾರಾಯಣಪಂಡಿತಾಚಾರ್ಯರು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಸುಗ್ರೀವ, ಜಾಂಬವಂತ ಮೊದಲಾಗಿ ಎಲ್ಲರೂ ವಿಭೀಷಣನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲೇಬಾರದು ಎಂದು ವಾದಿಸುತ್ತಾರೆ. ಅವರ ಎಲ್ಲ ಮಾತಿಗೆ ಉತ್ತರವನ್ನು ಕೊಡುವ ಹನುಮಂತದೇವರು ವಿಭೀಷಣರನ್ನು ಪರಮಾತ್ಮನ ಪಾದದಡಿಯಲ್ಲಿ ಸೇರಿಸುವ ಕ್ರಮವೇ ಅದ್ಭುತ. ಭಗವಂತನ ಮತ್ತು ಭಗವದ್ಭಕ್ತರ ದಿವ್ಯಸಂಬಂಧ ಹೇಗಿರಬೇಕು ಎಂದು ಪ್ರತಿಪಾದಿಸುವ ಕಥೆ ವಿಭೀಷಣರ ಕಥೆ. ತಪ್ಪದೇ ಕೇಳಿ.
ಕಾಲ ಚಿಂತನೆ
ದೇವಕೀದೇವಿ ಚಿಂತನೆ ಮಾಡಿದ ಕಾಲನಾಮಕ ಭಗವಂತನ ಮಹಾಮಾಹಾತ್ಮ್ಯದ ವಿವರಣೆ.
ಭಾಗವತವನ್ನು ಏಕೆ ಕೇಳಬೇಕು?
ಶ್ರೀಮದ್ ಭಾಗವತದ ಶ್ರವಣವನ್ನು ಏಕೆ ಮಾಡಬೇಕು ಎನ್ನುವದಕ್ಕೆ ಪದ್ಮಪುರಾಣದಲ್ಲಿ ಶ್ರೀ ವೇದವ್ಯಾಸದೇವರು ಅದ್ಭುತವಾದ ಉತ್ತರಗಳನ್ನು ನೀಡಿದ್ದಾರೆ. ನಮ್ಮನ್ನು ಭಾಗವತಶ್ರವಣದಲ್ಲಿ ರತರನ್ನಾಗಿ ಮಾಡಿಸುವ ಆ ವಚನಗಳ ಅರ್ಥಾನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ.
ಭೂತರಾಜರ ಅನುಗ್ರಹ
ನಮ್ಮ ಗುರುಗಳು ನಂಬಿದವರನ್ನು ಕೈಬಿಡುವದಿಲ್ಲ ಎನ್ನುವದಕ್ಕೊಂದು ನನ್ನ ಮನೆಯಲ್ಲಿಯೇ ನಡೆದ ಘಟನೆಯ ಉದಾಹರಣೆ.
ಕೃಷ್ಣಾವತಾರ
ಶ್ರೀಕೃಷ್ಣನ ಅವತಾರದಿಂದ ಆರಂಭಿಸಿ ಪರಂಧಾಮಪ್ರವೇಶದವರೆಗಿನ ಘಟನೆಗಳ ಸ್ಮರಣೆ.
ಭಕ್ತರ ತಾಯಿ ದೇವರು
ದೇವರಿಗೂ ಭಕ್ತರಿಗೂ ಇರುವ ತಾಯಿ ಮಕ್ಕಳ ಸಂಬಂಧದ ನಿರೂಪಣೆ, ಶ್ರೀ ಕನಕದಾಸಾರ್ಯರ ವಾಣಿಯಲ್ಲಿ. ತಪ್ಪದೇ ಕೇಳಿ.
ದೇವರು ಭಕ್ತರ ಬಾಂಧವ್ಯ
ನಾವು ಎಷ್ಟು ಬ್ಯಾಂಕಿನಲ್ಲಿ ಹಣ ಇಟ್ಟಿದ್ದೇವೆಯೋ ಅಷ್ಟನ್ನು ಮಾತ್ರ ಬ್ಯಾಂಕು ತಿರುಗಿಸಿ ಕೊಡುತ್ತದೆ. ದೇವರೂ ಸಹ ನಾವು ಎಷ್ಟು ಸೇವೆಯನ್ನು ಮಾಡುತ್ತೇವೆಯೋ ಅಷ್ಟು ಮಾತ್ರ ಫಲ ನೀಡುತ್ತಾನೆ. ಅಂದಮೇಲೆ, ದೇವರಿಗೂ ಒಂದು ಬ್ಯಾಂಕಿಗೂ ಏನು ವ್ಯತ್ಯಾಸ? ಎಂಬ ಪ್ರಶ್ನೆಗೆ ನಮ್ಮ ಶ್ರೀಕನಕದಾಸರು ಅದ್ಭುತವಾದ ಉತ್ತರವನ್ನು ನೀಡಿದ್ದಾರೆ. ಕೇಳಿ.
ಪೂಜೆಯಿಂದ ಉದ್ವಿಗ್ನತೆಯ ಪರಿಹಾರ
ದೇವರ ಪೂಜೆಯನ್ನು ನಿರಂತರ ಮಾಡುವದರಿಂದ ಅದೆಂತಹ ಕಷ್ಟಗಳು ಎದುರಾದರೂ ಉದ್ವೇಗಕ್ಕೆ ಒಳಗಾಗದೆ ಬದುಕುವ ಎತ್ತರವನ್ನು ದೇವರ ಪೂಜೆ ನೀಡುತ್ತದೆ ಎನ್ನುವ ವಿಷಯದ ನಿರೂಪಣೆ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಕೌಶಲ
ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಶಬ್ದಪ್ರಯೋಗಕೌಶಲವೇ ಅದ್ಭುತ. ಅವರು ರಚಿಸಿರುವ ದಿವ್ಯಸ್ತೋತ್ರವಾದ ಶ್ರೀ ವಿಷ್ಣುಸ್ತುತಿಯ ಮಾಧುರ್ಯಸಮದ್ರದಿಂದ ತಂದಿರುವ ಒಂದು ಸಣ್ಣ ಬೊಗಸೆಯಿದು.
ಧನ್ಯೋ ಗೃಹಸ್ಥಾಶ್ರಮಃ
ಗೃಹಸ್ಥಾಶ್ರಮದಲ್ಲಿ ಮಾಡಬೇಕಾದ ಸಾಧನೆ, ಆ ಸಾಧನೆಯನ್ನು ಮಾಡಲು ಮಾಡಬೇಕಾದ ಪ್ರಾರ್ಥನೆ, ಸಾಧನೆ ಮಾಡಿದವರ ಚರಿತ್ರೆಯ ನಿರೂಪಣೆ ಇಲ್ಲಿದೆ.
ಕನಕದಾಸರು ಹೇಳಿದ ಒಂದು ಗಿಳಿಯ ಕಥೆ
ದೇವರಿಗೆ ನಮ್ಮನ್ನು ನಾವು ನಿವೇದಿಸಿಕೊಳ್ಳುವದು ಹೇಗೆ, ಆತ್ಮಸಮರ್ಪಣೆ ಎಂದರೇನು, ನಿವೇದಿಸಿಕೊಂಡು ಯಾವ ಪ್ರಾರ್ಥನೆ ಸಲ್ಲಿಸಬೇಕು, ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ತಪ್ಪದೇ ಕೇಳಿ.
ದೇವರನ್ನು ಒಲಿಸಿಕೊಳ್ಳಲು ಏನು ಮಾಡಬೇಕು?
ಶಾಸ್ತ್ರ ತಿಳಿಸುವ ಸರಳ ಮತ್ತು ಪರಿಣಾಮಕಾರಿ ಮಾರ್ಗದ ನಿರೂಪಣೆ ಇಲ್ಲಿದೆ. ನೀವೂ ಕೇಳಿ. ಎಲ್ಲ ಸಜ್ಜನರಿಗೂ ಕೇಳಿಸಿ.
ತೀರ್ಥಪ್ರಾಶನದ ಮಾಹಾತ್ಮ್ಯ
ದೇವರಿಗೆ ಅಭಿಷೇಕ ಮಾಡಿದ ತೀರ್ಥವನ್ನು ಸ್ವೀಕರಿಸುವದರಿಂದ ಹನ್ನೆರಡು ವರ್ಷಗಳ ಉಪವಾಸದ ಫಲ ದೊರೆಯುತ್ತದೆ ಎಂಬ ಮಾಹಾತ್ಮ್ಯವನ್ನು ಸ್ವಯಂ ಶ್ರೀಮದಾಚಾರ್ಯರು ಕೃಷ್ಣಾಮೃತಮಹಾರ್ಣವದಲ್ಲಿ ತಿಳಿಸಿದ್ದಾರೆ. ಅದರ ವಿವರಣೆ ಇಲ್ಲಿದೆ.
ಗೋಪಿಗೀತೆ
ದೇವರ ಬಗೆಗೆ ನಮಗಿರುವ ಭಕ್ತಿಯನ್ನು ನೂರ್ಮಡಿ ಗೊಳಿಸುವ ಗೀತೆ ಗೋಪಿಗೀತೆ. ದೇವರ ಕಾರುಣ್ಯದ ಮಹಾರೂಪವನ್ನ ಪರಿಚಯಿಸುವ ಹಾಡುಗಬ್ಬ.
ಉಡುಪಿಯ ಕೃಷ್ಣನ ಇತಿಹಾಸ
ಉಡುಪಿಗೆ ಕೃಷ್ಣನ ಪ್ರತಿಮೆ ನಿರ್ಮಾಣವಾದದ್ದು ಹೇಗೆ, ಉಡುಪಿಗೆ ಬಂದದ್ದು ಹೇಗೆ, ಆಚಾರ್ಯರಿಗೆ ದೊರೆತದ್ದು ಹೇಗೆ ಎನ್ನುವದರ ಕುರಿತು ಶ್ರೀ ಪಲಿಮಾರು ಮಠದ ಶ್ರೀ ರಘುವರ್ಯತೀರ್ಥಶ್ರೀಪಾದಂಗಳವರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಅಲ್ಲಿನ ವಿಷಯದ ಅನುವಾದ ಇಲ್ಲಿದೆ.
ಮಹಾಮಹಿಮ
ಗಾಯತ್ರಿಯ ಜಪ ಮಾಡುವಾಗ, ಸಾಲಿಗ್ರಾಮ ಪ್ರತಿಮೆಗಳ ಪೂಜೆ ಮಾಡುವಾಗ, ಶ್ರೀಹರಿಯನ್ನು ಭಕ್ತಿಯಿಂದ ನೆನೆವಾಗ, ಅವನ ಪರಮಪವಿತ್ರಪಾದಗಳಿಗೆ ಹಣೆಮಣಿದು ನಮಸ್ಕರಿಸುವಾಗ ನಮ್ಮ ಮನಸ್ಸಿನಲ್ಲಿ ಮೂಡಲೇಬೇಕಾದ ಹರಿಮಾಹಾತ್ಮ್ಯದ ಚಿಂತನೆ. ತಪ್ಪದೇ ಕೇಳಿ.
ದ್ರೌಪದಿ ವಸ್ತ್ರಾಪಹರಣದ ಆಧ್ಯಾತ್ಮಿಕ ಅರ್ಥ
ದ್ರೌಪದೀದೇವಿಯರ ವಸ್ತ್ರಾಪಹರಣ ಪ್ರಸಂಗದ ಕುರಿತು ಸಮಾಜದಲ್ಲಿರುವ ಒಂದು ಭ್ರಾಂತಿಯನ್ನು ಆಚಾರ್ಯರ ನಿರ್ಣಯದ ಆಧಾರದ ಮೇಲೆ ನಿವಾರಿಸಿ ಇಡಿಯ ದ್ರೌಪದೀ ವಸ್ತ್ರಾಪಹರಣದ ಪ್ರಸಂಗ ನಮ್ಮೊಳಗೆ ಹೇಗೆ ನಡೆಯುತ್ತದೆ, ಎನ್ನುವದನ್ನು ವಿವರಿಸುತ್ತ, ನಾವು ಕಲಿಯಿಂದ ಕಲಿಯ ಪ್ರಭಾವದಿಂದ ಹೇಗೆ ಪಾರಾಗುವದು ಎನ್ನುವದನ್ನು ವಿವರಿಸುವ ಭಾಗ.
ನಮ್ಮೊಳಗಿನ ಮಹಾಭಾರತ
ಮಹಾಭಾರತ ಎನ್ನುವದು ಕೇವಲ ಎಂದೋ ನಡೆದು ಹೋದ ಇತಿಹಾಸವಲ್ಲ. ಪ್ರತಿಯೊಬ್ಬನ ಚೇತನನಲ್ಲಿಯೂ ಮಹಾಭಾರತ ಯಾವಾಗಲೂ ನಡೆಯುತ್ತದೆ. ನಮ್ಮೊಳಗೆ ನಡೆಯುವ ಆಧ್ಯಾತ್ಮಿಕ ಮಹಾಭಾರತವನ್ನು ಅನಾವರಣಗೊಳಿಸಿದವರು ಶ್ರೀಮದಾಚಾರ್ಯರು. ಆ ಉತ್ತುಂಗ ಚಿಂತನೆಯ ವಿವರಣೆ ಇಲ್ಲಿದೆ.