Purushottama Masa



Upanyasas - VNU668

ಅಧಿಕಮಾಸದ ದಾನದ ಮಂತ್ರ ಮತ್ತು ವಿಧಿ

ಸಂಕಲ್ಪ ಮತ್ತು ಸಮರ್ಪಣೆಯಿಲ್ಲದ ಕರ್ಮ ಫಲಪ್ರದವಾಗುವದಿಲ್ಲ. ಹೀಗಾಗಿ  ಸಜ್ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸಮಗ್ರ ದಾನದ ವಿಧಿಯನ್ನು ಇಲ್ಲಿ ಆಡಿಯೋ ರೂಪದಲ್ಲಿ ನೀಡಲಾಗಿದೆ. 31 ನಿಮಿಷಗಳು. 

3943 Views
Upanyasas - VNU664

ಅಧಿಕಮಾಸದ ದಾನಗಳು

ದಾನವನ್ನು ಮಾಡಬೇಕಾದರೆ ನಮಗಿರಬೇಕಾದ ಎಚ್ಚರಗಳು, ಮಾಡುವ ತಪ್ಪುಗಳು, ಅಪೂಪ ದಾನ, ದೀಪದಾನ, ಭಾಗವತದಾನ, ತೀರ್ಥಸ್ನಾನ, ಅಧಿಕ ಮಾಸದ ನಿತ್ಯಧರ್ಮಗಳು, ರಾಧಾಪುರುಷೋತ್ತಮಪೂಜಾ, ಭಾಗವತಶ್ರವಣ ಮುಂತಾದ ವಿಷಯಗಳ ನಿರೂಪಣೆ ಇಲ್ಲಿದೆ. 

3426 Views
Upanyasas - VNU663

ಅಧಿಕಮಾಸದ ವ್ರತಗಳು

ಪುರುಷೋತ್ತಮಮಾಸದಲ್ಲಿ ಮಾಡಬೇಕಾದ ನಿತ್ಯವ್ರತಗಳು, ಉಪವಾಸದ ಮಹತ್ತ್ವ, ಉಪವಾಸದ ವ್ರತಗಳು, ಕ್ರಮಧಾನ್ಯತ್ಯಾಗವ್ರತ, ರಾತ್ರಿಭೋಜನವ್ರತ, ಭೂಮಿಶಯನವ್ರತ, ಮೌನವ್ರತ, ಅಖಂಡದೀಪವ್ರತ ಮುಂತಾದವುಗಳ ಕುರಿತ ವಿವರಣೆ ಇಲ್ಲಿದೆ. 

3330 Views
Upanyasas - VNU662

ಅಧಿಕ ಮಾಸದ ತಿರಸ್ಕಾರದ ಫಲ

ಪುರುಷೋತ್ತಮ ಮಾಸದ ಮಾಹಾತ್ಮ್ಯವನ್ನು ತಿಳಿದ ಬಳಿಕವೂ ಅದನ್ನು ತಿರಸ್ಕಾರ ಮಾಡುವದರಿಂದ ಅದೆಂತಹ ದುಷ್ಫಲವುಂಟಾಗುತ್ತದೆ ಎನ್ನುವದನ್ನು ದ್ರೌಪದಿಯ ದೃಷ್ಟಾಂತದ ಮುಖಾಂತರ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ತಿಳಿಸಿ ಹೇಳುತ್ತಾನೆ. ಬ್ರಹ್ಮದೇವರ ಶಾಪದಂತೆ ಪಾರ್ವತ್ಯಾದಿ ಸ್ತ್ರೀಯರು ಹಿಂದೆ ಬ್ರಾಹ್ಮಣಕನ್ಯೆಯಾಗಿ ಹುಟ್ಟಿದ್ದಾಗ, ದುರ್ವಾಸರ ಉಪದೇಶವನ್ನು ಪಡೆದರೂ ಅಧಿಕಮಾಸವನ್ನು ತಿರಸ್ಕಾರ ಮಾಡಿದ ಕಾರಣಕ್ಕೆ ವಸ್ತ್ರಾಪಹಾರದ ದೋಷಕ್ಕೆ ಒಳಗಾಗುತ್ತಾರೆ ಎಂಬ ಕಥೆಯ ವಿಸ್ತೃತ ನಿರೂಪಣೆ ಇಲ್ಲಿದೆ. ಶ್ರೀಮದಾಚಾರ್ಯರ ನಿರ್ಣಯಗಳ ವಿವರಣೆಯೊಂದಿಗೆ. 

3334 Views
Upanyasas - VNU661

ಪರಮಾತ್ಮ ಮಾಡಿದ ಪರಮಾನುಗ್ರಹ

ಅಧಿಕಮಾಸದ ದೇವತೆಯ ಉದ್ಧಾರಕ್ಕಾಗಿ ವೈಕುಂಠ ನಾರಾಯಣ ರೂಪದಿಂದ ಗೋಲೋಕದ ಪುರುಷೋತ್ತಮ ರೂಪಕ್ಕೆ ಸ್ವಯಂ ಭಗವಂತನೇ ವಿಜ್ಞಾಪನೆ ಮಾಡಿಕೊಳ್ಳುವ ಅಪೂರ್ವ ಪ್ರಸಂಗವನ್ನು ನಾವಿಲ್ಲಿ ಕೇಳುತ್ತೇವೆ. ಪುರುಷೋತ್ತಮರೂಪದ ಭಗವಂತ ಅಧಿಕ ಮಾಸದ ದೇವತೆಯ ಮೇಲೆ ಮಾಡುವ ಪರಮಾನುಗ್ರಹದ ಚಿತ್ರಣದೊಂದಿಗೆ. 

3385 Views
Upanyasas - VNu660

ಅಧಿಕಮಾಸದ ದೇವತೆಯ ದುಃಖ

ಎಲ್ಲ ಕರ್ಮಗಳಿಗೂ ವರ್ಜ್ಯವಾದ, ದೇಹಕ್ಕೆ ಅನವಶ್ಯಕವಾದ ಪದಾರ್ಥ ಮಲ ಎಂದು ಕರೆಸಿಕೊಳ್ಳುವಂತೆ, ಉಳಿದ ಕಾಲದದೃಷ್ಟಿಯಲ್ಲಿ ಮಲ ಮಾಸ ಎಂದು ಕರೆಸಿಕೊಳ್ಳುತ್ತಿದ್ದ ಈ ಅಧಿಕಮಾಸಕ್ಕೆ ಅಭಿಮಾನಿಯಾದ ದೇವತೆ ದುಃಖದಿಂದ ಸಂತಪ್ತನಾಗಿ ಸಾಯಲು ಸಿದ್ಧನಾಗುತ್ತಾನೆ. ಆಗ ದೇವತೆಗಳೆಲ್ಲ ಸಂತೈಸಿ ಅವನನ್ನು ವೈಕುಂಠದ ಶ್ರೀಹರಿಯ ಬಳಿಗೆ ಕಳುಹಿಸುತ್ತಾರೆ. ಅಲ್ಲಿಗೆ ಬಂದು ದುಃಖದ ನಿವೇದನೆ ಮಾಡಿಕೊಂಡ ಆ ದೇವತೆಯನ್ನು ಶ್ರೀಮನ್ನಾರಾಯಣ ಗೋಲೋಕಕ್ಕೆ ಕರೆದುಕೊಂಡು ಹೋಗುವ, ಆ ಗೋಲೋಕದಲ್ಲಿರುವ ಶ್ರೀಕೃಷ್ಣನ ದಿವ್ಯರೂಪದ ವರ್ಣನೆಯಿರುವ ಭಾಗ. 

3615 Views
Upanyasas - VNU659

ಪುರುಷೋತ್ತಮ ಮಾಸದ ಮಾಹಾತ್ಮ್ಯ

ಭೂಲೋಕದಲ್ಲಿ ಕಷ್ಟ ಪಡುವ ಸಜ್ಜನರನ್ನು ಉದ್ಧಾರ ಮಾಡಲೆಂದೇ ಸಂಚಾರ ಮಾಡುವ, ಅಪಾರ ಕಾರುಣ್ಯದ ನಾರದರು, ಬದರಿಯ ನಾರಾಯಣನ ಬಳಿಗೆ ಬಂದು ಸಜ್ಜನರ ಕಷ್ಟಗಳನ್ನು ವಿಜ್ಞಾಪಿಸಿಕೊಂಡು ಎಲ್ಲ ಕಷ್ಟಗಳ ಪರಿಹಾರಕ್ಕಾಗಿ ಉಪಾಯವನ್ನು ಪ್ರಾರ್ಥಿಸುತ್ತಾರೆ. ಆಗ ಆ ಬದರೀನಾಥ ಪುರುಷೋತ್ತಮ ಮಾಸದ ಮಾಹಾತ್ಮ್ಯವನ್ನು ನಾರದರಿಗೆ ಉಪದೇಶಿಸುತ್ತಾನೆ. ಭಗವಂತನ ವಾಣಿಯಲ್ಲಿ ಬಂದ ಅಧಿಕ ಮಾಸದ ಮಾಹಾತ್ಮ್ಯದ ವಿವರಣೆ ಇಲ್ಲಿದೆ. 

3671 Views
Upanyasas - VNU658

ಪುರುಷೋತ್ತಮ ಮಾಸದ ಪರಿಚಯ

ಅಧಿಕಮಾಸಕ್ಕೆ ನಿಯಾಮಕವಾದ ಭಗವದ್ರೂಪ ಗೋಲೋಕದ ಶ್ರೀ ಪುರುಷೋತ್ತಮ ಎನ್ನುವ ರೂಪ. ಹೀಗಾಗಿ ಈ ಮಾಸವನ್ನು ಪುರುಷೋತ್ತಮ ಮಾಸ ಎಂದು ಶಾಸ್ತ್ರಗಳು ದೊಡ್ಡವರು ಕರೆಯುತ್ತಾರೆ. ಈ ಮಾಸದ ಆವಶ್ಯಕತೆ, ಇದರ ಪರಿಚಯಗಳು ಈ ಉಪನ್ಯಾಸದಲ್ಲಿವೆ. ಪುರುಷೋತ್ತಮ ಮಾಸದ ಮಾಹಾತ್ಮ್ಯವನ್ನು ಕೇಳಲಿಕ್ಕಾಗಿ ಋಷಿಗಳ ಸಮುದಾಯವೇ ನೈಮಿಷಾರಣ್ಯಕ್ಕೆ ಧಾವಿಸಿ ಬರುತ್ತದೆ. ಈ ಮಾಹಾತ್ಮ್ಯವನ್ನು ಹೇಳಬರುವ ಸೂತಾಚಾರ್ಯರ ಅಪೂರ್ವ ವರ್ಣನೆಯೂ ಇಲ್ಲಿದೆ. 

4738 Views