Srimad Bhagavatam — 02



Upanyasas - VNU772

ಶ್ರೀಮದ್ ಭಾಗವತಮ್ — 209 — ರತ್ನಮಾಲಾ

ಶೌನಕರು ಸೂತರಿಗೆ ಮಾಡಿದ ಪ್ರಶ್ನೆ, ಅದಕ್ಕೆ ಉತ್ತರಗಳು, ವೇದವ್ಯಾಸದೇವರು ನಾರದರಿಗೆ ಮಾಡಿದ ಪ್ರಶ್ನೆ, ಅವರು ನೀಡಿದ ಉತ್ತರಗಳು, ಪರೀಕ್ಷಿದ್ರಾಜರು ಋಷಿಗಳಿಗೆ ಮಾಡಿದ ಪ್ರಶ್ನೆ, ಶುಕಾಚಾರ್ಯರ ಆಗಮನ, ಆ ಶುಕಾಚಾರ್ಯರು ನೀಡಿದ ಉತ್ತರ, ಆ ನಂತರ ನಾರದರು ಬ್ರಹ್ಮದೇವರ ಬಳಿಯಲ್ಲಿ ಮಾಡಿದ ಪ್ರಶ್ನೆಗಳು ಅವುಗಳಿಗೆ ಬ್ರಹ್ಮದೇವರು ನೀಡಿದ ಉತ್ತರ, ಆ ನಂತರ ಆ ನಂತರ ಮತ್ತೆ ಪರೀಕ್ಷಿದ್ರಾಜರು ಮಾಡಿದ ಪ್ರಶ್ನೆಗಳು ಹೀಗೆ ಮೊದಲನೆಯ ಸ್ಕಂಧದಿಂದ ಆರಂಭಿಸಿ ಎರಡನೆಯ ಸ್ಕಂಧದ ಕಡೆಯವರೆಗೆ ಭಾಗವತ ಪ್ರಶ್ನೋತ್ತರಗಳಲ್ಲಿ ಬೆಳೆದು ಬಂದ ಬಗೆಯ ಸಿಂಹಾವಲೋಕನ ಇಲ್ಲಿದೆ. 

8913 Views
Upanyasas - VNU771

ಶ್ರೀಮದ್ ಭಾಗವತಮ್ — 208 — ದೇವರು ಸರ್ವರಿಗೂ ಆಧಾರ

ದೇವರನ್ನು ಏಕೆ ಅಚಿಂತ್ಯ ಎಂದು ಶಾಸ್ತ್ರ ಕರೆಯುತ್ತದೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ದೊರೆಯುತ್ತದೆ.   ಸಾತ್ವಿಕ-ಸಾತ್ವಿಕ, ಸಾತ್ವಿಕ-ರಾಜಸ, ಸಾತ್ವಿಕ-ತಾಮಸ, ರಾಜಸ-ಸಾತ್ವಿಕ, ರಾಜಸ-ರಾಜಸ, ರಾಜಸ-ತಾಮಸ, ತಾಮಸ-ಸಾತ್ವಿಕ, ತಾಮಸ-ರಾಜಸ, ತಾಮಸ-ತಾಮಸ ಎಂಬ ವಿಭಾಗದ ವಿವರಣೆಯೊಂದಿಗೆ.

8428 Views
Upanyasas - VNU770

ಶ್ರೀಮದ್ ಭಾಗವತಮ್ — 207 — ನವರಂಧ್ರಗಳ ನಿರ್ಮಾಣ

ಪುರುಷಶರೀರದಲ್ಲಿ ಕಣ್ಣು ಕಿವಿ ಮುಂತಾದ ನವರಂಧ್ರಗಳು, ನಾಭಿ ಉತ್ಪನ್ನವಾದ ಪ್ರಕ್ರಿಯೆಯನ್ನು ನಾವಿಲ್ಲಿ ಕೇಳುತ್ತೇವೆ.   ಕೈಗಳ ಮಹತ್ವ, ಜನನೇಂದ್ರಿಯದ ಮಹತ್ತ್ವ ಹಾಗೂ ನಾಭಿಯ ಮಹತ್ತ್ವವನ್ನು ಭಾಗವತ ಈ ಸಂದರ್ಭದಲ್ಲಿ ಅದ್ಭುತವಾಗಿ ಮನಗಾಣಿಸುತ್ತದೆ. 

7407 Views
Upanyasas - VNU769

ಶ್ರೀಮದ್ ಭಾಗವತಮ್ — 206 — ಪಿಂಡಾಂಡದ ಸೃಷ್ಟಿ

ಇವತ್ತಿನ ಕಾಲದಲ್ಲಿ ಯಾವುದಾದರೂ ಹೊಸ ಪದಾರ್ಥವನ್ನು ನಿರ್ಮಾಣ ಮಾಡಬೇಕಾದರೆ ಲ್ಯಾಬ್ ಗಳಲ್ಲಿ ಅನೇಕ ವರ್ಷಗಳ ವರೆಗೆ ಪರೀಕ್ಷೆ ನಡೆಯುತ್ತದೆ. ಹಾಗೆ, ಸಮಗ್ರ ಗರ್ಭೋದಕದಲ್ಲಿ ಮೊದಲು ಒಂದು ಪಿಂಡವನ್ನು (ದೇಹದಲ್ಲಿರುವ ಎಲ್ಲ ವಸ್ತುಗಳ ಮುದ್ದೆಯನ್ನು) ಭಗವಂತ ನಿರ್ಮಿಸುತ್ತಾನೆ. ಆ ಪಿಂಡದಲ್ಲಿ ಸ್ವಯಂ ಬ್ರಹ್ಮದೇವರು ‘ಜೀವ’ನಾಗಿ ಪ್ರವೇಶಿಸುತ್ತಾರೆ. ಪರಮಾತ್ಮ ಆ ದೇಹದ ಒಳಗೆಲ್ಲ ಓಡಾಡುತ್ತ ಎಲುಬು, ಮಾಂಸ, ರಕ್ತ, ನರ, ನಾಡಿಗಳನ್ನೆಲ್ಲ ಸೃಷ್ಟಿ ಮಾಡಿ ಆ ನಂತರ ಒಂದೊಂದೇ ಇಂದ್ರಿಯವನ್ನು ಸೃಷ್ಟಿ ಮಾಡುವ ಪ್ರಕ್ತಿಯೆಯ ವಿವರಣೆ ಇಲ್ಲಿದೆ. 

7064 Views
Upanyasas - VNU768

ಶ್ರೀಮದ್ ಭಾಗವತಮ್ — 205 — ಪುರಾಣದ ಹತ್ತು ಲಕ್ಷಣಗಳು

ಪ್ರತೀನಿತ್ಯ ಪೂಜೆ ಮಾಡುವ ವ್ಯಕ್ತಿ, ವಿಶೇಷವಾದ ಸಂದರ್ಭಗಳಲ್ಲಿ ಅಥವಾ ವಿಶೇಷ ಫಲಕ್ಕಾಗಿ ವಿಶೇಷ ಪೂಜಾದಿಗಳನ್ನು ಮಾಡಬೇಕೆ ಮಾಡಬಾರದೆ ಎಂಬ ಪ್ರಶ್ನೆಗೆ ಭಾಗವತ ನೀಡಿದ ಉತ್ತರ, ನಾರದರ ಕಾರುಣ್ಯ ಮಾಹಾತ್ಮ್ಯದ ಚಿಂತನೆಗಳೊಂದಿಗೆ. 

7292 Views
Upanyasas - VNU767

ಶ್ರೀಮದ್ ಭಾಗವತಮ್ — 204 — ಸರ್ವದಾ ಚಿಂತನೆ ಮಾಡಲೇಬೇಕಾದ ಭಗವಂತನ ಗುಣ

ಮನಸ್ಸು ಗಾಸಿಗೊಂಡಾಗಲೂ, ದೇಹದಲ್ಲಿ ಆರೋಗ್ಯ ಇಲ್ಲದಾಗಲೂ ಯಾವ ಭಗವಂತನ ಗುಣದ ಚಿಂತನೆಯನ್ನು ಸರ್ವಥಾ ಬಿಡಬಾರದೋ ಅಂತಹ ಮಹತ್ತ್ವದ ಚಿಂತನೆಯನ್ನು ಭಗವಂತ ಬ್ರಹ್ಮದೇವರಿಗೆ ಉಪದೇಶಿಸುತ್ತಾನೆ. ಹಿಂದಿನ ಉಪನ್ಯಾಸಗಳಲ್ಲಿ ವಿಸ್ತಾರವಾಗಿ ತಿಳಿದಂತಹ ಚತುಃಶ್ಲೋಕೀ ಭಾಗವತದ ಸಂಗ್ರಹ ಇಲ್ಲಿದೆ. 

6981 Views
Upanyasas - VNU766

ಶ್ರೀಮದ್ ಭಾಗವತಮ್ — 203 — ದೇವರ ವ್ಯಾಪ್ತಿ

ಸಕಲ ಪದಾರ್ಥಗಳೂ ಭಗವಂತನಲ್ಲಿ ಇವೆ, ಭಗವಂತ ಅವುಗಳಲ್ಲಿ ಇಲ್ಲ ಎಂಬ ಮಾತನ್ನು ಭಗವದ್ಗೀತೆ ಮುಂತಾದ ಶಾಸ್ತ್ರಗಳಲ್ಲಿ ಕೇಳುತ್ತೇವೆ. ಇಲ್ಲಿಯೂ ಸಹ — ನ ತೇಷು ಅಹಮ್, ಎಂದು. ಈ ತತ್ವವನ್ನು ಅರ್ಥ ಮಾಡಿಸುತ್ತ ಶ್ರೀಮದಾಚಾರ್ಯರು ದೇವರ ವ್ಯಾಪ್ತಿಯ ಕುರಿತ ಅತ್ಯಪೂರ್ವ ಪ್ರಮೇಯಗಳನ್ನು ತಿಳಿಸುತ್ತಾರೆ. ಆ ವಚನಗಳ ವಿವರಣೆ ಇಲ್ಲಿದೆ. 

7225 Views
Upanyasas - VNU765

ಶ್ರೀಮದ್ ಭಾಗವತಮ್ — 202 — ಎರಡು ರಹಸ್ಯ ಉಪಾಸನೆಗಳು

ನಾವು ಪ್ರತೀದಿವಸ ಪ್ರತಿಯೊಂದು ಪದಾರ್ಥದಿಂದ ತೊಂದರೆಗೆ ಒಳಗಾಗುತ್ತಿರುತ್ತೇವೆ. ಆ ರೀತಿಯ ತೊಂದರೆ ಆಗಬಾರದು ಎಂದರೆ ಯಾವ ಜ್ಞಾನವನ್ನು ಪಡೆಯಬೇಕು, ದೇವರ ಯಾವ ಗುಣವನ್ನು ಉಪಾಸನೆ ಮಾಡಬೇಕೆಂಬ ವಿವರ ಇಲ್ಲಿದೆ. 

6972 Views
Upanyasas - VNU764

ಶ್ರೀಮದ್ ಭಾಗವತಮ್ — 201 — ದೇವರ ಸ್ವಾತಂತ್ರ್ಯ

ಒಬ್ಬ ಚೇತನನನ್ನು ದೇವರು ಎಂದು ನಿಗದಿ ಮಾಡಿಕೊಂಡು ಅವನೇ ದೇವರು ಎಂದು ವಾದಿಸುವದಲ್ಲ, ದೇವರು ಎಂದಾಗಬೇಕಾದರೆ ಯಾವ ಲಕ್ಷಣಗಳಿರಬೇಕೋ ಆ ಲಕ್ಷಣಗಳುಳ್ಳ ಚೇತನನನ್ನು ದೇವರು ಎಂದು ಒಪ್ಪಬೇಕು ಎಂದು ಸಾರಿದವರು ಶ್ರೀಮದಾಚಾರ್ಯರು.   ದೇವರು ಎಂದಾಗಬೇಕಾದರೆ ಇರಬೇಕಾದ ಮೊಟ್ಟ ಮೊದಲ ಲಕ್ಷಣ, ಸ್ವಾತಂತ್ರ್ಯ. ಆ ಗುಣದ ಕುರಿತು ಭಾಗವತ ಭಾಗವತ ತಾತ್ಪರ್ಯಗಳು ತಿಳಿಸಿರುವ ಅದ್ಭುತ ವಿಷಯಗಳ ನಿರೂಪಣೆ ಇಲ್ಲಿದೆ. 

6287 Views
Upanyasas - VNU763

ಶ್ರೀಮದ್ ಭಾಗವತಮ್ — 200 — ಬ್ರಹ್ಮದೇವರ ಪ್ರಾರ್ಥನೆ

ನಮ್ಮ ಸಾಧನೆಯ ಜೀವನದಲ್ಲಿ ನಮಗಿರಬೇಕಾದ ಎಚ್ಚರಗಳೇನು ಎನ್ನುವದನ್ನು ಸ್ವಯಂ ಭಗವಂತ ತಿಳಿಸಿಕೊಟ್ಟು, ತಾನು ಯಾವುದರಿಂದ ಪ್ರೀತನಾಗುತ್ತೇನೆ, ಯಾವ ತಪಸ್ಸಿನಿಂದ ಪ್ರೀತನಾಗುವದಿಲ್ಲ ಎಂದು ತಿಳಿಸಿ ಹೇಳಿ ವರವನ್ನು ಬೇಡಲು ಬ್ರಹ್ಮದೇವರಿಗೆ ಆದೇಶಿಸುತ್ತಾನೆ.   ಆ ಬ್ರಹ್ಮದೇವರು, ಸಮಗ್ರ ಸಜ್ಜೀವಪ್ರಪಂಚಕ್ಕೆ ಪಾಠ ಕಲಿಸುತ್ತ, ನಾಲ್ಕು ಅದ್ಭುತವಾದ ವರಗಳನ್ನು ಕೇಳುತ್ತಾರೆ.   ನಮ್ಮ ಬದುಕನ್ನು ಬದಲಾಯಿಸುವ ಬ್ರಹ್ಮದೇವರ ವಚನಗಳಿವು. ತಪ್ಪದೇ ಕೇಳಿ

6907 Views
Upanyasas - VNU762

ಶ್ರೀಮದ್ ಭಾಗವತಮ್ — 199 — ದೇವರ ದರ್ಶನ

ಬ್ರಹ್ಮದೇವರು ಶ್ವೇತದ್ವೀಪದಲ್ಲಿರುವ ಮುಕ್ತರನ್ನು ಕಾಣುತ್ತ, ಮಹಾಲಕ್ಷ್ಮೀದೇವಿಯರು ಭಕ್ತಿಯಿಂದ ಪತಿಯ ಸೇವೆ ಮಾಡುತ್ತಿರುವದನ್ನು ಕಾಣುತ್ತ, ಆ ಅನಂದನಿಲಯದಲ್ಲಿ ಪರಮಾನಂದನಾದ ಶ್ರೀಮನ್ನಾರಾಯಣನನ್ನು ಕಂಡು ಚರಣಕ್ಕೆರಗಿದ ರೋಮಾಂಚಕಾರಿ ಘಟನೆಯ ಚಿತ್ರಣ ಇಲ್ಲಿದೆ.   ಕೇಳಿಯೇ ಆನಂದಿಸಬೇಕಾದ ಭಾಗ

7047 Views
Upanyasas - VNU761

ಶ್ರೀಮದ್ ಭಾಗವತಮ್ — 198 — ಶ್ವೇತದ್ವೀಪದ ವೈಭವ

ಬ್ರಹ್ಮದೇವರ ತಪಸ್ಸಿಗೆ ಒಲಿದ ಭಗವಂತ ತನ್ನ ಶ್ವೇತದ್ವೀಪವನ್ನು ಬ್ರಹ್ಮದೇವರಿಗೆ ತೋರಗೊಡುತ್ತಾನೆ. ಆ ಶ್ವೇತದ್ವೀಪದ ವೈಭವ ಇಲ್ಲಿದೆ. 

6999 Views
Upanyasas - VNU760

ಶ್ರೀಮದ್ ಭಾಗವತಮ್ — 197 — ಬ್ರಹ್ಮದೇವರ ತಪಸ್ಸು

ಸತ್ವ-ರಜಸ್-ತಮೋಗುಣಗಳಿಂದ ಆರಂಭಿಸಿ ಬ್ರಹ್ಮಾಂಡದವರೆಗೆ ಸೃಷ್ಟಿಯಾಗಿರುತ್ತದೆ. ಬ್ರಹ್ಮಾಂಡದಲ್ಲಿ ಪರಮಾತ್ಮನ ನಾಭಿಕಮಲದಿಂದ ಬ್ರಹ್ಮದೇವರು ಹುಟ್ಟಿ ಬರುತ್ತಾರೆ. ಆ ಬ್ರಹ್ಮದೇವರಿಗೆ ಭಗವಂತ ತನ್ನನ್ನು ಮೊದಲಿಗೆ ತೋರಗೊಡುವದಿಲ್ಲ.   ತನ್ನ ಜನಕನನ್ನು ತಿಳಿಯ ಹೊರಟ ಬ್ರಹ್ಮದೇವರಿಗೆ ತಪಸ್ಸು ಮಾಡು ಎಂದು ಎರಡು ಬಾರಿ ಆದೇಶ ದೊರೆಯುತ್ತದೆ. ಬ್ರಹ್ಮದೇವರು ಮಾಡಿದ ತಪಸ್ಸು ಎಂತಹುದು, ಎಷ್ಟು ದೀರ್ಘವಾದದ್ದು ಎನ್ನುವದರ ವಿವರ ಇಲ್ಲಿದೆ. 

6814 Views
Upanyasas - VNU759

ಶ್ರೀಮದ್ ಭಾಗವತಮ್ — 196 — ಜೀವನಿಗೆ ದೇಹ ಬರಲು ಕಾರಣ

ಜೀವ ಅಪ್ರಾಕೃತನಾದವನು, ಅವನಿಗೆ ಪ್ರಾಕೃತ ಪದಾರ್ಥಗಳ ಸಂಪರ್ಕ ಹೇಗೆ ಉಂಟಾಗಲು ಸಾಧ್ಯ, ಆ ಸಂಪರ್ಕದಿಂದ ದೂರವಾಗುವ ಕ್ರಮವೇನು ಎನ್ನುವದನ್ನು ತಿಳಿಸುತ್ತ ಶುಕಾಚಾರ್ಯರು ಪ್ರಕೃತಿ ನಮ್ಮ ಮೇಲೆ ಮಾಡುವ ವಿಕಾರವನ್ನು ಅದ್ಭುತವಾಗಿ ಮನಗಾಣಿಸುತ್ತಾರೆ, ದೇಹ ಇಂದ್ರಿಯಗಳ ಮೇಲೆ ಅಭಿಮಾನವನ್ನು ತ್ಯಾಗ ಮಾಡಿದರೆ ಮಾತ್ರ ಮುಕ್ತಿ ದೊರೆಯಲು ಸಾಧ್ಯ ಎಂಬ ತತ್ವವನ್ನು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ತಿಳಿಸುತ್ತಾರೆ. 

8223 Views
Upanyasas - VNU758

ಶ್ರೀಮದ್ ಭಾಗವತಮ್ — 195 — ಪರೀಕ್ಷಿದ್ರಾಜರು ಮಾಡಿದ ಪ್ರಶ್ನೆಗಳು

ಮತ್ತೊಮ್ಮೆ ಭೂಮಿಯಲ್ಲಿ ಹುಟ್ಟಿ ಬರದೇ ಇರುವ, ಚರಮದೇಹದಲ್ಲಿರುವ ಶ್ರೀ ಪರೀಕ್ಷಿದ್ರಾಜರು ನಮ್ಮ ಮೇಲೆ ಎಂತಹ ಪರಮಾನುಗ್ರಹ ಮಾಡಿ ಹೋಗಿದ್ದಾರೆ ಎನ್ನುವದು ಅರ್ಥವಾಗುವದು ಅವರು ಶುಕಾಚಾರ್ಯರಲ್ಲಿ ಮಾಡಿದ ಪ್ರಶ್ನೆಗಳಿಂದ. ಯಾವುದಕ್ಕೆ ಉತ್ತರವಾಗಿ ನಮಗೆ ಸಮಗ್ರ ಶ್ರೀಮದ್ ಭಾಗವತ ದೊರೆಯಿತೋ ಅಂತಹ ಪರೀಕ್ಷಿತರ ಪ್ರಶ್ನೆಗಳ ಪಟ್ಟಿ ಇಲ್ಲಿದೆ. 

6228 Views
Upanyasas - VNU757

ಶ್ರೀಮದ್ ಭಾಗವತಮ್ — 194— ದೇವರ ದಯೆಯ ಮಹತ್ತ್ವ

ದೇವರಲ್ಲಿ ಭಕ್ತಿ ಮಾಡಿ ದೇವರನ್ನು ಪಡೆದವರು ಯಾರಾದರೂ ಇದ್ದಾರೆಯೇ?  ದೇವರು ದೊರೆತ ಬಳಿಕವೂ ಮತ್ತೆ ನಾವು ಸಂಸಾರದಲ್ಲಿ ಆಸಕ್ತರಾದರೆ ಗತಿಯೇನು, ದೇವರು ಕೈಬಿಡುವದಿಲ್ಲವೇ?  ಈ ಜನ್ಮದಲ್ಲೇನೋ ದೇವರ ದಯೆ ಕಿಂಚಿತ್ ದೊರಕಿದೆ, ಸತ್ತ ಬಳಿಕ ದೂರವಾದರೆ, ಈ ಜನ್ಮದಲ್ಲಿ ದೊರೆತ ದೇವರ ದಯೆ ಮುಂದಿನ ಜನ್ಮದಲ್ಲಿಯೂ ಇರುತ್ತದೆಯೇ?  ಮುಂತಾದ ಅನೇಕ ಪ್ರಶ್ನೆಗಳಿಗೆ ಬ್ರಹ್ಮದೇವರು ನೀಡಿದ ಉತ್ತರಗಳು ಇಲ್ಲಿವೆ. ಭಕ್ತಿ ಮತ್ತು ಭಾಗವತಗಳ ಮಾಹಾತ್ಮ್ಯದೊಂದಿಗೆ. 

7093 Views
Upanyasas - VNU756

ಶ್ರೀಮದ್ ಭಾಗವತಮ್ — 193 — ಸಂಸಾರವೆಂಬ ದೇವರ ಆಟ

ದೇವರ ದಯೆಯಾಗಬೇಕಾದರೆ ನಾವು ಸಾಧನೆ ಮಾಡಬೇಕು, ಸಾಧನೆ ಮಾಡಬೇಕೆಂದರೆ ದೇವರು ದಯ ತೋರಬೇಕು.  ಅಂದರೆ ದಯೆಯಾಗದೇ ಸಾಧನೆಯಾಗುವಿದಿಲ್ಲ, ಸಾಧನೆಯಾಗದೇ ದಯೆಯಾಗುವದಿಲ್ಲವಲ್ಲ ಎಂಬ ಜ್ವಲಂತ ಪ್ರಶ್ನೆಗೆ ಶ್ರೀಮದ್ ಭಾಗವತ ನೀಡುವ ಅದ್ಭುತ ಉತ್ತರದ ವಿವರಣೆ ಇಲ್ಲಿದೆ. ಈ ಪ್ರಸಂಗದಲ್ಲಿ ಮೂಡಿ ಬರುವ ಪ್ರಶ್ನೆಗಳಿಗೂ ಉತ್ತರ ನೀಡುವದರೊಂದಿಗೆ. 

6998 Views
Upanyasas - VNU755

ಶ್ರೀಮದ್ ಭಾಗವತಮ್ — 192 — ದೇವರ ಅವತಾರಗಳು - 5

ಬುದ್ಧಾವತಾರ, ಕಲ್ಕ್ಯವತಾರಗಳ ಕಥೆಗಳನ್ನು ಹೇಳಿದ ಬ್ರಹ್ಮದೇವರು ದೇವರು ಅನಂತ ಎನ್ನುವದನ್ನು ಅದ್ಭುತವಾಗಿ ನಿರೂಪಿಸುತ್ತಾರೆ. 

6778 Views
Upanyasas - VNU754

ಶ್ರೀಮದ್ ಭಾಗವತಮ್ — 191 — ದೇವರ ಅವತಾರಗಳು - 04

ಬ್ರಹ್ಮದೇವರ ಮುಖದಿಂದ ಹೊರಹೊಮ್ಮಿದ ಶ್ರೀಕೃಷ್ಣಾವತಾರದ ಮತ್ತು ವೇದವ್ಯಾಸಾವಾತಾರದ ಅದ್ಭುತ ವರ್ಣನೆ. 

7269 Views
Upanyasas - VNU753

ಶ್ರೀಮದ್ ಭಾಗವತಮ್ — 190 — ದೇವರ ಅವತಾರಗಳು — 3

ರಾಜ, ಮಹಾರಾಜ, ಚಕ್ರವರ್ತಿ ಎಂಬ ಶಬ್ದಗಳ ಅರ್ಥವನ್ನು ತಿಳಿಯುವದರೊಂದಿಗೆ ಭಗವಂತನ ಅದ್ಭುತವಾದ ರಾಜರಾಜೇಶ್ವರರೂಪದ ಚಿಂತನೆ ಇಲ್ಲಿದೆ. ಧನ್ವಂತರಿ, ಪರಶುರಾಮ, ಶ್ರೀರಾಮಚಂದ್ರ ಅವತಾರಗಳ  ವಿವರಣೆಯೊಂದಿಗೆ. 

6334 Views
Upanyasas - VNU751

ಶ್ರೀಮದ್ ಭಾಗವತಮ್ — 189 — ದೇವರ ಅವತಾರಗಳು-2

ಧ್ರುವರಾಜರಿಗೊಲಿದ ವಾಸುದೇವಾವತಾರ, ಪೃಥುಮಹಾರಾಜರಲ್ಲಿರುವ ಪೃಥು ಎಂಬ ರೂಪ, ನಾಭಿರಾಜರ ಮಗನಾಗಿ ಬಂದ ಋಷಭಾವತಾರ, ಬ್ರಹ್ಮದೇವರಿಗಾಗಿ ಅವತರಿಸಿದ ಹಯಗ್ರೀವಾವತಾರ, ವೈವಸ್ವತಮನುವನ್ನು ರಕ್ಷಿಸಿದ ಮತ್ಸ್ಯಾವತಾರ, ಮಂದರವನ್ನು ಹೊತ್ತ ಕೂರ್ಮಾವತಾರ, ಪ್ರಹ್ಲಾದರಾಜರ ದೈವ ನರಸಿಂಹಾವತಾರ, ಗಜೇಂದ್ರನನ್ನುದ್ಧರಿಸಿದ ಹರಿ ಎಂಬ ಅವತಾರ, ಬಲಿಯನ್ನು ತುಳಿದು ಉಳಿಸಿದ ವಾಮನಾವತಾರ, ನಾರದರಿಗೆ ತತ್ವೋಪದೇಶ ಮಾಡಿದ ಮಹಿದಾಸಾವತಾರ, ಇಷ್ಟು ಅವತಾರಗಳ ಕುರಿತ ಅಪೂರ್ವ ಚಿಂತನೆಗಳು ಈ ಭಾಗದಲ್ಲಿವೆ. 

6651 Views
Upanyasas - VNU750

ಶ್ರೀಮದ್ ಭಾಗವತಮ್ — 188 — ದೇವರ ಅವತಾರಗಳು-1

ಸಾಧನೆ ಮಾಡುವ ಜನರಿಗೆ ದೇವತೆಗಳು ವಿಘ್ನವನ್ನು ನೀಡಲು ಮೂರು ಕಾರಣಗಳಿವೆ. ಅವುಗಳ ವಿವರಣೆಯೊಂದಿಗೆ ವರಾಹ, ಯಜ್ಞ, ಕಪಿಲ, ದತ್ತ, ವಿಷ್ಣು ,ಹರಿ, ಕೃಷ್ಣ, ನಾರಾಯಣ ರೂಪಗಳ ಚಿಂತನೆ ಇಲ್ಲಿದೆ. 

6622 Views
Upanyasas - VNU749

ಶ್ರೀಮದ್ ಭಾಗವತಮ್ — 187 — ದೇವರ ವಿಭೂತಿ ರೂಪಗಳು

ಸೃಷ್ಟಿಯನ್ನು ಮಾಡಿದ ಪುರುಷಾವತಾರದಿಂದ ಅರಂಭಿಸಿ ಬ್ರಹ್ಮಾದಿ ಸಮಸ್ತ ಚೇತನರಲ್ಲಿ ನಿಂತು ಪರಮಾದ್ಭುತ ಕಾರ್ಯಗಳನ್ನು ಮಾಡುವ ಭಗವಂತನ ದಿವ್ಯ ವಿಭೂತಿರೂಪಗಳ ಚಿಂತನೆ ಇಲ್ಲಿದೆ. 

6476 Views
Upanyasas - VNU748

ಶ್ರೀಮದ್ ಭಾಗವತಮ್ — 186 — ಬ್ರಹ್ಮದೇವರು ನೀಡಿದ ನಿರ್ಣಯ

ಬ್ರಹ್ಮದೇವರೇನೋ ಶ್ರೀಹರಿ ಸರ್ವೋತ್ತಮ ಎಂದು ಹೇಳಿದರು,  ಬ್ರಹ್ಮದೇವರೇಕೆ ತಪ್ಪು ತಿಳಿದಿರಬಾರದು? ಬ್ರಹ್ಮದೇವರಿಗೆ ಅವರು ಸರ್ವೋತ್ತಮ ಅಥವಾ ರುದ್ರ ಸರ್ವೋತ್ತಮ ಎಂಬ ಜ್ಞಾನವಿಲ್ಲದೇ ಇರಬಹುದಲ್ಲ? ಇದ್ದರೂ ನಾರದರಿಗೆ ಮೋಸ ಮಾಡುವ ಉದ್ದೇಶದಿಂದ ಹೇಳದೇ ಇರಬಹುದಲ್ಲ? ಎಂಬಿತ್ಯಾದಿ ಪ್ರಶ್ನೆಗಳಿಗೆ ಬ್ರಹ್ಮದೇವರೇ ನೀಡಿದ, ಯುಕ್ತಿಯುಕ್ತವಾದ ಮನಸ್ಸಿಗೆ ಸರಿತೋರುವಂತಹ ಉತ್ತರಗಳನ್ನು ನಾವಿಲ್ಲಿ ಕೇಳುತ್ತೇವೆ.

6182 Views
Upanyasas - VNU747

ಶ್ರೀಮದ್ ಭಾಗವತಮ್ — 185 — ಬ್ರಹ್ಮದೇವರ ಜೀವೋತ್ತಮತ್ವ ಮತ್ತು ಯಜ್ಞ

ಬ್ರಹ್ಮದೇವರು ಯಾವ ಕಾರಣಕ್ಕಾಗಿ ಸಕಲ ಜೀವನಿಕಾಯದಿಂದಲೂ ಉತ್ತಮರು, ಅವರಿಗಿಂತಲೂ ಭಗವಂತ ಹೇಗೆ ಉತ್ತಮ ಎನ್ನುವದನ್ನು ಪುರುಷ ಸೂಕ್ತ ಭಾಗವತಗಳು ಅತ್ಯದ್ಭುತವಾಗಿ ನಿರೂಪಣೆ ಮಾಡುತ್ತೇವೆ. ಬ್ರಹ್ಮದೇವರು ಮಾಡಿದ ಯಜ್ಞದ ಸಂಕ್ಷಿಪ್ತ ಚಿತ್ರಣದೊಂದಿಗೆ ಆ ವಚನಗಳ ಅರ್ಥಾನುಸಂಧಾನ ಇಲ್ಲಿದೆ. 

6439 Views
Upanyasas - VNU746

ಶ್ರೀಮದ್ ಭಾಗವತಮ್ — 184 — ಯಜ್ಞಪುರುಷನ ನಾಲ್ಕು ರೂಪಗಳು

ಬ್ರಹ್ಮಚರ್ಯಾಶ್ರಮ, ಗೃಹಸ್ಥಾಶ್ರಮ, ವನಪ್ರಸ್ಥಾಶ್ರಮ, ಸಂನ್ಯಾಸಾಶ್ರಮಗಳಲ್ಲಿ ಸರ್ವಶ್ರೇಷ್ಠವಾದ ಆಶ್ರಮ ಯಾವುದು ಎನ್ನುವದರ ಕುರಿತ ಚರ್ಚೆ ನಿರ್ಣಯಗಳು ಇಲ್ಲಿವೆ. 

6594 Views
Upanyasas - VNU744

ಶ್ರೀಮದ್ ಭಾಗವತಮ್ — 183 — ದೇವರ ಮೂರು ಅಪೂರ್ವ ನಾಮಗಳು

ಶ್ವೇತದ್ವೀಪ, ಅನಂತಾಸನ, ವೈಕುಂಠಗಳ ಕುರಿತ ಅಪೂರ್ವ ಮತ್ತು ರಹಸ್ಯ ವಿಷಯಗಳ ನಿರೂಪಣೆ ಈ ಭಾಗದಲ್ಲಿದೆ. ದೇವರ ಅಮೃತ, ಕ್ಷೇಮ, ಅಭಯ ಎಂಬ ರೂಪ-ನಾಮಗಳ ಚರ್ಚೆಯೊಂದಿಗೆ.   ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

6918 Views
Upanyasas - VNU734

ಶ್ರೀಮದ್ ಭಾಗವತಮ್ — 182 — ಪುರುಷಸೂಕ್ತ — 3

ಜೀವರೇಕೆ ದೇವರಲ್ಲ ಎಂಬ ಪ್ರಶ್ನೆಗೆ ಪುರುಷಸೂಕ್ತ ನೀಡುವ ದಿವ್ಯ ಉತ್ತರದ ಅರ್ಥಾನುಸಂಧಾನ. 

7683 Views
Upanyasas - VNU733

ಶ್ರೀಮದ್ ಭಾಗವತಮ್ — 181 — ಪುರುಷಸೂಕ್ತ — 2

ನಮ್ಮ ಸ್ವಾಮಿಯ ಮಹಾಮಹಿಮೆಯನ್ನು ತಿಳಿಸುವ “ಮರ್ತ್ಯಮನ್ನಂ ಯದತ್ಯಗಾತ್” “ಏತಾವಾನಸ್ಯ ಮಹಿಮಾ” ಎಂಬ ಮಾತಿನ ಅರ್ಥಾನುಸಂಧಾನವಿದೆ, ಇಲ್ಲಿ. ಕೇಳಿ. ಆನಂದಿಸಿ.   ಯುಕ್ತಿಮಲ್ಲಿಕಾದಲ್ಲಿ ಪುರುಷಸೂಕ್ತಕ್ಕೆ ಅರ್ಥ ಮಾಡುತ್ತ ಶ್ರೀವಾದಿರಾಜತೀರ್ಥಗುರುಸಾರ್ವಭೌಮರು ತಿಳಿಸಿದ ಅಪೂರ್ವ ವಿಷಯ, ಶ್ರೀ ಮಂತ್ರಾಲಯಪ್ರಭುಗಳು, ಶ್ರೀ ಕಾಶೀ ತಿಮ್ಮಣಾಚಾರ್ಯರು ಮುಂತಾದ ಮಹಾನುಭಾವರು ತಿಳಿಸಿದ ಅರ್ಥವಿಶೇಷಗಳ ನಿರೂಪಣೆಯೂ ಇಲ್ಲಿದೆ. 

7906 Views
Upanyasas - VNU732

ಶ್ರೀಮದ್ ಭಾಗವತಮ್ — 180 — ಪುರುಷಸೂಕ್ತ — 1

ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿ ಮುಂತಾದ ಮತಗಳು ಹೇಳುವಂತೆ ದೇವರು ನಿರಾಕರನೋ, ಅಥವಾ ಸಾಕಾರನೋ ಎಂಬ ಪ್ರಶ್ನೆಗೆ ಪುರುಷ ಸೂಕ್ತ ನೀಡುವ ಉತ್ತರ ಇಲ್ಲಿದೆ. ವೇದ-ವೇದಾಂತಗಳನ್ನೂ ನಾವೂ ಓದುತ್ತೇವೆ, ತಪ್ಪೇನು ಎಂಬ ಆಧುನಿಕ ಸ್ತ್ರೀ ಶೂದ್ರರಿಗೊಂದು ಕಿವಿಮಾತು ಇಲ್ಲಿದೆ. ತಪ್ಪದೇ ಕೇಳಿ. 

8836 Views
Upanyasas - VNu731

ಶ್ರೀಮದ್ ಭಾಗವತಮ್ — 179 — ಆಚಾರ್ಯರ ಅದ್ಭುತ ತತ್ವನಿಷ್ಠೆ

ವಿರಾಡ್ರೂಪದ ಯಾವ ಅವಯವಗಳಿಂದ ಯಾವೆಲ್ಲ ತತ್ವಗಳು ಸೃಷ್ಟಿಯಾದವು ಎಂದು ತಿಳಿಸುವ ಸಂದರ್ಭದಲ್ಲಿ ಶ್ರೀಮದಾಚಾರ್ಯರು ವ್ಯಾಖ್ಯಾನ ಮಾಡುವ ರೀತಿ ತತ್ವದ ಮಾರ್ಗದಲ್ಲಿ ನಡೆಯುವ ಜನರಿಗೆ ಬಹಳ ದೊಡ್ಡ ಪಾಠಗಳನ್ನು ಕಲಿಸುತ್ತದೆ. ಆ ಕುರಿತ ಚಿಂತನೆ ಇಲ್ಲಿದೆ. 

7020 Views
Upanyasas - VNU730

ಶ್ರೀಮದ್ ಭಾಗವತಮ್ — 178 — ಅನೇಕ ಬಾರಿ ಸೃಷ್ಟಿ ಏಕೆ?

ಬ್ರಹ್ಮಾಂಡದ ಆಚೆಯಲ್ಲಿ, ಬ್ರಹ್ಮಾಂಡದ ಒಳಗೆ, ಲೋಕಗಳಲ್ಲಿ ಹೀಗೆ ಅನೇಕ ಸಂದರ್ಭಗಳಲ್ಲಿ ದೇವತೆಗಳು ಸೃಷ್ಟಿಯಾದರು, ಪದಾರ್ಥಗಳು ಸೃಷ್ಟಿಯಾದವು ಎಂದು ಕೇಳುತ್ತೇವೆ. ಅದಕ್ಕೆ ಕಾರಣವನ್ನು ತಿಳಿಸುವದರೊಂದಿಗೆ ಆರಂಭವಾಗುವ ಈ ಪ್ರವಚನದಲ್ಲಿ ವಿರಾಡ್ರೂಪದ ಭಗವಂತನ ದೇಹದಿಂದ ಸೃಷ್ಟಿಯಾದ ಪದಾರ್ಥಗಳ ಕುರಿತು ತಿಳಿಯುತ್ತೇವೆ. 

7346 Views
Upanyasas - VNU729

ಶ್ರೀಮದ್ ಭಾಗವತಮ್ — 177 — ಬ್ರಹ್ಮಾಂಡ ಮತ್ತು ಲೋಕಗಳ ಸೃಷ್ಟಿ

ತತ್ವಗಳ ನಿರ್ಮಾಣವಾದ ನಂತರ ಬ್ರಹ್ಮಾಂಡ ಮತ್ತು ಅದರೊಳಗೆ ಲೋಕಗಳು ನಿರ್ಮಾಣವಾಗುವ ರೋಚಕ ಘಟನೆಯ ವಿವರ ಇಲ್ಲಿದೆ. ನಾಲ್ಕು ರೀತಿಯ ವಿರಡ್ರೂಪಗಳ ನಿರೂಪಣೆಯೊಂದಿಗೆ.    ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರ ಕುರಿತ ವಿವರ ಇಲ್ಲಿದೆ. 

6719 Views
Upanyasas - VNU728

ಶ್ರೀಮದ್ ಭಾಗವತಮ್ — 176 — ಅಹಂಕಾರತತ್ವ-ಇಂದ್ರಿಯತತ್ವಗಳ ಸೃಷ್ಟಿ

ಮಹತ್ ತತ್ವದಿಂದ ಅಹಂಕಾರ ತತ್ವದ ಸೃಷ್ಟಿಯಾಗುವ ಕ್ರಮ, ಅಹಂಕಾರ ತತ್ವದಲ್ಲಿನ ಮೂರು ವಿಭಾಗಗಳು, ಇಂದ್ರಿಯಗಳ ಸೃಷ್ಟಿಯ ವಿವರಣೆ ಇಲ್ಲಿದೆ, ಯಾವ ಇಂದ್ರಿಯಗಳಿಗೆ ಯಾವ ದೇವತೆಗಳು ಅಭಿಮಾನಿಗಳು ಎಂಬ ಚರ್ಚೆಯೊಂದಿಗೆ.   ದೇವತೆಗಳ ಅಸ್ತಿತ್ವವನ್ನು ಯಾಕಾಗಿ ಒಪ್ಪಬೇಕು ಎನ್ನುವದಕ್ಕೆ ಇಲ್ಲಿ ಕಾರಣಗಳನ್ನು ತಿಳಿಸಲಾಗಿದೆ. ತಪ್ಪದೇ ಕೇಳಿ. 

7565 Views
Upanyasas - VNU727

ಶ್ರೀಮದ್ ಭಾಗವತಮ್ — 175 — ಮಹತ್ತತ್ವದ ಸೃಷ್ಟಿ

ಬ್ರಹ್ಮಾಂಡದ ಆಚೆಯಲ್ಲಿರುವ ಮಹತ್ತತ್ವ, ಅಹಂಕಾರ ತತ್ವ ಎಂದರೇನು ಎಂದು ಅರ್ಥ ಮಾಡಿಸುವದರೊಂದಿಗೆ ಆರಂಭವಾಗುವ ಈ ಪ್ರವಚನದಲ್ಲಿ ಭಗವಂತ ಮಹತ್ ತತ್ವವನ್ನು ಏಕಾಗಿ ಸೃಷ್ಟಿ ಮಾಡಿದ, ಹೇಗೆ ಸೃಷ್ಟಿ ಮಾಡಿದ ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ. 

7631 Views
Upanyasas - VNU726

ಶ್ರೀಮದ್ ಭಾಗವತಮ್ — 174 — ಸೃಷ್ಟಿಯ ಆರಂಭ

ದೇವರು ಮಾಡುವ ಸೃಷ್ಟಿಯ ಕ್ರಮವನ್ನು ತಿಳಿಸಲು ಆರಂಭಿಸುವ ಬ್ರಹ್ಮದೇವರು ಮೊಟ್ಟಮೊದಲಿಗೆ ಪರಮಾತ್ಮನ ಸ್ವಾತಂತ್ರ್ಯದ ಕುರಿತು ಅದ್ಭುತವಾಗಿ ತಿಳಿಸುತ್ತಾರೆ. ನಮ್ಮ ಸ್ವಾಮಿ ಯಾರ ಅಧೀನನೂ ಅಲ್ಲ, ಎಲ್ಲವೂ ಅವನಧೀನ ಎಂಬ ಚಿಂತನೆಯ ದಿವ್ಯ ನಿರೂಪಣೆ ಇಲ್ಲಿದೆ.  ಕಾಲದ ಕುರಿತ ಸ್ವಾರಸ್ಯಕರ ಚರ್ಚೆಯೊಂದಿಗೆ. 

8062 Views
Upanyasas - VNU725

ಶ್ರೀಮದ್ ಭಾಗವತಮ್ — 173 — ಬಂಧನ ಕಳೆದುಕೊಳ್ಳುವ ರೀತಿ

 ದೇಹದಲ್ಲಿ ತಮೋಗುಣ, ಕರ್ಮೇಂದ್ರಿಯಗಳಲ್ಲಿ ರಜೋಗುಣ, ಜ್ಞಾನೇಂದ್ರಿಯಗಳಲ್ಲಿ ಸತ್ವಗುಣವಿದ್ದು ನಮ್ಮನ್ನು ಬಂಧಿಸುತ್ತವೆ ಎಂದು ತಿಳಿದೆವು. ಇವುಗಳಿಂದಲೇ ಉದ್ಧಾರವಾಗುವ ಬಗೆಯನ್ನು ನಾವಿಲ್ಲಿ ತಿಳಿಯುತ್ತೇವೆ. 

9125 Views
Upanyasas - VNU724

ಶ್ರೀಮದ್ ಭಾಗವತಮ್ — 172 — ತ್ರಿಗುಣಗಳ ಬಂಧನ

ನಾವು ಹೇಗೆ ಬಂಧನಕ್ಕೊಳಗಾಗಿದ್ದೇವೆ ಎಂದು ಗೊತ್ತಾದರೆ ಬಂಧನದಿಂದ ಬಿಡಿಸಿಕೊಳ್ಳಲು ಸಾಧ್ಯ. ದೇವರು ಮೂರುಗುಣಗಳಿಂದ ನಮ್ಮನ್ನು ಕಟ್ಟಿಹಾಕಿರುವದರ ವಿವರಣೆ ಇಂದಿನ ಭಾಗವತದ ವಿಷಯ. ಇಂದು “ಬಂಧಕೋ ಭವಪಾಶೇನ” ಮುಂದಿನ ಉಪನ್ಯಾಸದಲ್ಲಿ “ಭವಪಾಶಾಚ್ಚ ಮೋಚಕಃ” ತಪ್ಪದೇ ಕೇಳಿ. 

7810 Views
Upanyasas - VNU723

ಶ್ರೀಮದ್ ಭಾಗವತಮ್ — 171 — ಬ್ರಹ್ಮದೇವರು ದೇವರಲ್ಲ

ಶ್ರೀಹರಿಯೇ ದೇವರು ಎಂದು ಒಪ್ಪುವ ವೈಷ್ಣವಸಿದ್ಧಾಂತ ಎಂದಿಗೂ ಆಗ್ರಹಯುಕ್ತವಾದದ್ದಲ್ಲ, ಸಕಲ ಪ್ರಮಾಣಗಳನ್ನು ಆಗ್ರಹರಹಿತವಾಗಿ ವಿಚಾರ ಮಾಡಿದಾಗ ಸಿದ್ಧವಾಗುವ ತತ್ವ ಶ್ರೀಮನ್ನಾರಾಯಣನೇ ದೇವರು ಎನ್ನುವದು. ಬ್ರಹ್ಮದೇವರು ಏಕೆ ದೇವರಲ್ಲ ಎನ್ನುವದಕ್ಕೆ ಬ್ರಹ್ಮಸೂತ್ರಗಳು ನೀಡುವ ಅದ್ಭುತ ಕಾರಣಗಳನ್ನು ಶ್ರೀಮದ್ ಭಾಗವತ ಅದ್ಭುತವಾಗಿ ಸಂಗ್ರಹಿಸುತ್ತದೆ. ಆ ವಚನಗಳ ವಿವರಣೆ ಇಲ್ಲಿದೆ. 

7613 Views
Upanyasas - VNU722

ಶ್ರೀಮದ್ ಭಾಗವತಮ್ — 170 — ನಾರದರ ಪೂರ್ವಪಕ್ಷ

ಭಗವತ್ ತತ್ವವನ್ನು ಯಾವುದೇ ಆಗ್ರಹದಿಂದ ತಿಳಿಯತಕ್ಕದ್ದಲ್ಲ, ಎಲ್ಲ ಕೋನಗಳಿಂದಲೂ ವಿಚಾರ ಮಾಡಿ ನಿರ್ಣಯ ಮಾಡಿಕೊಳ್ಳತಕ್ಕದ್ದು ಎಂಬ ಪರಿಶುದ್ಧ ಕ್ರಮದ ಅನುಸಾರವಾಗಿ ಶ್ರೀ ನಾರದರು ಬ್ರಹ್ಮದೇವರ ಮುಂದೆ ಮಾಡಿದ “ನೀವೇ ಸರ್ವೋತ್ತಮರು” ಎಂದು ಪೂರ್ವಪಕ್ಷದ ವಿವರಣೆ ಇಲ್ಲಿದೆ. 

6445 Views
Upanyasas - VNU721

ಶ್ರೀಮದ್ ಭಾಗವತಮ್ — 169 — ವೇದವ್ಯಾಸದೇವರ ಶಬ್ದಗಳ ಗಾಂಭೀರ್ಯ

ಬ್ರಹ್ಮದೇವರಿಂದ ತತ್ವೋಪದೇಶವನ್ನು ಬಯಸಿ ಬಂದಿರುವ ನಾರದರು “ತತ್ವವನ್ನು ತಿಳಿಸಿರಿ” ಎಂದು ಹೇಳುವ ಬದಲು “ತತ್ವವನ್ನು ತಿಳಿಯಿರಿ” ಎಂದು ಹೇಳುತ್ತಾರೆ. ಈ ರೀತಿ ಗ್ರಂಥ ಬರೆದಿರುವ ವೇದವ್ಯಾಸದೇವರಿಗೆ ಸಂಸ್ಕೃತದ ಜ್ಞಾನವಿಲ್ಲ ಎಂದು ಕೆಲವರು ಪುಸ್ತಕಗಳನ್ನೂ ಬರೆದದ್ದುಂಟು. ಆದರೆ, ಈ ಪ್ರಯೋಗದ ಹಿಂದೆ ಇರುವ ಅದ್ಭುತ ತತ್ವರಾಶಿಯನ್ನು ತಿಳಿಸಿಕೊಟ್ಟವರು ಶ್ರೀಮದಾಚಾರ್ಯರು. ಶಾಸ್ತ್ರಗ್ರಂಥಗಳಲ್ಲಿನ ಒಂದೊಂದು ಶಬ್ದದ ಹಿಂದೆಯೂ ಅದೆಂತಹ ಗಾಂಭೀರ್ಯವಿರುತ್ತದೆ ಎಂದು ಮನಗಾಣಿಸುವ ಭಾಗ. 

7179 Views
Upanyasas - VNU720

ಶ್ರೀಮದ್ ಭಾಗವತಮ್ — 168 — ಶುಕಗೀತೆ-04

ಮನೆಯಲ್ಲಿ ಧರ್ಮಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ, ಮನಸ್ಸಿನಲ್ಲಿ ಹರಿಯ ಚಿಂತನೆ ಮೂಡುತ್ತಿಲ್ಲ, ಭಕ್ತಿಯ ಒರತೆ ಬತ್ತುತ್ತಿದೆ ಎಂದಾಗ ಪಠಿಸಬೇಕಾದ ದಿವ್ಯವಾದ ಸೋತ್ರ ಈ ಶುಕಗೀತೆ. ಆ ಪವಿತ್ರ ಸ್ತುತಿಯ ಅರ್ಥಾನುಸಂಧಾನದ ಕಡೆಯ ಭಾಗ ಇಲ್ಲಿದೆ. 

8074 Views
Upanyasas - VNU717

ಶ್ರೀಮದ್ ಭಾಗವತಮ್ — 167 — ಶುಕಗೀತೆ ೦೩ ಪತಿತಪಾವನ

ಸ್ತ್ರೀ ಶೂದ್ರರನ್ನು ಭಗವದ್ಗೀತೆ ಪಾಪಿಗಳು ಎಂದು ಕರೆಯುತ್ತದೆ. ಭಾಗವತ ಕಿರಾತ-ಹೂಣ ಮುಂತಾದವರನ್ನು ಭಾಗವತ ಪಾಪಿಗಳು ಎಂದು ಕರೆಯುತ್ತದೆ. ಈ ಮಾತುಗಳ ಅರ್ಥದ ಕುರಿತ ಚರ್ಚೆಯಿದೆ. ತಪ್ಪದೇ ಕೇಳಿ. 

7683 Views
Upanyasas - VNU716

ಶ್ರೀಮದ್ ಭಾಗವತಮ್ — 166 — ಶುಕಗೀತೆ ೦೨ ಸರ್ವಸಮರ್ಪಣೆ

ದೇವರಿಗೆ ಮಾಡುವ ಸರ್ವಸಮರ್ಪಣೆಯ ಮಹತ್ತ್ವವನ್ನು ಮನಗಾಣಿಸುವ ದಿವ್ಯವಚನಗಳ ಅರ್ಥಾನುಸಂಧಾನ. 

7439 Views
Upanyasas - VNU715

ಶ್ರೀಮದ್ ಭಾಗವತಮ್ — 165 — ಶುಕಗೀತೆ-1-ನಮಸ್ಕಾರದ ಮಹತ್ತ್ವ

ದೇವರ ಸೃಷ್ಟಿಕರ್ತೃತ್ವದ ಮಹಾಮಾಹಾತ್ಮ್ಯವನ್ನು ತಿಳಿಸಲು ಉದ್ಯುಕ್ತರಾದ ಶ್ರೀ ಶುಕಾಚಾರ್ಯರು ಬಹುಭಕ್ತಿಯಿಂದ ದೇವರ ಸ್ಮರಣೆಯನ್ನು ಮಾಡಿ ನಮಸ್ಕಾರಗಳನ್ನು ಸಲ್ಲಿಸುತ್ತಾರೆ. ಶುಕಗೀತೆಯೆಂದು ಪ್ರಸಿದ್ಧವಾದ ಆ ಸ್ತೋತ್ರದ ಮೊದಲ ಭಾಗದ ಅರ್ಥಾನುಸಂಧಾನ ಇಲ್ಲಿದೆ. 

7370 Views
Upanyasas - VNU714

ಶ್ರೀಮದ್ ಭಾಗವತಮ್ — 164 — ಜಗತ್ತಿಗೂ ದೇವರಿಗೂ ಇರುವ ಸಂಬಂಧ

ದೇವರ ಅಸ್ತಿತ್ವವನ್ನು ತಿಳಿಯುವದರಿಂದ ಆರಂಭಿಸಿ, ದೇವರ ಗುಣಗಳನ್ನು ತಿಳಿಯುವದಕ್ಕೆ, ದೇವರ ಅನುಗ್ರಹವನ್ನು ಪಡೆಯುವದಕ್ಕೆ, ಮೋಕ್ಷವನ್ನು ಪಡೆಯುವವರೆಗೆ ನಮಗೆ ಆವಶ್ಯಕವಾದದ್ದು ಈ ಜಗತ್ತು. ಅ ಸಮಗ್ರ ಪ್ರಪಂಚ ಯಾವ ಕಾರಣಕ್ಕಾಗಿ ಸೃಷ್ಟಿಯಾಗಿದೆಯೋ ಆ ಕಾರಣವನ್ನು ತಿಳಿದು ಭಜಿಸಬೇಕು ಎನ್ನುವ ಮಹತ್ತ್ವದ ಅಂಶವನ್ನು ನಾವಿಲ್ಲಿ ತಿಳಿಯುತ್ತೇವೆ. ಜಗತ್ತಿನ ಸತ್ಯತ್ವವನ್ನು ಆಚಾರ್ಯರೇಕೆ ತಮ್ಮ ಸಿದ್ಧಾಂತದಲ್ಲಿ ಅಷ್ಟು ಆದರದಿಂದ ಪ್ರತಿಪಾದಿಸುತ್ತಾರೆ ಎಂಬ ವಿಷಯದ ನಿರೂಪಣೆಯೊಂದಿಗೆ. 

7446 Views
Upanyasas - VNU713

ಶ್ರೀಮದ್ ಭಾಗವತಮ್ — 163 — ಶೌನಕರು ಕಲಿಸುವ ಪಾಠ

“ಶ್ರೇಯಾಂಸಿ ಬಹುವಿಘ್ನಾನಿ” ಯಾವುದೇ ಒಳ್ಳೆಯ ಕೆಲಸ ಮಾಡಬೇರಕಾದರೂ ವಿಘ್ನಗಳು ಇದ್ದೇ ಇರುತ್ತವೆ. ಇನ್ನು ಈ ಕಲಿಗಾಲದಲ್ಲಿ ಸಾಧನೆಯ ಮಾರ್ಗದಲ್ಲಂತೂ ವಿಘ್ನಗಳು ತುಂಬಿರುತ್ತವೆ. ಆ ವಿಘ್ನಗಳು ತಲೆದೋರಿದಾಗ ನಾವು ಅನುಸರಿಸಬೇಕಾದ ಮಾರ್ಗವನ್ನು ಶೌನಕರು ತೋರಿಸಿಕೊಡುತ್ತಾರೆ. ಆವರ ವಚನಗಳ ವಿವರಣೆ ಇಲ್ಲಿದೆ. 

6434 Views
Upanyasas - VNU712

ಶ್ರೀಮದ್ ಭಾಗವತಮ್ — 162 — ಬೇಡಿದರೆ ಎನ್ನೊಡೆಯನ ಬೇಡುವೆ

ಯಾವಯಾವ ದೇವತೆಯನ್ನು ಉಪಾಸನೆ ಮಾಡುವದರಿಂದ ಯಾವಯಾವ ಫಲಗಳುಂಟಾಗುತ್ತವೆ ಎನ್ನುವದನ್ನು ವಿಸ್ತಾರವಾಗಿ ತಿಳಿಸುವ ಶುಕಾಚಾರ್ಯರು ಪರಮಾತ್ಮನಲ್ಲಿ ಮಾಡುವ ಭಕ್ತಿಯಿಂದ ಸಕಲ ಐಹಿಕ ಫಲಗಳನ್ನೂ ಪಡೆಯಬಹುದು ಎನ್ನುವದನ್ನು ನಿರೂಪಿಸಿ ಶ್ರೀಮನ್ ನಾರಾಯಣನೇ ಸರ್ವಾರ್ಥಪ್ರದ, ಏನನ್ನು ಬೇಡಿದರೂ ಅವನಲ್ಲಿಯೇ ಬೇಡುವದೇ ಸರ್ವಶ್ರೇಷ್ಠ ಎನ್ನುವದನ್ನು ಮನೋಜ್ಞವಾಗಿ ನಿರೂಪಿಸುತ್ತಾರೆ. 

6969 Views
Upanyasas - VNU711

ಶ್ರೀಮದ್ ಭಾಗವತಮ್ — 161 — ಮುಕ್ತಿಯ ಮಾರ್ಗ

“ನೀನು ಪ್ರಶ್ನೆ ಮಾಡಿದ ಎರಡು ಮುಕ್ತಿಯ ಮಾರ್ಗಗಳು ಇವು” ಎಂದು ಶುಕಾಚಾರ್ಯರು ಹೇಳುತ್ತಾರೆ. ಪರೀಕ್ಷಿತರು ಯಾವಾಗ ಈ ಪ್ರಶ್ನೆಯನ್ನು ಮಾಡಿದರು, ಉತ್ತರದಲ್ಲಿ ಎರಡು ಮಾರ್ಗಗಳ ಉಲ್ಲೇಖ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ದೊರೆಯುವದು ಟೀಕಾಕೃತ್ಪಾದರ ನ್ಯಾಯಸುಧಾಗ್ರಂಥದಿಂದ. ಆ ವಚನಗಳ ವಿವರಣೆ ಇಲ್ಲಿದೆ. 

6763 Views
Upanyasas - VNU710

ಶ್ರೀಮದ್ ಭಾಗವತಮ್ — 160 — ಮಹಾಪ್ರಳಯ

ಭೂಮಿ ಮುಂತಾದ ಲೋಕಗಳು, ಬ್ರಹ್ಮಾಂಡ, ಅದರ ಆವರಣಗಳು ನಾಶವಾಗುವ ಕ್ರಮ, ಮುಕ್ತರು ನಿರ್ಭಯರಾಗಿ ಪ್ರಳಯವನ್ನು ಕಾಣುತ್ತಲೇ ಭಗವಂತನನ್ನು ಮುಕ್ತರಾದ ಜ್ಞಾನಿಗಳು ಪ್ರವೇಶ ಮಾಡುವ ಕ್ರಮದ ನಿರೂಪಣೆ ಇಲ್ಲಿದೆ.   ಇಲ್ಲಿಗೆ ಎರಡನೆಯ ಸ್ಕಂಧದ ಎರಡನೆಯ ಅಧ್ಯಾಯದ ಅರ್ಥಾನುಸಂಧಾನ ಮುಗಿಯುತ್ತದೆ. 

6245 Views
Upanyasas - VNU709

ಶ್ರೀಮದ್ ಭಾಗವತಮ್ — 159 — ಮಹರಾದಿ ಲೋಕಗಳ ಮಾಹಾತ್ಮ್ಯ

ಶಾಸ್ತ್ರಗಳು ಶೇಷದೇವರನ್ನು, ಕೂರ್ಮನನ್ನೂ ಜಗದಾಧಾರ ಎನ್ನುತ್ತವೆ, ಶಿಂಶುಮಾರನನ್ನೂ ಜಗದಾಧಾರ ಎನ್ನುತ್ತವೆ. ಈ ವಿರೋಧವನ್ನು ಪರಿಹಾರ ಮಾಡಿಕೊಳ್ಳುವ ಬಗೆಯೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ಮಹರ್ಲೋಕ, ಜನಲೋಕ, ತಪೋಲೋಕ, ಸತ್ಯಲೋಕಗಳ ಮಾಹಾತ್ಮ್ಯವನ್ನು ಕೇಳುತ್ತೇವೆ.   ಮಹರ್ಲೋಕದಲ್ಲಿ ಮೂರು ತರಹದ ಆಯುಷ್ಯವುಳ್ಳ ಜನರಿರುತ್ತಾರೆ. ಅದರ ವಿವರಣೆಯೊಂದಿಗೆ ಬ್ರಹ್ಮಜ್ಞಾನಿಗಳ ಶರೀರ ಯಾವ ರೀತಿ ಇರುತ್ತದೆ ಎನ್ನುವದರ ನಿರೂಪಣೆಯೂ ಇಲ್ಲಿದೆ. 

5960 Views
Upanyasas - VNU708

ಶ್ರೀಮದ್ ಭಾಗವತಮ್ — 158 — ವೈಶ್ವಾನರ ಲೋಕದಲ್ಲಿ ಪಾಪನಾಶ

ಅಪರೋಕ್ಷ ಜ್ಞಾನವಾಗುವಾಗಲೇ ಪಾಪಗಳು ನಾಶವಾಗುತ್ತವೆ ಎಂದು ತಿಳಿದೆವು. ಈಗ ಮತ್ತೆ ವೈಶ್ವಾನರಲೋಕ-ದೇವಲೋಕ-ಸೂರ್ಯಲೋಕ-ಅಥವಾ ಭೂಲೋಕದಲ್ಲಿಯೇ ಪಾಪ ನಾಶವನ್ನು ಮಾಡಿಕೊಳ್ಳಬೇಕು ಎಂದು ಭಾಗವತ ಹೇಳುತ್ತದೆ. ಯಾವ ಪಾಪ ಅದು ಹೇಗೆ ನಾಶವಾಗುತ್ತದೆ ಎನ್ನುವದರ ಪೂರ್ಣ ಇಲ್ಲಿದೆ.   ದೇವಯಾನ, ಪಿತೃಯಾನ, ಬ್ರಹ್ಮಯಾನ ಎಂಬ ಮೂರು ಮಾರ್ಗಗಳ ಮತ್ತು ಇಡಾ, ಪಿಂಗಳಾ, ಸುಷುಮ್ನಾ ನಾಡಿಗಳ ವಿವರಣೆಯೂ ಇಲ್ಲಿದೆ. 

6051 Views
Upanyasas - VNU707

ಶ್ರೀಮದ್ ಭಾಗವತಮ್ — 157 — ಜ್ಞಾನಿಗಳು ಪಡೆಯುವ ಲೋಕಗಳು

ಜೀವರು ಉತ್ಕ್ಕಾಂತರಾದ ಬಳಿಕ ಯಾವ ಲೋಕಗಳಿಗೆ ತೆರಳುತ್ತಾರೆ, ಯಾವ ರೀತಿ ಇರುತ್ತಾರೆ, ಯಾವಯಾವ ಲೋಕಗಳಿಗೆ ಹೋಗಲು ಯಾವರೀತಿಯ ಅರ್ಹತೆ ಈ ಜ್ಞಾನಿಗಳಿಗೆ ಇರಬೇಕು? ಆ ಲೋಕಗಳಲ್ಲಿ ಯಾವ ರೀತಿಯಾದ ಶರೀರವಿರುತ್ತದೆ? ಎನ್ನುವ ಪ್ರಶ್ನೆಗಳಿಗೆ ಅಪೂರ್ವ ವಿಷಯಗಳನ್ನೊಳಗೊಂಡ ಉತ್ತರಗಳನ್ನು ಇಲ್ಲಿ ತಿಳಿಯುತ್ತೇವೆ. 

6946 Views
Upanyasas - VNU706

ಶ್ರೀಮದ್ ಭಾಗವತಮ್ — 156 — ಉತ್ಕ್ರಾಂತಿ

ಮೂಲಾಧಾರದಿಂದ ಆರಂಭಿಸಿ ತಲೆಯವರೆಗೆ ಇರುವ ಕಮಲಗಳು, ಆ ಕಮಲಗಳ ಬಣ್ಣ, ಅವುಗಳ ದಳಗಳ ಸಂಖ್ಯೆ, ಅಲ್ಲಿರುವ ದೇವತೆಗಳು ಮತ್ತು ಪರಮಾತ್ಮನ ರೂಪಗಳ ನಿರೂಪಣೆಯೊಂದಿಗೆ ಜ್ಞಾನಿಗಳು ಉತ್ಕ್ರಾಂತಿಯಾಗುವ ಬಗೆಯನ್ನು ಇಲ್ಲಿ  ವಿವರಿಸಲಾಗಿದೆ.   ಶ್ರೀ ವಿಜಯದಾಸಾರ್ಯರ ದಿವ್ಯವಾದ ಸುಳಾದಿಗಳ ಉಲ್ಲೇಖ ಇಲ್ಲಿದೆ. ತಪ್ಪದೇ ಕೇಳಿ. 

5970 Views
Upanyasas - VNU705

ಶ್ರೀಮದ್ ಭಾಗವತಮ್ — 155 — ಲಯಚಿಂತನೆ

ಪುಷ್ಕರನಿಂದ ಆರಂಭಿಸಿ ಮುಖ್ಯಪ್ರಾಣದೇವರವರೆಗೆ ಸಕಲ ಕಲಾಭಿಮಾನಿ-ತತ್ವಾಭಿಮಾನಿ ದೇವತೆಗಳನ್ನು ಯಾವ ರೀತಿ ಚಿಂತನೆ ಮಾಡಬೇಕು, ಶ್ರೀಹರಿಯ ರೂಪಗಳನ್ನು ಯಾವ ರೀತಿ ಚಿಂತನೆ ಮಾಡಬೇಕು ಎಂಬ ವಿವರ ಇಲ್ಲಿದೆ, ಶ್ರೀ ವಿಜಯಧ್ವಜತೀರ್ಥಗುರುಸಾರ್ವಭೌಮರು ತಿಳಿಸಿರುವ ದಿವ್ಯವಾದ ಅರ್ಥವಿಶೇಷಗಳೊಂದಿಗೆ. 

5473 Views
Upanyasas - VNU704

ಶ್ರೀಮದ್ ಭಾಗವತಮ್ — 154 — ನರಕ ಭಯ ನಿವಾರಣ

ನರಕದ ಘೋರ ಭಯದಿಂದ ಪಾರು ಮಾಡಿ ಮೋಕ್ಷವನ್ನು ಕರುಣಿಸುವ ನಮ್ಮ ಅಂತರ್ಯಾಮಿಯನ್ನು ಹೇಗೆ ಧ್ಯಾನ ಮಾಡಬೇಕು ಎನ್ನುವದರ ವಿವರಣೆ ಇಲ್ಲಿದೆ.   ವೈತರಣೀ ಎಂಬ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಮಾಡಿರುವ ಅದ್ಭುತ ವ್ಯಾಖ್ಯಾನ ಮತ್ತು ದಾಸಸಾಹಿತ್ಯ ನಮ್ಮ ಮೇಲೆ ಮಾಡುವ ದಿವ್ಯ ಪರಿಣಾಮದ ಚಿತ್ರಣದೊಂದಿಗೆ. 

6034 Views
Upanyasas - VNU703

ಶ್ರೀಮದ್ ಭಾಗವತಮ್ — 153 — ಆನಂದನಿಧಿ

ಧ್ಯಾನವನ್ನು ಮಾಡುವ ಮುನ್ನ ನಮಗಿರಬೇಕಾದ ಎಚ್ಚರಗಳು ಮತ್ತು ಮಾಡಬೇಕಾದರೆ ಇರಲೇಬೇಕಾದ ಅನುಸಂಧಾನಗಳನ್ನು, ಹಾಗೂ ಅವಶ್ಯವಾಗಿ ಉಪಾಸನೆ ಮಾಡಬೇಕಾದ ಗುಣಗಳನ್ನು ಈ ಭಾಗದಲ್ಲಿ ತಿಳಿಯುತ್ತೇವೆ.   ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರ ಅದ್ಭುತ ವ್ಯಾಖ್ಯಾನ ಕೌಶಲವನ್ನು ಮನಗಾಣಿಸುವಂತಹ ಅನೇಕ ಅಂಶಗಳನ್ನು ಇಲ್ಲಿ ಕೇಳುತ್ತೇವೆ. 

5503 Views
Upanyasas - VNU702

ಶ್ರೀಮದ್ ಭಾಗವತಮ್ — 152 — ದೇವರೆಂಬ ಪ್ರಿಯ ವಸ್ತು

ದೇವರ ಮತ್ತು ನಮ್ಮ ಮಧ್ಯದಲ್ಲಿರುವ ಪ್ರೇಮ ಎಂಬ ಭಾವನೆಯ ಕುರಿತ ದಿವ್ಯಚಿತ್ರಣದೊಂದಿಗೆ ದೇವರನ್ನು ಯಾಕಾಗಿ ಮತ್ತು ಹೇಗೆ ಧ್ಯಾನ ಮಾಡಬೇಕು ಎನ್ನುವ ವಿಷಯಗಳ ಪ್ರತಿಪಾದನೆ ಇಲ್ಲಿದೆ.   ಅವಧೂತರೇಕೆ ಅನ್ನ ಆಹಾರ ಬಟ್ಟೆಗಳನ್ನೂ ತ್ಯಜಿಸಿ ಬದುಕುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಭಗವಾನ್ ಎಂಬ ಶಬ್ದದ ಅರ್ಥದ ಚಿತ್ರಣದೊಂದಿಗೆ.  

6294 Views
Upanyasas - VNU701

ಶ್ರೀಮದ್ ಭಾಗವತಮ್ — 151 — ಅವಧೂತರ ಚರ್ಯೆ

ವೈರಾಗ್ಯದ ಉತ್ತುಂಗಾವಸ್ಥೆ ಎಂದರೆ ಅವಧೂತಚರ್ಯೆ. ಅಂತಹ ಅವಧೂತಶಿರೋಮಣಿಗಳು ಯಾವ ರೀತಿ ದೇಹದ ಮೇಲೆ ಸಕಲಾಭಿಮಾನವನ್ನೂ ತೊರೆದು ಬದುಕುತ್ತಾರೆ ಎನ್ನುವದರ ಚಿತ್ರಣ ಇಲ್ಲಿದೆ.   ಅವಧೂತಚರ್ಯೆ ಎನ್ನುವದು ಸಂನ್ಯಾಸಿಗಳಿಗೆ ಮಾತ್ರ, ಗೃಹಸ್ಥರಿಗಲ್ಲ, ಸ್ತ್ರೀಯರಿಗಂತೂ ಸರ್ವಥಾ ಅಲ್ಲ ಎಂಬಿತ್ಯಾದಿ ಅಂಶಗಳ ವಿವರಣೆಯೂ ಇಲ್ಲಿದೆ. 

6325 Views
Upanyasas - VNU700

ಶ್ರೀಮದ್ ಭಾಗವತಮ್ — 150 — ಮಾತು ಅಧಿಕವಾದರೆ ಆತ್ಮಘಾತ

ಮಾತಿನಿಂದಲೇ ಮೋಕ್ಷ, ಮಾತಿನಿಂದಲೇ ಸಂಸಾರ, ಮಾತಿನಿಂದಲೇ ತಮಸ್ಸು ಎನ್ನುವ ತತ್ವವನ್ನು ನಾವಿಲ್ಲಿ ವಿಸ್ತಾರವಾಗಿ ತಿಳಿಯುತ್ತೇವೆ. ದುಷ್ಟ ವಿಷಯಗಳ ಕುರಿತು ಮಾತನಾಡುವದು ದೂರ ಉಳಿಯಿತು, ಆವಶ್ಯಕತೆಗಿಂತ ಹೆಚ್ಚು ಮಾತನಾಡುವದೇ ಆತ್ಮನಾಶಕ್ಕೆ ದಾರಿ ಎನ್ನುವ ಭಾಗವತದ ರಹಸ್ಯದ ಪ್ರಮೇಯವನ್ನು ನಾವಿಲ್ಲಿ ತಿಳಿಯುತ್ತೇವೆ.

5656 Views
Upanyasas - VNU699

ಶ್ರೀಮದ್ ಭಾಗವತಮ್ — 149 — ದೇವರ ಸರ್ವಶಬ್ದವಾಚ್ಯತ್ವ

ಎಲ್ಲ ಶಬ್ದಗಳೂ ದೇವರ ಹೆಸರು ಹೇಗಾಗಲು ಸಾಧ್ಯ ಎನ್ನುವದಕ್ಕೆ ಶಾಸ್ತ್ರ ತಿಳಿಸುವ ಆರು ಕಾರಣಗಳ ವಿವರಣೆಯೊಂದಿಗೆ ದೇವರನ್ನು ಸರ್ವಶಬ್ದವಾಚ್ಯ ಎಂದು ಒಪ್ಪುವದರಿಂದ ಉಂಟಾಗುವ ಮಹತ್ತರ ಪ್ರಯೋಜನದ ಕುರಿತು ನಾವಿಲ್ಲಿ ಕೇಳುತ್ತೇವೆ.   ವೇದಗಳು ಕೋಟಿ ಕೋಟಿ ದೇವರನ್ನು ಹೇಳುತ್ತವೆ ಎಂದು ಲೇವಡಿ ಮಾಡುವ ಜನರಿಗೆ, ವೇದಗಳಲ್ಲಿ ಕೋಟಿ ದೇವರು ದೂರ ಉಳಿಯಿತು ಇಬ್ಬರು ದೇವರನ್ನೂ ಸಹ ವೇದಗಳು ಉಲ್ಲೇಖಿಸುವದಿಲ್ಲ, ವೇದಗಳು ಹೇಳುವದು ಕೇವಲ ಒಬ್ಬ ದೇವರನ್ನು ಮಾತ್ರ ಎನ್ನುವ ಉತ್ತರದ ವಿವರಣೆ ಇಲ್ಲಿದೆ. 

5950 Views
Upanyasas - VNU678

ಶ್ರೀಮದ್ ಭಾಗವತಮ್ — 148 — ವಿರಾಡ್ರೂಪದ ಚಿಂತನೆಯ ಫಲ

ಬ್ರಹ್ಮದೇವರು ಸಮಗ್ರ ಹದಿನಾಲ್ಕು ಲೋಕಗಳನ್ನು ಸೃಷ್ಟಿ ಮಾಡು ಜ್ಞಾನ-ಸಾಮರ್ಥ್ಯಗಳನ್ನು ಪಡೆದದ್ದು ಈ ವೈರಾಜಪುರುಷದ ಧ್ಯಾನದಿಂದಲೇ ಎಂಬ ಅತ್ಯಪೂರ್ವಪ್ರಮೇಯವನ್ನು ಶುಕಾಚಾರ್ಯರು ತಿಳಿಸುತ್ತಾರೆ. ಮನುಷ್ಯನ ಸಮಸ್ತ ಮನೋದೋಷಗಳ ವಿನಾಶ ಮತ್ತು ಸಕಲ ಕರ್ಮಗಳಿಗೂ ಅನಂತಫಲ ಉಂಟಾಗುವದು ವಿರಾಡ್ರೂಪದ ಚಿಂತನೆಯಿಂದ ಎನ್ನುವ ತತ್ವದ ವಿವರಣೆ ಇಲ್ಲಿದೆ. 

5823 Views
Upanyasas - VNU677

ಶ್ರೀಮದ್ ಭಾಗವತಮ್ — 147 — ವಿರಾಡ್ರೂಪದ ವರ್ಣನೆ

ಹದಿನಾಲ್ಕು ಲೋಕಗಳಲ್ಲಿ ವ್ಯಾಪಿಸಿ ನಿಂತ ಶ್ರೀಮನ್ನಾರಾಯಣನ ಪರಮಮಂಗಳ ವೈರಾಜ ರೂಪದ ವರ್ಣನೆ ಇಲ್ಲಿದೆ.   ಇಲ್ಲಿಗೆ ಎರಡನೆಯ ಸ್ಕಂಧದ ಪ್ರಥಮಾಧ್ಯಾಯ ಮುಗಿಯುತ್ತದೆ. 

7186 Views
Upanyasas - VNU676

ಶ್ರೀಮದ್ ಭಾಗವತಮ್ — 146 — ಅಂತ್ಯಕಾಲದ ಸಾಧನೆ

ಮರಣ ಕಾಲ ಬಂದೊದಗಿದಾಗ ಅದೆಷ್ಟು ಎತ್ತರದ ಸಾಧನೆಯನ್ನು ಮಾಡಬೇಕು ಎಂದು ಶುಕಾಚಾರ್ಯರು ಉಪದೇಶಿಸುತ್ತಾರೆ, ನಮ್ಮ ಶ್ರೀಮದಾಚಾರ್ಯರ ಪವಿತ್ರ ಪರಂಪರಗಳಲ್ಲಿ ಬಂದ ಶ್ರೀಹೃಷೀಕೇಶತೀರ್ಥ ಶ್ರೀಪಾದಂಗಳವರೇ ಮೊದಲಾದ ಮಹಾನುಭಾವರು ಈ ಭಾಗವತಾದೇಶವನ್ನು ಅದೆಷ್ಟು ಅದ್ಭುತವಾಗಿ ಪಾಲಿಸಿದರು, ನಾವೆಷ್ಟು ಕೆಳಮಟ್ಟದಲ್ಲಿದ್ದೇವೆ, ಏರಬೇಕಾದ ಎತ್ತರವೇನು ಎಂಬ ವಿಷಯಗಳ ವಿವರಣೆಯನ್ನೊಳಗೊಂಡ ಭಾಗ. 

6614 Views
Upanyasas - VNU675

ಶ್ರೀಮದ್ ಭಾಗವತಮ್ — 145 — ವೃದ್ಧಾಪ್ಯ ಹೇಗಿರಬೇಕು

ಅಂತ್ಯಕಾಲ ಸಮೀಪಿಸಿದಾಗ ಸಾವಿನ ಭಯ ಬಿಡಬೇಕು ಎನ್ನುತ್ತಾರೆ ಶ್ರೀ ಶುಕಾಚಾರ್ಯರು.  ಸಾವಿನ ಭಯ ಹೋಗಬೇಕಾದರೆ ಏನು ಮಾಡಬೇಕು ಎನ್ನುವದಕ್ಕೆ ಭಗವದ್ಗೀತೆ ಮುಂತಾದ ಶಾಸ್ತ್ರಗಳಲ್ಲಿ ಭಗವಂತ ತಿಳಿಸಿದ, ಅನುಭಾವಿಗಳು ತಮ್ಮ ಕೃತಿಗಳಲ್ಲಿ ತಿಳಿಸಿದ ಮಹತ್ತ್ವದ ವಿಷಯಗಳನ್ನು ನಿರೂಪಿಸಿ ನಮ್ಮ ಯೋಗ್ಯತೆಯಂತೆ ನಮ್ಮ ವೃದ್ಧಾಪ್ಯವನ್ನು ನಾವು ಹೇಗೆ ರೂಪಿಸಿಕೊಳ್ಳಬೇಕು ಎನ್ನುವದರ ಕುರಿತು ಚರ್ಚಿಸಲಾಗಿದೆ. 

6879 Views
Upanyasas - VNU669

ಶ್ರೀಮದ್ ಭಾಗವತಮ್ — 144 — ಭಾಗವತವೆಂಬ ಅಯಸ್ಕಾಂತ

ದೇವರ ಕಥೆಯನ್ನು ಯಾಕಾಗಿ ಕೇಳಬೇಕು ಎನ್ನುವದಕ್ಕೆ ಶುಕಾಚಾರ್ಯರು ನೀಡಿರುವ ಅದ್ವಿತೀಯವಾದ, ನಮ್ಮನ್ನು ಕಥಾಶ್ರವಣದಲ್ಲಿ ಆಸಕ್ತರನ್ನಾಗಿ ಮಾಡುವ ಸ್ಫೂರ್ತಿದಾಯಕ ಉತ್ತರಗಳ ವಿವರಣೆ ಇಲ್ಲಿದೆ. ಎಲ್ಲವನ್ನೂ ತೊರೆದ ಮಹಾಸಾಧಕರಾದ ಶುಕಾಚಾರ್ಯರು ತಾವೇಕೆ ಭಾಗವತವನ್ನು ಅಧ್ಯಯನವನ್ನು ಮಾಡಿದೆವು ಎಂದು ವಿವರಿಸಿರುವ ಭಾಗ. 

7665 Views
Upanyasas - VNU667

ಶ್ರೀಮದ್ ಭಾಗವತಮ್ — 143 — ಅಂತಿಮ ಸ್ಮರಣೆಯ ಮಾಹಾತ್ಮ್ಯ

ಅಂತಿಮಕಾಲದ ಸ್ಮರಣೆಯಲ್ಲಿನ ವೈವಿಧ್ಯಗಳು, ಆ ವಿವಿಧ ಕ್ರಮಗಳಿಂದ ಉಂಟಾಗುವ ವಿವಿಧ ಫಲಗಳು, ಕಟ್ಟ ಕಡೆಯಲ್ಲಿ ಸ್ಮರಣೆ ಬರಬೇಕಾದರೆ ಏನು ಮಾಡಬೇಕು ಎನ್ನುವ ವಿಷಯಗಳ ವಿವರಣೆ ಇಲ್ಲಿದೆ. ಮಹಾ ಪ್ರಯತ್ನ ಮಾಡಿ ಕಡೆಯಲ್ಲಿ ಸ್ಮರಣೆ ಮಾಡಿದರೆ ಸಾಕಲ್ಲವೇ, ಇಡಿಯ ಜನ್ಮ ಯಾಕಾಗಿ ಪ್ರಯತ್ನ  ಪಡಬೇಕು ಎಂಬ ಪ್ರಶ್ನೆಗೆ ಆಚಾರ್ಯರು ಗೀತಾತಾತ್ಪರ್ಯನಿರ್ಣಯದಲ್ಲಿ ನೀಡಿರುವ ದಿವ್ಯ ಉತ್ತರದ ಚಿಂತನೆಯೊಂದಿಗೆ. 

6169 Views
Upanyasas - VNU666

ಶ್ರೀಮದ್ ಭಾಗವತಮ್ — 142 — ಸ್ವಧರ್ಮನಿಷ್ಠೆ

ಅಂತ್ಯಕಾಲದಲ್ಲಿ ಹರಿಯ ಸ್ಮರಣೆ ಬರಬೇಕಾದರೆ ಬೇಕಾದ ಸ್ವಧರ್ಮ ನಿಷ್ಠೆಯ ಕುರಿತು ನಾವಿಲ್ಲಿ ಕೇಳುತ್ತೇವೆ. ಬ್ರಾಹ್ಮಣ ಶೂದ್ರ ನಂತೆ ಬದುಕುವದು, ಶೂದ್ರ ಬ್ರಾಹ್ಮಣನಂತೆ ಬದುಕುವದು, ಸಂನ್ಯಾಸಿ ಗೃಹಸ್ಥನಂತೆ, ಗೃಹಸ್ಥ ಸಂನ್ಯಾಸಿಯಂತೆ ಬದುಕುವದು ಅಂತ್ಯಕಾಲದ ಹರಿಸ್ಮರಣೆಗೆ ವಿರೋಧಿಯಾದದ್ದು ಎನ್ನುವದನ್ನು ಶ್ರೀ ಶುಕಾಚಾರ್ಯರು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತಾರೆ. ಆ ಭಾಗದ ವಿವರಣೆ ಇಲ್ಲಿದೆ. 

8730 Views
Upanyasas - VNU665

ಶ್ರೀಮದ್ ಭಾಗವತಮ್ — 141 — ಶುಕಾಚಾರ್ಯರ ಉತ್ತರ

ತನ್ನ ಉದ್ಧಾರಕ್ಕಾಗಿ ಮನುಷ್ಯ ಅರಿಯಬೇಕಾದ್ದೇನು ಎಂಬ ಪ್ರಶ್ನೆಗೆ, ದೇವರನ್ನು ಅರಿಯಬೇಕು ಎಂಬ ಉತ್ತರವನ್ನು ಶುಕಾಚಾರ್ಯರು ನೀಡುವ ರೀತಿಯೇ ಅದ್ಭುತ. ಹಾಳು ಹರಟೆಯಿಂದ, ಕೆಲಸಕ್ಕೆ ಬಾರದ ವಿಷಯಗಳಲ್ಲಿನ ಆಸಕ್ತಿಯಿಂದ ಬದುಕು ಹಾಳಾಗುತ್ತದೆ ಎಂದು ನಾವು ಭಾವಿಸಿದ್ದರೆ, ಧರ್ಮನಿಷ್ಠವಾದ ಬದುಕನ್ನು ಕಂಡು ಬೆರಗಾಗುತ್ತಿದ್ದರೆ, ದೇವರ ಚಿಂತನೆಯಿಲ್ಲದ ಧಾರ್ಮಿಕತೆಯಿಂದ ಯಾವ ಉಪಯೋಗವೂ ಇಲ್ಲ ಎನ್ನುವದನ್ನು ಆ ಬಾದರಾಯಣಪುತ್ರರು ಅದ್ಭುತವಾಗಿ ಮನಗಾಣಿಸುತ್ತಾರೆ. ಅವರ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. 

7679 Views